ಉಡುಪಿ: ಮಣಿಪಾಲದಲ್ಲಿ (Manipal) ಹೊರ ರಾಜ್ಯದ ಯುವಕ (Boy) ಮತ್ತು ಯುವತಿಯರಿಬ್ಬರು (Girls) ಮದ್ಯದ ಮತ್ತಿನಲ್ಲಿ ರಂಪಾಟ ಮಾಡಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.ಮಣಿಪಾಲದ ಡಿಸಿ ಆಫೀಸ್ ರಸ್ತೆಯ ಪಿಜ್ಜಾ ಶಾಪ್‍ಗೆ ಬಂದಿದ್ದ ಯುವಕ ಮತ್ತು ಯುವತಿಯರಿಬ್ಬರನ್ನು ಕುಡಿದು ಬಂದ ಕಾರಣ ಪಿಜ್ಜಾ ಶಾಪ್ ಸಿಬ್ಬಂದಿ ಮೂವರನ್ನು ಹೊರಗೆ ಕಳುಹಿಸಲು ಮುಂದಾಗಿದ್ದಾರೆ. ಈ ವೇಳೆ ಗಲಾಟೆ ಆರಂಭಿಸಿದ್ದಾರೆ. ಇತ್ತ ಯುವತಿ ತನ್ನ ಜೊತೆಗಿದ್ದ ಯುವಕನಿಗೆ ಚಪ್ಪಳಿ ಏಟು ಕೊಟ್ಟಿದ್ದಾಳೆ. ಇದನ್ನೂ ಓದಿ: ರಾಜೀವ್ ಸೇನ್ ಪತ್ನಿ ಜೊತೆ ನನಗೆ ಅನೈತಿಕ ಸಂಬಂಧವಿಲ್ಲ: ನಟ ಕರಣ್ ಮೆಹ್ರಾಮಧ್ಯದ ಅಮಲಿನಲ್ಲಿ ಯುವತಿ ನಿಲ್ಲಲಾಗದೇ ಪದೇ ಪದೇ ರಸ್ತೆಯಲ್ಲಿ ಬೀಳುತ್ತಿದ್ದಳು ಇದನ್ನು ಗಮನಿಸಿದ ಸ್ಥಳೀಯರು ಕೊನೆಗೆ ತಣ್ಣೀರು ಎರಚಿ ನಶೆ ಇಳಿಸಲು ಮುಂದಾಗಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಮಣಿಪಾಲ ಪೊಲೀಸರು ಪುಂಡಾಟ ನಡೆಸಿದ ಯುವತಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ವಿಮಾನದ ಸೀಟ್‌ನಲ್ಲಿ ಕುಳಿತು ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಗೆ 1 ವರ್ಷ ಜೈಲು
Sign in to your account
Username or Email Address


Password

 Remember Me


