`ಬಿಗ್ ಬಾಸ್’ (Bigg Boss) ಖ್ಯಾತಿಯ ಸಮೀರ್ ಆಚಾರ್ಯ (Sameer Acharya) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಮೀರ್ ಮತ್ತು ಶ್ರಾವಣಿ ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.  A post shared by Shravani Sameeracharya Mannur (@shravanisameeracharyaofficial)
ಬಿಗ್ ಬಾಸ್(Bigg Boss) ಮತ್ತು ರಾಜಾ ರಾಣಿ(Raja Rani) ರಿಯಾಲಿಟಿ ಶೋ ಮೂಲಕ ಗಮನ ಸೆಳೆದ ಸ್ಪರ್ಧಿ ಸಮೀರ್ ಆಚಾರ್ಯ ಮತ್ತು ಶ್ರಾವಣಿ ದಂಪತಿ ಮನೆಯಲ್ಲಿ ಸಂತಸ ಮನೆ ಮಾಡಿದೆ. ʻರಾಜ ರಾಣಿʼ ರಿಯಾಲಿಟಿ ಶೋ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಈ ಜೋಡಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ:ಶೂಟಿಂಗ್‌ಗೆ ಬ್ರೇಕ್, ತಾಂಜಾನಿಯಾ ಕಾಡಿನಲ್ಲಿ ಪತ್ನಿ ಜೊತೆ ರಾಮ್‌ಚರಣ್  A post shared by Shravani Sameeracharya Mannur (@shravanisameeracharyaofficial)ಈ ಗುಡ್ ನ್ಯೂಸ್ ಕುರಿತು ಸಮೀರ್ ಪತ್ನಿ ಶ್ರಾವಣಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ನೆಚ್ಚಿನ ಜೋಡಿಗೆ ಫ್ಯಾನ್ಸ್ ಶುಭ ಹಾರೈಸಿದ್ದಾರೆ.  A post shared by Shravani Sameeracharya Mannur (@shravanisameeracharyaofficial)ಸಂಪ್ರದಾಯದ ಪ್ರಕಾರ ಶ್ರಾವಣಿಗೆ ಅವರಿಗೆ ಸೀಮಂತ ಮಾಡಲಾಗಿದೆ. ಜೋಕಾಲಿಯಲ್ಲಿ ದಂಪತಿಗಳಿಬ್ಬರು ಕುಳಿತು ಹಿರಿಯರು ಹಾಡುತ್ತಿರುವ ವೀಡಿಯೋ ಶೇರ್ ಮಾಡಿದ್ದಾರೆ.
Sign in to your account
Username or Email Address


Password

 Remember Me


