ಟಾಲಿವುಡ್‌ನ ಸೂಪರ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಕುಟುಂಬದಿಂದ ಇದೀಗ ಗುಡ್ ನ್ಯೂಸ್‌ವೊಂದು ಸಿಕ್ಕಿದೆ. ಅಲ್ಲು ಕುಟುಂಬದ ಸೊಸೆ ಇದೀಗ ನಟನೆಯತ್ತ ಮುಖ ಮಾಡಿದ್ದಾರೆ. ಸ್ಟಾರ್ ನಟನ ಜೊತೆ ಸಿನಿಮಾರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ (Sneha Reddy) ಯಾವ ಸ್ಟಾರ್ ನಟಿಯರಿಗೂ ಕಮ್ಮಿಯಿಲ್ಲ. ಬಗೆಬಗೆಯ ಫೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸೌಂಡ್ ಮಾಡುತ್ತಲೇ ಇರುತ್ತಾರೆ. ಈ ಚೆಂದುಳ್ಳಿ ಚೆಲುವೆ ಸ್ನೇಹಾ ರೆಡ್ಡಿಗೆ ಇದೀಗ ಬಿಗ್ ಆಫರ್‌ವೊಂದು ಅರಸಿ ಬಂದಿದೆ.  A post shared by Allu Sneha Reddy (@allusnehareddy)ಮಲಯಾಳಂ(Malyalam) ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ನಟನೆಯ ಹೊಸ ಪ್ರಾಜೆಕ್ಟ್‌ನಲ್ಲಿ ಸ್ನೇಹಾ ರೆಡ್ಡಿಗೆ ನಟಿಸಲು ಸೂಪರ್ ಆಫರ್‌ವೊಂದು ಸಿಕ್ಕಿದೆ. ಬಹುಭಾಷೆಗಳಲ್ಲಿ ನಿರ್ಮಾವಾಗುತ್ತಿರುವ ಈ ಚಿತ್ರದಲ್ಲಿ ಸ್ನೇಹಾ ರೆಡ್ಡಿ, ಅತಿಥಿ ಪಾತ್ರನಾ, ಅಥವಾ ಚಿತ್ರದ ಪ್ರಮುಖ ಪಾತ್ರನಾ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಈ ಚಿತ್ರದಲ್ಲಿ ಪವರ್‌ಫುಲ್ ಪಾತ್ರದ ಮೂಲಕ ಅಲ್ಲು ಕುಟುಂಬದ ಸೊಸೆ ಬರುತ್ತಿರೋದಂತೂ ಗ್ಯಾರೆಂಟಿ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ವಿಜಯ್ ದೇವರಕೊಂಡ- ರಶ್ಮಿಕಾಒಟ್ನಲ್ಲಿ ಹೀರೋಯಿನ್‌ಗಳೇ ಒಂದು ಅವಕಾಶಕ್ಕಾಗಿ ಕಾಯುವವರ ನಡುವೆ ಸ್ನೇಹಾ ರೆಡ್ಡಿ ಭರ್ಜರಿ ಅವಕಾಶ ಪಡೆದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ಪತಿ ಅಲ್ಲು ಅರ್ಜುನ್ ಜೊತೆ ನಟಿಸುವ ಚಾನ್ಸ್ ಸಿಗಲಿ ಎಂಬುದೇ ಅಭಿಮಾನಿಗಳ ಆಶಯ.
Sign in to your account
Username or Email Address


Password

 Remember Me


