ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರೀತಿಸುವ ನೆಪದಲ್ಲಿ ಯುವತಿ ಹೆಣೆದಿದ್ದ ಹನಿಟ್ರ್ಯಾಪ್ (HoneyTrap) ಖೆಡ್ಡಕ್ಕೆ ಯುವಕನೊಬ್ಬ ಬಿದ್ದು, ಸಾವಿರಾರು ರೂಪಾಯಿ ಹಣ ಕಳೆದುಕೊಂಡಿದ್ದಾನೆ.ಹೌದು, ಬೆಂಗಳೂರಿನ ಸುದ್ದಗುಂಟೆಪಾಳ್ಯ (Suddagunte Palya) ನಿವಾಸಿಯಾಗಿರುವ ದಿಲೀಪ್ ಕುಮಾರ್ ಎಂಬ ವ್ಯಕ್ತಿ ಮೊಬೈಲ್‍ಗೆ ಒಂದು ದಿನ ಹಾಯ್ ಎಂಬ ಮೆಸೇಜ್ ಬಂದಿತ್ತು. ಆ ಮೆಸೇಜ್ ನೋಡಿದ ದಿಲೀಪ್ ಕುಮಾರ್, ಡಿಪಿ ನೋಡಿ ಫುಲ್ ಖುಷ್ ಆಗಿದ್ದನು. ಯಾಕೆಂದರೆ ಅಲ್ಲಿ ಸುಂದರವಾದ ಯುವತಿಯ ಡಿಪಿ ಕಾಣಿಸಿತ್ತು. ಆ ಮಸೇಜ್‍ಗಳು ಮುಂದುವರೆದು, ಎಲೆಕ್ಟ್ರಾನಿಕ್ ಸಿಟಿ ಬಳಿಯ ಖಾಸಗಿ ಹೋಟೆಲ್‍ವೊಂದರಲ್ಲಿ ಮೀಟ್ ಮಾಡಲು ಇಬ್ಬರು ನಿರ್ಧರಿಸಿದರು. ಫಸ್ಟ್ ಟೈಂ ಹುಡುಗಿಯನ್ನು ಮೀಟ್ ಮಾಡುವ ಖುಷಿಯಲ್ಲಿ ಯುವಕ ಕೂಡ, ಸ್ನೇಹಿತನ ಕಾರು ತೆಗೆದುಕೊಂಡು ಟಿಪ್ ಟಾಪ್ ಆಗಿ ರೆಡಿಯಾಗಿ ಹೋಟೆಲ್‍ಗೆ ಹೋಗಿದ್ದನು. ರೂಮ್ ಒಳಗೆ ಹೋದ ಯುವಕ ಹುಡುಗಿಯ ಜೊತೆಗೆ ಕೂತು, ಮಾತು ಶುರುಮಾಡಿದನು. ಆದರೆ ಅಷ್ಟರಲ್ಲಿ ಮೂವರು ಯುವಕರ ತಂಡ ಏಕಾಏಕಿ ರೂಮ್ ಒಳಗೆ ನುಗ್ಗಿದ್ದಾರೆ. ಇದನ್ನೂ ಓದಿ: ಟಗರು ಗುದ್ದಿ ಕೊಟ್ಟಿಗೆಯಲ್ಲಿ ಲಾಕ್ ಆದ ಚಿರತೆ – ಕೆಆರ್‌ಎಸ್‌ನ ಬೃಂದಾವನದಲ್ಲಿ ಅಂತ್ಯವಾಗದ ಆತಂಕ ಹೀಗೆ ರೂಮ್ ಒಳಗೆ ಬಂದ ಮೂವರು, ಇಬ್ಬರನ್ನು ಒಟ್ಟಿಗೆ ಕೂರಿಸಿ, ಒಂದಷ್ಟು ವೀಡಿಯೋಗಳನ್ನು ಮಾಡಿಕೊಂಡರು. ನಂತರ ಪ್ರದೀಪ್ ಕುಮಾರ್ ಮೇಲೆ ಹಲ್ಲೆ ಮಾಡಿ, ಜೇಬಿನಲ್ಲಿದ್ದ 20 ಸಾವಿರ ಹಣ, ಐಫೋನ್, ಕಾರಿನ ಕೀ ಕಿತ್ತುಕೊಂಡು, ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಭಯದಲ್ಲಿದ್ದ ಪ್ರದೀಪ್ ಕುಮಾರ್, ಸ್ನೇಹಿತನಿಂದ ಮತ್ತೆ 25 ಸಾವಿರ ಹಣ ಗೂಗಲ್ ಪೇ ಮಾಡಿಸಿಕೊಂಡು ಆರೋಪಿಗಳ ಕೈಗೆ ಕೊಟ್ಟು ಸೈಲೆಂಟ್ ಆಗಿ ಮನೆ ಸೇರಿಕೊಂಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಆರೋಪಿಗಳು, ಮತ್ತಷ್ಟು ಹಣ ನೀಡದೇ ಇದ್ದರೆ ಅಶ್ಲೀಲ ವೀಡಿಯೋಗಳನ್ನು ಹರಿಬಿಡುವುದಾಗಿ ಬೆದರಿಸುವುದಕ್ಕೆ ಶುರುಮಾಡಿದ್ದಾರೆ. ಬೇರೆ ವಿಧಿ ಇಲ್ಲದೇ, ಹಲ್ಲೆಗೊಳಗಾದ ಪ್ರದೀಪ್ ಸುದ್ದಗುಂಟೆಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇದೀಗ ಪ್ರೀತಿಯ ನಾಟಕವಾಡಿದ್ದ ಯುವತಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.ನಮ್ಮ ಹುಡುಗಿಯದ್ದೇನು ತಪ್ಪಿಲ್ಲ ಎಂದು ಹೇಳುತ್ತಿದ್ದ ಲವರ್ ಬಾಯ್, ಪ್ರದೀಪ್‍ಗೆ ಇದೀಗ ಯುವತಿಯೇ ತನಗೆ ಖೆಡ್ಡ ತೋಡಿದ್ದು ಅಂತಾ ತಿಳಿದು ಶಾಕ್ ಆಗಿದ್ದಾನೆ. ಅತ್ತ ಕಡೆ ಹನಿಟ್ರ್ಯಾಪ್ ಗ್ಯಾಂಗ್‌ನ ಬಂಧಿಸಿರುವ ಪೊಲೀಸರಿಗೆ ಮತ್ತಷ್ಟು ಹನಿಟ್ರ್ಯಾಪ್‍ಗಳು ಮಾಡಿರುವ ಬಗ್ಗೆ ಸಾಕ್ಷಿಗಳು ಸಿಕ್ಕಿದ್ದು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಚನ್ನಮ್ಮಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೊಟ್ಟರೆ ಪ್ರತಿಭಟನೆ ಮಾಡ್ತೀವಿ: ಪ್ರಮೋದ್ ಮುತಾಲಿಕ್
Sign in to your account
Username or Email Address


Password

 Remember Me


