ಬಿಗ್ ಬಾಸ್ ಮನೆ(Bigg Boss House) ಇದೀಗ ರಣರಂಗವಾಗಿದೆ. ದಿನದಿಂದ ದಿನಕ್ಕೆ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ಮಧ್ಯೆ ಜಟಾಪಟಿ ಜೋರಾಗಿದೆ. ಎಲ್ಲಿಯವರೆಗೆ ಅಂದ್ರೆ ಒಬ್ಬರನೊಬ್ಬರು ಹೀಯಾಳಿಸುವ ಮಟ್ಟಕ್ಕೆ ಬಂದು ನಿಂತಿದೆ. ಇದೀಗ ನೀನೆಂತ ಮಾನಗೆಟ್ಟವನು ಎಂದು ಆಚೆ ನೋಡಿದ್ದೀನಿ ಎಂದು ರಾಜಣ್ಣ ವಿರುದ್ಧ ಸಂಬರ್ಗಿ(Prashanth Sambargi) ಕಿಡಿಕಾರಿದ್ದಾರೆ.ದೊಡ್ಮನೆಯಲ್ಲಿ ರೂಪೇಶ್ ರಾಜಣ್ಣ(Roopesh Rajanna) ಮತ್ತು ಸಂಬರ್ಗಿ ನಡುವಿನ ಜಗಳಕ್ಕೆ ಬ್ರೇಕ್ ಬೀಳುವ ಯಾವುದೇ ಸೂಚನೆ ಸಿಗದೇ ಮನೆಮಂದಿಯೇ ಕಂಗಲಾಗಿದ್ದಾರೆ. ಟಾಸ್ಕ್‌ವೊಂದರಲ್ಲಿ ಬಝರ್ ವಿಷ್ಯವಾಗಿ ಸಂಬರ್ಗಿಗೂ ಮುನ್ನ ನಾನೇ ಒತ್ತಿದ್ದು ಎಂದು ಶುರುವಾದ ಈ ಜಗಳ ಮಾರನೇ ದಿನಕ್ಕೂ ಮುಂದುವರೆದಿದೆ. ಕ್ಯಾಪ್ಟನ್ ಅನುಪಮಾ ಅವರಿಂದ ಮೋಸ ಆಗಿದೆ ಎಂದು ಸೂಟ್‌ಕೇಸ್ ಹಿಡಿದು ಹೊರಟ ರಾಜಣ್ಣ ವಿರುದ್ಧ ಸಂಬರ್ಗಿ ಗರಂ ಆಗಿದ್ದಾರೆ.ಬೇರೆಯವರ ಬಳಿ ನನ್ನನ್ನು ನೆಗೆಟಿವ್ ಆಗಿ ಬಿಂಬಿಸೋದನ್ನು ಬಿಡಿ. ಇದನ್ನು ಚಿಲ್ಲರೆ ಬುದ್ಧಿ ಅಂತ ಕರೆಯುತ್ತಾರೆ. ನಾನು ಮನೆಯಿಂದ ಹೋಗೋದು, ಬಿಡೋದು ನನ್ನ ಮತ್ತು ಬಿಗ್ ಬಾಸ್‌ಗೆ ಬಿಟ್ಟಿದ್ದು. ನನಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡಿ, ನನ್ನ ವಿಚಾರವನ್ನು ನೀವು ಬೇರೆಯವರ ಬಳಿ ಮಾತನಾಡೋದು ಇಷ್ಟ ಇಲ್ಲ. ನೀವೆಂತ ಮಾನಗೆಟ್ಟವರು ಅಂತ ನನಗೆ ಗೊತ್ತಿದೆ. ನಿಮ್ಮ ವಿಚಾರವನ್ನು ನಾನು ಯಾರ ಬಳಿಯೂ ಮಾತನಾಡಿಲ್ಲ, ನೀವು ನನ್ನ ಬಗ್ಗೆ ಮಾತನಾಡಬೇಡಿ ಎಂದು ರಾಜಣ್ಣ ಅವರು ಸಂಬರ್ಗಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ:‘ಹಾಸ್ಟೆಲ್ ಹುಡುಗರ’ ಜೊತೆಯಲ್ಲಿ ಮೋಹಕ ತಾರೆ ರಮ್ಯಾ: ಟೀಸರ್ ರಿಲೀಸ್ಹೋಗ್ತೀನಿ ಹೋಗ್ತೀನಿ ಅಂತಾ ಮಾತನಾಡುತ್ತೀರಾ, ನೀವು ಮನೆಯಿಂದ ಹೋಗಬೇಕಿತ್ತು. ಬೇಕು ಅಂದಾಗ ಬರ್ತಿನಿ, ಬೇಡ ಅಂದಾಗ ಹೋಗ್ತೀನಿ ಅನ್ನೋಕೆ ಇದು ಆಟ, ಮನೆಯಲ್ಲ. ನಾನು ಸಾವಿರ ಜನರ ಹತ್ರ ನಾನು ಮಾತನಾಡ್ತೀನಿ, ಅದು ನನ್ನ ಅಭಿಪ್ರಾಯ. ನೀನೆಂತ ಚಿಲ್ಲರೆ ಅಂತ ನಂಗೊತ್ತು. ನಿಮ್ಮ ಮಾನಗೆಟ್ಟ ಕೆಲಸವನ್ನು ನಾನು ಆಚೆ ನೋಡಿದ್ದೇನೆ ಎಂದು ಸಂಬರ್ಗಿ ರೂಪೇಶ್ ರಾಜಣ್ಣಗೆ ಟಾಂಗ್ ಕೊಟ್ಟಿದ್ದಾರೆ. ಒಟ್ನಲ್ಲಿ ಇವರಿಬ್ಬರ ಜಗಳ ನಿಲ್ಲಿಸಲು ಮನೆಮಂದಿ ಕೂಡ ಹರಸಾಹಸಪಡಬೇಕಾಯಿತು. ಇನ್ನೂ ದಿನಗಳಲ್ಲಿ ಇವರಿಬ್ಬರ ಜಗಳ ಯಾವ ಹಂತಕ್ಕೆ ಹೋಗುತ್ತೆ ಎಂಬುದನ್ನ ಕಾದುನೋಡಬೇಕಿದೆ.
Sign in to your account
Username or Email Address


Password

 Remember Me


