ದಾವಣಗೆರೆ: ನನ್ನ ಮಗನ  ಮರ್ಮಾಂಗ ಊದಿಕೊಂಡಿತ್ತು, ಅದಕ್ಕೆ ಇಂಜೆಕ್ಷನ್ ಮಾಡಿದ್ದಾರೆ. ನನ್ನ ಮಗನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ ಎಂದು ಮೃತ ಚಂದ್ರಶೇಖರ್ (Chandrashekhar) ತಂದೆ ಎಂ.ಪಿ ರಮೇಶ್ (MP Rameh) ಗಂಭೀರ ಆರೋಪ ಮಾಡಿದ್ದಾರೆ.ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ನನ್ನ ಮಗನನ್ನು ಪ್ರೀ ಪ್ಲಾನ್ ಮಾಡಿ ಕೊಲೆ ಮಾಡಿದ್ದಾರೆ. ಆದರೆ ತನಿಖೆ ನಡೆಸುತ್ತಿದ್ದ ಪೊಲೀಸರು ಶುದ್ಧ ಸುಳ್ಳು ಹೇಳುತ್ತಿದ್ದಾರೆ. ನನ್ನ ಮಗನದ್ದು ವ್ಯವಸ್ಥಿತವಾಗಿ ಕೊಲೆ ಆಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ನನ್ನ ಮಗನ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ: ರೇಣುಕಾಚಾರ್ಯ ಅನುಮಾನಮನೆಯಿಂದ ಹೋಗುವಾಗ ಒಳ ಉಡುಪು(ಚಡ್ಡಿ) ಇತ್ತು. ಆದರೆ ಮರಣೋತ್ತರ ಪರೀಕ್ಷೆ ಮಾಡುವಾಗ ಒಳ ಉಡುಪು ಇರಲಿಲ್ಲ. ಅಲ್ಲದೆ ಆತನ ಮರ್ಮಾಂಗ ಬಾತುಕೊಂಡಿತ್ತು, ಅದಕ್ಕೆ ಇಂಜೆಕ್ಷನ್ ಮಾಡಿದ್ದಾರೆ. ನನ್ನ ಮಗನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ. ಕಾರ್ ಹಿಂಭಾಗದ ಇಂಡಿಕೇಟರ್ ಸಹ ಒಡೆಯದೇ ಕೇವಲ ಹಿಂಭಾಗ ಮಾತ್ರ ಗುದ್ದಿರುವ ಹಾಗೇ ಕಾರು ಸಿಕ್ಕಿದೆ. ಬೇರೆ ಕಡೆ ಚಿತ್ರ ಹಿಂಸೆ ಕೊಟ್ಟು ಕೊಲೆ ಮಾಡಿ ಹಾಕಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ನನ್ನ ಮಗನಿಗೆ ಮಚ್ಚಿನಿಂದ ತಲೆ, ಬೆನ್ನಿಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ: ರೇಣುಕಾಚಾರ್ಯಗೌರಿಗದ್ದೆ ಗುರೂಜಿ (Vinay Guruji) ಹೇಳಿಕೆಗೂ ಚಂದ್ರು ಸ್ನೇಹಿತ ಕಿರಣ್ (Kiran) ಹೇಳಿಕೆಗೂ ಸಾಕಷ್ಟು ಗೊಂದಲ ಇದೆ. ಕಿರಣ್ ನೋಡಿದರೆ ಕ್ರೇಟಾ ಕಾರ್ ನಲ್ಲಿ ಆಶ್ರಮಕ್ಕೆ ಹೋಗಿದ್ದೆವು ಎಂದು ಹೇಳುತ್ತಾರೆ. ಗುರೂಜಿ ಮಾತ್ರ ಬೇರೆ ಕಾರಿನಲ್ಲಿ ಬಂದಿದ್ದರು ಎಂದು ಹೇಳುತ್ತಾರೆ. ಹೀಗೆ ಹಲವು ಗೊಂದಲದ ಹೇಳಿಕೆಗಳನ್ನು ಇಬ್ಬರು ಹೇಳುತ್ತಿದ್ದಾರೆ. ಪೋಲೀಸರು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ ಎಂದರು.ನಮ್ಮ ಕಾರ್ಯಕರ್ತರೇ ಚಂದ್ರು ಕಾರನ್ನು ಪತ್ತೆ ಹಚ್ಚಿದ್ದು. ಪೊಲೀಸರು ಪ್ರಕರಣ ಪತ್ತೆ ಹಚ್ಚಿಲ್ಲ. ಯಾರದ್ದೋ ಪ್ರಭಾವಕ್ಕೆ ಒಳಗಾಗಿ ಪ್ರಕರಣದ ದಾರಿ ತಪ್ಪಿಸುತ್ತಿದ್ದಾರೆ. ಪ್ರಕರಣ ತನಿಖೆ ನಡೆಸಿ ಆರೋಪಿಗಳನ್ನ ಪತ್ತೆ ಹಚ್ಚಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಹೊನ್ನಾಳಿ ಚಂದ್ರು ಸಾವಿನ ಸುತ್ತ 5 ಅನುಮಾನ
Sign in to your account
Username or Email Address


Password

 Remember Me


