ಓಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ (Bigg Boss House) ಮೋಡಿ ಮಾಡಿದ್ದ ಸ್ಪರ್ಧಿ ಸಾನ್ಯ ಅಯ್ಯರ್ (Sanya Iyer) ಇದೀಗ ಮನೆಯಿಂದ ಹೊರಬಂದಿದ್ದಾರೆ. ಬಿಗ್ ಬಾಸ್‌ನ 6ನೇ ವಾರಕ್ಕೆ ಸಾನ್ಯ ಆಟ ಅಂತ್ಯವಾಗಿದೆ.ಕಿರುತೆರೆಯ ಪುಟ್ಟಗೌರಿಯಾಗಿ(PuttaGowri) ಅಪಾರ ಅಭಿಮಾನಿಗಳ ಮನಗೆದ್ದ ಕಲಾವಿದೆ ಸಾನ್ಯ ಅಯ್ಯರ್, ಓಟಿಟಿ ಸೀಸನ್(Bigg Boss Ott) ಮತ್ತು ಟಿವಿ ಬಿಗ್ ಬಾಸ್‌ನಲ್ಲಿ(Bigg Boss) ಸಖತ್ ಹೈಲೈಟ್ ಆಗಿದ್ದರು. ಟಾಸ್ಕ್, ಮನರಂಜನೆ, ಹೀಗೆ ಎಲ್ಲಾ ವಿಚಾರದಲ್ಲೂ ಸ್ಪರ್ಧಿಯಾಗಿ ಸಾನ್ಯ ಸೈ ಎನಿಸಿಕೊಂಡಿದ್ದರು.‌ ಸಾನ್ಯ ಮಾತನಾಡುವ ಸ್ಪಷ್ಟ ಕನ್ನಡ ವೀಕ್ಷಕರಿಗೆ ಮೆಚ್ಚುಗೆ ಆಗಿತ್ತು. ಇದೀಗ ಸಾನ್ಯ ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.ಟಿವಿ ಬಿಗ್ ಬಾಸ್‌ನಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಸಾನ್ಯ ಅಯ್ಯರ್ ಗುರುತಿಸಿಕೊಂಡಿದ್ದರು. ಜೊತೆಗೆ ರೂಪೇಶ್ ಶೆಟ್ಟಿ(Roopesh Shetty) ಜೊತೆಗಿನ ಫ್ರೆಂಡ್‌ಶಿಪ್ ವಿಷ್ಯವಾಗಿ ಸಾನ್ಯ ಹೈಲೈಟ್ ಆಗಿದ್ದರು. ಓಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ಇವರಿಬ್ಬರ ನಡುವಿನ ಗೆಳೆತನ ಗಟ್ಟಿಯಾಗುತ್ತಲೇ ಬಂದಿತ್ತು. ಇದೀಗ ಸಾನ್ಯ ಎಲಿಮಿನೇಟ್ ಆಗಿರೋದು ರೂಪೇಶ್ ಸೇರಿದಂತೆ ಮನೆ ಮಂದಿಗೆ ಶಾಕ್ ಕೊಟ್ಟಿದೆ. ಇದನ್ನೂ ಓದಿ:ರಾಜಕೀಯಕ್ಕೆ ಎಂಟ್ರಿ ಕೊಡ್ತೀರಾ..?- ರಾಕಿಂಗ್ ಸ್ಟಾರ್ ಯಶ್ ಹೇಳಿದ್ದು ಹೀಗೆಪುಟ್ಟಗೌರಿಯ ಗಟ್ಟಿ ಆಟವನ್ನ ಮೆಚ್ಚಿಕೊಂಡಿರುವ ಆಕೆಯ ಅಭಿಮಾನಿಗಳಿಗೂ ಶಾಕ್ ಕೊಟ್ಟಿದೆ. ದೊಡ್ಮನೆಯಿಂದ 6ನೇ ವಾರಕ್ಕೆ ಸಾನ್ಯ ಔಟ್ ಆಗಿದ್ದಾರೆ. ಇನ್ನೂ ನಟಿಯ ಮುಂದಿನ ಸಿನಿಪಯಣಕ್ಕೆ ಶುಭವಾಗಲಿ ಎಂಬುದೇ ಅಭಿಮಾನಿಗಳ ಆಶಯ.
Sign in to your account
Username or Email Address


Password

 Remember Me


