ಮಂಡ್ಯ: ಆಸ್ಪತ್ರೆಗೆ ಬೈಕ್‍ನಲ್ಲಿ ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ತಂದೆ-ತಾಯಿಯನ್ನು ಅಡ್ಡಗಟ್ಟಿ ಹೆಲ್ಮೆಟ್ (Helmet) ಇಲ್ಲ ಎಂದು ಬೈಕ್‌ (Bike) ಕೀ ಕಿತ್ತುಕೊಂಡು ಪೊಲೀಸರು ಮಾನವೀಯತೆ ಮರೆತಿರುವ ಘಟನೆ ಮಂಡ್ಯದಲ್ಲಿ ಜರುಗಿದೆ.ಮಂಡ್ಯ ನಗರದ ಮಹಾವೀರ ವೃತ್ತದ ಬಳಿ ಕೆಆರ್‍ಪೇಟೆಯಿಂದ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ತಂದೆ-ತಾಯಿ ಬೈಕ್‍ನಲ್ಲಿ ತಮ್ಮ ಮಗುವನ್ನು ಕರೆದುಕೊಂಡು ಬರುತ್ತಿದ್ದ ವೇಳೆ ಈ ಘಟನೆ ಜರುಗಿದೆ. ಬೈಕ್‍ನ್ನು ಪೊಲೀಸರು ಅಡ್ಡಗಟ್ಟಿದ ವೇಳೆ ಬೈಕ್‍ನಲ್ಲಿ ಇದ್ದ ಮಗುವಿನ ತಂದೆ, ಸರ್.. ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾ ಇದ್ದೀವಿ ಬಿಡಿ ಸಾರ್ ಎಂದಿದ್ದಾರೆ. ಈ ವೇಳೆ ಪೊಲೀಸರು, ಹೆಲ್ಮೆಟ್ ಎಲ್ಲಿ ಮೊದಲು ಫೈನ್ ಕಟ್ಟು ಎಂದು ಬೈಕ್ ಕೀಯನ್ನು ಕಿತ್ತುಕೊಂಡಿದ್ದಾರೆ. ನಂತರ ಸರ್ ನಿಜವಾಗಲೂ ಹಣವಿಲ್ಲ ಸರ್ ಆಸ್ಪತ್ರೆಗೆ ಹೋಗಬೇಕು ಬಿಡಿ ಸಾರ್ ಎಂದು ಮತ್ತೆ ಹೇಳಿದ್ದಾರೆ. ಇದನ್ನೂ ಓದಿ: ನರೇಂದ್ರ ಮೋದಿ ಕಾರ್ಯವೈಖರಿ ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾದ ನಟ ಶಶಿಕುಮಾರ್ಇಷ್ಟಾದ್ರು ಸಹ ಮಾನವೀಯತೆ ಮರೆತಿರುವ ಪೊಲೀಸರು ಬೈಕ್‍ನ ಕೀ (Bike Key) ಕೊಡುವುದಿಲ್ಲ. ಬಳಿಕ ಸ್ನೇಹಿತರಿಗೆ ಹಣ ಹಾಕಿ ಎಂದು ಕೇಳುತ್ತಿದ್ದರೆ, ಇತ್ತ ಪತ್ನಿ ಮಗುವನ್ನು ಎತ್ತಿಕೊಂಡು ಫುಟ್‍ಪಾತ್‍ನಲ್ಲಿ ಕೂತಿದ್ರು. ನಂತರ ಸ್ನೇಹಿತರ ಬಳಿ ಗೂಗಲ್ ಪೇ (Google Pay) ಮಾಡಿಸಿಕೊಂಡು ಎಟಿಎಂನಲ್ಲಿ ಹಣ ಡ್ರಾ ಮಾಡಿ ಫೈನ್ ಕಟ್ಟಿದ ಬಳಿಕ ಪೊಲೀಸರು ಬೈಕ್ ಕೀ ಕೊಟ್ಟರು.
Sign in to your account
Username or Email Address


Password

 Remember Me


