ಕೋಲಾರ: ಮಾಲೂರು ಮಾಜಿ ಶಾಸಕ ಮಂಜುನಾಥಗೌಡ (Manjunath Gowda) ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಅತಿರೇಕದಿಂದ ವರ್ತಿಸಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.ಶುಕ್ರವಾರ ಸಂಜೆ ಬಂಗಾರಪೇಟೆಯಿಂದ (Bangarapete) ಮಾಲೂರು ತಾಲೂಕಿನ ಟೇಕಲ್ ಬಳಿಗೆ ಕೆಂಪೇಗೌಡ ರಥ ಬಂದ ವೇಳೆ ಪೊಲೀಸರನ್ನು ತಳ್ಳಿ ಬಿಜೆಪಿ ಮುಖಂಡನ ಮೇಲೆ ಹಲ್ಲೆ ಮಾಡಿರುವ ವೀಡಿಯೋ ಹಾಗೂ ಹೊಸಕೋಟೆ ರೌಡಿಯಿಸಂ ಎಂದು ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: ಕಾಂಗ್ರೆಸ್‍ನವರಿಗೆ ಧ್ಯಾನ ಅಂದ್ರೆ ಸೋನಿಯಾ, ರಾಹುಲ್ ಗಾಂಧಿಯೇ ಆಗಿದೆ: ಪ್ರಹ್ಲಾದ್ ಜೋಶಿಕೆಂಪೇಗೌಡ ರಥ ಚಲಾಯಿಸುತ್ತಿದ್ದ ಚಾಲಕನ ಮೇಲೂ ಹಲ್ಲೆ ಮಾಡಿ ಕೆಳಗಿಳಿಸಿ ತಾನೇ ರಥದ ವಾಹನ ಚಲಾವಣೆ ಮಾಡಿದ್ದು ಬಿಜೆಪಿ (BJP) ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ವಿಶೇಷ ಎಂದರೆ ಇಷ್ಟೆಲ್ಲಾ ಸಂಸದ ಮುನಿಸ್ವಾಮಿ ಎದುರೇ ನಡೆದಿದ್ದು, ಮುನಿಸ್ವಾಮಿ ಮಾತಿಗೂ ಕೇರ್ ಮಾಡದೇ ನುಗ್ಗುವ ಮಾಜಿ ಶಾಸಕನ ದೌರ್ಜನ್ಯದ ವಿರುದ್ಧ ಜನ ಎಚ್ಚೆತ್ತುಕೊಳ್ಳಬೇಕು ಎಂದು ಎಲ್ಲೆಡೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹರಿ ಬಿಡಲಾಗಿದೆ. ಇದನ್ನೂ ಓದಿ: ಬಾಡಿಗೆ ತಾಯ್ತನ ಮೂಲಕ ಮಗ-ಸೊಸೆಯ ಮಗುವಿಗೆ ಜನ್ಮ ಕೊಟ್ಟ ಅಜ್ಜಿಕೆಂಪೇಗೌಡ ರಥಯಾತ್ರೆಗೆ ಸ್ವಾಗತಿಸುವ ವೇಳೆಯಲ್ಲಿ ಬಿಜೆಪಿ ಎರಡು ಗುಂಪುಗಳ ನಡುವೆ ನಿನ್ನೆ ಸಂಜೆ ಮಾರಾಮಾರಿ ನಡೆದಿತ್ತು. ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ಹಾಗೂ ಮಾಜಿ ಶಾಸಕ ಮಂಜುನಾಥಗೌಡ ಬಣಗಳ ನಡುವೆ ಮಾರಾಮಾರಿ ತಳ್ಳಾಟ ನೂಕಾಟ ನಡೆದು ದೊಡ್ಡ ಹೈಡ್ರಾಮಾವೇ ನಡೆದಿತ್ತು. ರಥಯಾತ್ರೆಗೆ ಕಳಶಗಳೊಂದಿಗೆ ಸ್ವಾಗತಕ್ಕೆ ಮಾಡಲಾಗಿದ್ದ ಸಿದ್ಧತೆಯನ್ನು ಲೆಕ್ಕಿಸದೇ ರಥದ ವಾಹನ ಹತ್ತಿದ ಮಾಜಿ ಶಾಸಕ ಜನರತ್ತ ನುಗ್ಗಿಸುವ ವೀಡಿಯೋ ಇದಾಗಿದೆ. ಮಂಜುನಾಥಗೌಡ ರಥಯಾತ್ರೆ ಬರುವ ಮುನ್ನವೇ ಕಳಶಗಳನ್ನು ವೇದಿಕೆ ಬಳಿ ಕೆರದೊಯ್ದ ಹಿನ್ನೆಲೆ, ಹೂಡಿ ವಿಜಯ್ ಕುಮಾರ್ ಮತ್ತು ಬೆಂಬಲಿಗರು ಕಳಶಗಳನ್ನು ರಥಯಾತ್ರೆ ಜೊತೆಗೆ ಕೆರತರಲು ಒತ್ತಾಯಿಸಿ ರಥಯಾತ್ರೆ ಎದುರು ಪ್ರತಿಭಟನೆಯನ್ನು ನಡೆಸಿದ್ದಾರೆ.ಈ ವೇಳೆ ನುಗ್ಗಿ ಬರುವ ಮಂಜುನಾಥಗೌಡ ಪೊಲೀಸರನ್ನು ತಳ್ಳಿ, ಬಿಜಿಪಿ ಮುಖಂಡ ಗೋಪಾಲಗೌಡ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಮಂಜುನಾಥ್ ಗೌಡರ ಈ ದೌರ್ಜನ್ಯ ಸರಿಯಲ್ಲ ತಾಲೂಕಿನ ಹೊರಗಿನವರು ಇಲ್ಲಿ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ.
Sign in to your account
Username or Email Address


Password

 Remember Me


