ಶಿವಮೊಗ್ಗ: ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗದ (Shivamogga) ಅಶ್ವತ್ಥ್ ನಗರದಲ್ಲಿ ನಡೆದಿದೆ.ನವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತೆ. ಈಕೆ 5 ತಿಂಗಳ ಹಿಂದೆ ಆಕಾಶ್ ಎಂಬ ಯುವಕನ ಜೊತೆ ವಿವಾಹವಾಗಿದ್ದಳು ಜೊತೆಗೆ ನಗರದ ಖ್ಯಾತ ವೈದ್ಯೆ ಡಾ. ಜಯಶ್ರೀ ಹೊಮ್ಮರಡಿ ಅವರ ಸೊಸೆಯಾಗಿದ್ದಳು.ನಿನ್ನೆ ರಾತ್ರಿ ನವ್ಯಶ್ರೀ ತುಳಸಿ ಪೂಜೆ ಮಾಡಿ, ಅರಿಶಿನ, ಕುಂಕುಮ ಸ್ವೀಕರಿಸಿ ಬಂದಿದ್ದಳು. ಬಳಿಕ ಕಾರ್ ಶೆಡ್‍ನಲ್ಲಿ ನೇಣು ಬಿಗಿದು, ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನೆಗೆ ಸಂಬಂಧಿಸಿ ಆಕೆಯ ಕುಟುಂಬಸ್ಥರು ಮಾತನಾಡಿ, ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ನವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರೇಣುಕಾಚಾರ್ಯ ಸಹೋದರ ಪುತ್ರನ ಸಾವು ಪ್ರಕರಣ ಎಲ್ಲಾ ಆಯಾಮಗಳಲ್ಲೂ ತನಿಖೆಗೆ ಸೂಚನೆ – ಸಿಎಂಇನ್ನೂ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನವ್ಯಶ್ರೀಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ಘಟನೆಯ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಕಾರಿನಲ್ಲಿ ಜಗಳ – ಪ್ರಶ್ನಿಸಿದ ಪತ್ರಕರ್ತನಿಗೆ ಮಹಿಳೆಯಿಂದ ಕಪಾಳಮೋಕ್ಷ
Sign in to your account
Username or Email Address


Password

 Remember Me


