ಬಾಲಿವುಡ್‌ನ ಯಂಗ್ ಹೀರೋ ಸಿದ್ಧಾಂತ್ ಚತುರ್ವೇದಿ (Siddant Chaturvedi) ತಮ್ಮ ಸಿನಿಮಾಗಳಿಗಿಂತ ಡೇಟಿಂಗ್ ವಿಷ್ಯವಾಗಿಯೇ ಬಿಟೌನ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ(Navya Naveli Nanda) ಜೊತೆಗಿನ ಸಿದ್ಧಾಂತ್ ಡೇಟಿಂಗ್ ಇದೀಗ ಬಿಟೌನ್‌ನ ಹಾಟ್ ಟಾಪಿಕ್ ಆಗಿದೆ.  A post shared by Siddhant Chaturvedi (@siddhantchaturvedi)`ಗಲ್ಲಿಬಾಯ್'(Gully Boy) ಚಿತ್ರದ ಮೂಲಕ ಬಿಟೌನ್‌ಗೆ ಎಂಟ್ರಿ ಕೊಟ್ಟ ಸಿದ್ಧಾಂತ್ ಸದ್ಯ ʻಫೋನ್ ಬೂತ್ʼ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಸಂದರ್ಶನವೊಂದರಲ್ಲಿ ನವ್ಯಾ ಜೊತೆಗಿನ ಡೇಟಿಂಗ್ ಬಗ್ಗೆ ಸಿದ್ಧಾಂತ್‌ಗೆ ಕೇಳಲಾಗಿದೆ. ಈ ಬಗ್ಗೆ ನಟ ಸಿದ್ಧಾಂತ್ ಕೂಡ ಕ್ಲ್ಯಾರಿಟಿ ಕೊಟ್ಟಿದ್ದಾರೆ.  A post shared by Navya Naveli Nanda (@navyananda)ನಾನು ಡೇಟಿಂಗ್ ಮಾಡುತ್ತಿದ್ದೇನೆ, ಯಾರನ್ನಾದರೂ ನೋಡುತ್ತಿದ್ದೇನೆ ಎಂದು ಗಾಸಿಪ್ ಆಗಿದ್ದರೆ, ನಾನು ವಿಷ್ಯ ನಿಜವಾಗಲಿ ಎಂದು ಬಯಸುತ್ತೇನೆ ಎಂದು ಮಾತನಾಡಿದ್ದಾರೆ. ಇತ್ತೀಚೆಗೆ ಕರಣ್ ಜೋಹರ್ ಬರ್ತ್ಡೇ ಪಾರ್ಟಿಯಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಡ್ಯಾನ್ಸ್ ಕೂಡ ಮಾಡಿದ್ದರು. ಈ ಎಲ್ಲಾ ಕಾರಣಗಳಿಂದ ಇವರಿಬ್ಬರ ಡೇಟಿಂಗ್ ವಿಷ್ಯ ಸಖತ್ ಸದ್ದು ಮಾಡುತ್ತಿದೆ. ಇದನ್ನೂ ಓದಿ:`ಬಾಹುಬಲಿ’ ಪ್ರಭಾಸ್‌ಗೆ ಶಾಕ್ ಕೊಟ್ಟ ಜಿಎಸ್‌ಟಿ ಅಧಿಕಾರಿಗಳು  A post shared by Siddhant Chaturvedi (@siddhantchaturvedi)`ಫೋನ್ ಬೂತ್’ ಸಿನಿಮಾ ನವೆಂಬರ್ 4ರಂದು ತೆರೆಗೆ ಬರುತ್ತಿದೆ. ಕತ್ರಿನಾ ಕೈಫ್ ಜೊತೆ ಪ್ರಮುಖ ಪಾತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ನಟಿಸಿದ್ದಾರೆ.
Sign in to your account
Username or Email Address


Password

 Remember Me


