ಬಿಗ್ ಬಾಸ್ ಮನೆಯ ಲವ್ ಬರ್ಡ್ಸ್ ಸಾನ್ಯ ಅಯ್ಯರ್(Sanya Iyer) ಮತ್ತು ರೂಪೇಶ್ ಶೆಟ್ಟಿ(Roopesh shetty) ನಡುವೆ ಮತ್ತೆ ಜಟಾಪಟಿ ಶುರುವಾಗಿದೆ. ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ದೊಡ್ಮನೆಯಲ್ಲಿ ಹೈಲೈಟ್ ಆಗಿದ್ದ ಸಾನ್ಯ, ರೂಪು ಜೋಡಿ ನಡುವೆ ಕಿರಿಕ್ ಶುರುವಾಗಿದೆ.ದೊಡ್ಮನೆಯಲ್ಲಿ ಕಳೆದ ಸೀಸನ್‌ನ ಜೋಡಿಯಾಗಿ ಅರವಿಂದ್ ಮತ್ತು ದಿವ್ಯಾ ಹೈಲೈಟ್ ಆಗಿದ್ದರು. ಇದೀಗ ಸೀಸನ್ 9ರ ಟಿವಿ ಬಿಗ್ ಬಾಸ್‌ನಲ್ಲಿ ಸಾನ್ಯ ಮತ್ತು ರೂಪೇಶ್ ಹೈಲೈಟ್ ಆಗುತ್ತಿದ್ದಾರೆ. ಓಟಿಟಿಯಿಂದ ಶುರುವಾದ ಇವರಿಬ್ಬರ ಸ್ನೇಹ ಟಿವಿ ಬಿಗ್ ಬಾಸ್‌ನಲ್ಲೂ ಮುಂದುವರೆದಿದೆ. ಹೀಗಿರುವಾಗ ರೂಪೇಶ್‌ಗಾಗಿ ಸಾನ್ಯ ಹಾಡಿದ್ದ ಹಾಡೇ ಇಬ್ಬರ ನಡುವಿನ ಕಲಹಕ್ಕೆ ಕಾರಣವಾಗಿದೆ.ಬಿಗ್ ಬಾಸ್ ಮನೆಯಲ್ಲಿ(Bigg Boss House) ಸಾನ್ಯ ಅಯ್ಯರ್ ರೂಪೇಶ್‌ಗಾಗಿ ಒಂದು ಸಾಂಗ್ ಡೇಡಿಕೇಟ್ ಮಾಡಿದ್ದರು. ಹಾಡುವಾಗ ಅಪಸ್ವರ ಬಂದ ಕಾರಣ ತಾನು ಸರಿಯಾಗಿ ಹಾಡಿಲ್ಲ ಎಂದು ಸಾನ್ಯ ಬೇಸರ ಮಾಡಿಕೊಂಡಿದ್ದರು. ಅದಕ್ಕೆ ರೂಪೇಶ್ ಕೂಡ ಸುಮ್ಮನೆ ಯಾಕೆ ಬೇಜಾರು ಮಾಡಿಕೊಳ್ಳುತ್ತೀಯಾ ಎಂದು ಕೇಳಿದ್ದಾರೆ. ನನಗೆ ಈ ಹಾಡು ಸರಿಯಾಗಿ ಹಾಡಲು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:Breaking-ಭಾರತ್ ಜೋಡೋ ಯಾತ್ರೆಗೆ ಕೆಜಿಎಫ್ ಮ್ಯೂಸಿಕ್ ಬಳಕೆ : ರಾಹುಲ್ ವಿರುದ್ಧ ಎಫ್ಐಆರ್‌ಚೆನ್ನಾಗಿ ಹಾಡಿದ್ಯಾ ಅಂತಾ ಹೇಳ್ತಿದ್ದೀನಿ ತಾನೇ ಎಂದು ರೂಪೇಶ್ ಹೇಳಿದ್ರೆ, ನೀನು ಏನು ನನ್ನ ಮೇಲೆ ಕೋಪಿಸಿಕೊಳ್ಳುವುದು ಎಂದು ಸಾನ್ಯ ರಾಂಗ್ ಆಗಿದ್ದಾರೆ. ಯಾಕೆ ಕೋಪ ಮಾಡಿಕೊಳ್ಳುತ್ತೀಯಾ ಚೆನ್ನಾಗಿ ಹಾಡಿಲ್ಲ ಅಂತಾ ತಾನೇ ಎಂದು ಸಾನ್ಯ ಕೇಳಿದಾಗ ನಿನ್ನ ತಂಟೆಗೆ ನಾನಿಲ್ಲ ಎಂದು ರೂಪೇಶ್ ಶೆಟ್ಟಿ ಕೈಮುಗಿದಿದ್ದಾರೆ. ಇವರಿಬ್ಬರ ಜಗಳಕ್ಕೆ ಮನೆಮಂದಿ ಮೂಕ ಪ್ರೇಕ್ಷಕರಾಗಿದ್ದಾರೆ. ಕಿಚ್ಚನ ಕ್ಲಾಸ್ ನಂತರ ದಿನದಿಂದ ದಿನಕ್ಕೆ ಇವರಿಬ್ಬರ ನಡುವೆ ಗ್ಯಾಪ್ ಜಾಸ್ತಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಜೋಡಿ ಮತ್ತೆ ಒಂದಾಗುತ್ತಾ ಎಂಬುದನ್ನ ಕಾದುನೋಡಬೇಕಿದೆ.
Sign in to your account
Username or Email Address


Password

 Remember Me


