ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಇಂದು ಸೇರಿದಂತೆ ಮುಂದಿನ 3 ದಿನಗಳ ಕಾಲ ರಾಜ್ಯ ರಾಜಧಾನಿಯಲ್ಲಿ ಭಾರಿ ಮಳೆ ಸಾಧ್ಯತೆಯಿದೆ. ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ ಹಾಗೂ ಬೆಂಗಳೂರಿನಲ್ಲಿ ಇನ್ನು 3 ದಿನ ಮಳೆಯಾಗುವ ಸಾಧ್ಯತೆಯಿದೆ. ಚಳಿಯ ನಡುವೆ ವಾತಾವರಣವನ್ನು ಮಳೆ ಇನ್ನಷ್ಟು ತಂಪು ಮಾಡಲಿದೆ. ಮೋಡ ಕವಿದ ವಾತಾವರಣದ ಜೊತೆಗೆ ಗುಡುಗು, ಮಿಂಚು ಸೇರಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ.ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 27-18
ಮಂಗಳೂರು: 32-24
ಶಿವಮೊಗ್ಗ: 32-20
ಬೆಳಗಾವಿ: 31-19
ಮೈಸೂರು: 29-19
ಮಂಡ್ಯ: 29-20ಮಡಿಕೇರಿ: 27-17
ರಾಮನಗರ: 29-20
ಹಾಸನ: 28-18
ಚಾಮರಾಜನಗರ: 28-19
ಚಿಕ್ಕಬಳ್ಳಾಪುರ: 28-18
ಕೋಲಾರ: 27-19ತುಮಕೂರು: 29-19
ಉಡುಪಿ: 32-24
ಕಾರವಾರ: 34-25
ಚಿಕ್ಕಮಗಳೂರು: 28-18
ದಾವಣಗೆರೆ: 31-21ಚಿತ್ರದುರ್ಗ: 30-19
ಹಾವೇರಿ: 32-21
ಬಳ್ಳಾರಿ: 32-21
ಗದಗ: 32-21
ಕೊಪ್ಪಳ: 32-21
ರಾಯಚೂರು: 32-20ಯಾದಗಿರಿ: 32-20
ವಿಜಯಪುರ: 32-20
ಬೀದರ್: 31-16
ಕಲಬುರಗಿ: 32-18
ಬಾಗಲಕೋಟೆ: 32-21
Sign in to your account
Username or Email Address


Password

 Remember Me


