ಮಡಿಕೇರಿ: ಮುಂದಿನ ಚುನಾವಣೆ ಹೊತ್ತಿಗೆ ಬಿಜೆಪಿ (BJP), ಜೆಡಿಎಸ್‍ನ (JDS) 30 ಶಾಸಕರು ಕಾಂಗ್ರೆಸ್ (Congress) ಸೇರುವುದು ಖಚಿತ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ (M.Laxman) ಸ್ಫೋಟಕ ಹೇಳಿಕೆ ನೀಡಿದ್ದಾರೆ.ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಒಳರಾಜಕೀಯದ ಮಾತುಗಳು ತಳುಕು ಹಾಕುತ್ತಿದ್ದೆ. ಮೂರು ಪಕ್ಷಗಳು ತಮ್ಮ ತಮ್ಮ ಆಭ್ಯರ್ಥಿಗಳನ್ನು ಗೆಲ್ಲಿಸಲು ಒಳಗೊಳಗೆ ರಣತಂತ್ರವನ್ನು ಹೆಣೆಯುತ್ತಿದೆ. ಈ ನಡುವೆ ಮಡಿಕೇರಿಯಲ್ಲಿ ಲಕ್ಷ್ಮಣ್ ಅವರ ಸ್ಫೋಟಕ ಹೇಳಿಕೆ ಮತ್ತಷ್ಟು ರಾಜಕೀಯ ರಂಗದಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿ, ಜೆಡಿಎಸ್‍ನ 30 ಶಾಸಕರು ಕಾಂಗ್ರೆಸ್ ಸೇರುವುದು ಖಚಿತ ಎಂಬ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಮಡಿಕೇರಿಯಲ್ಲಿ ಬಹಿರಂಗ ಪಡಿಸಿದ್ದಾರೆ. ಈಗಾಗಲೇ 30 ಶಾಸಕರುಗಳು ಅನಧಿಕೃತವಾಗಿ ಅರ್ಜಿಯನ್ನು ಹಾಕಿದ್ದು ಕಾಂಗ್ರೆಸ್ ಜೊತೆಗಿರುವುದಾಗಿ ಭರವಸೆ ನೀಡಿದ್ದಾರೆ. ಅವರು ಯಾರೆಂದು ಈಗಲೇ ಬಹಿರಂಗ ಪಡಿಸೋದಿಲ್ಲ. ಆದರೆ ಫೆಬ್ರವರಿ ತಿಂಗಳಲ್ಲಿ ಅಧಿಕೃತವಾಗಿ ಕಾಂಗ್ರೆಸ್‍ಗೆ ಅವರು ಬರಲಿದ್ದಾರೆ ಆಗ ಎಲ್ಲರಿಗೂ ವಿಚಾರ ತಿಳಿಯುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಬಂದವರೆಲ್ಲರೂ ನಾಯಕರಾಗಿದ್ದಾರೆ- ಡಿಕೆಶಿಗೆ ನಳಿನ್ ಕುಮಾರ್ ತಿರುಗೇಟುಯಾವುದೇ ಪಕ್ಷದವರು ಬೇಕಾದರು ಬಂದು ಸೇರಿಕೊಳ್ಳಬಹುದು ಯಾರು ಯಾವುದೇ ಷರತ್ತು ಇಲ್ಲದೆ ಬಂದರೆ ಸ್ವಾಗತವಿದೆ. ಜಿ.ಟಿ ದೇವೇಗೌಡರು (G.T Devegowda) ತಮಗೆ ಹಾಗೂ ತಮ್ಮ ಮಗನಿಗೂ ಟಿಕೆಟ್ ಬೇಕು ಅಂತ ಷರತ್ತು ಹಾಕಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಜಾರಕಿಹೊಳಿ ಯಾವಾಗ ಸರ್ಕಾರ ಕೆಡವುತ್ತಾರೋ? ಯಾವಾಗ ಸರ್ಕಾರ ತರುತ್ತಾರೋ?: ಜಯಮೃತ್ಯುಂಜಯ ಸ್ವಾಮೀಜಿ
Sign in to your account
Username or Email Address


Password

 Remember Me


