ಅಶ್ವಿನಿ ನಕ್ಷತ್ರ, ಕೃಷ್ಣಲೀಲಾ, ಇಷ್ಟಕಾಮ್ಯ ಹೀಗೆ ಸಾಕಷ್ಟು ಸೀರಿಯಲ್ ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಹುಬ್ಬಳ್ಳಿ ಹುಡುಗಿ ಮಯೂರಿ(Mayuri) ನಾಲ್ಕನೇ ಸ್ಪರ್ಧಿಯಾಗಿ ಬಿಗ್ ಬಾಸ್‌ನಿಂದ ಹೊರಬಂದಿದ್ದಾರೆ. ಬಿಗ್ ಬಾಸ್ ಪಟ್ಟವನ್ನ ಯಾರು ಗೆಲ್ಲಬೇಕು, ಗೆಲ್ಲಬಹುದು ಎಂಬುದರ ಬಗ್ಗೆ ಮಯೂರಿ ಮಾತನಾಡಿದ್ದಾರೆ.ಚಂದನವನದಲ್ಲಿ ಸಾಕಷ್ಟು ಸಿನಿಮಾಗಳ ಕಮಾಲ್ ಪ್ರತಿಭಾನ್ವಿತ ನಟಿ ಮಯೂರಿ ಬಿಗ್ ಬಾಸ್ ಮನೆಯಲ್ಲಿ(Bigg Boss House) ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಆದರೆ ನಾಲ್ಕನೇ ವಾರಕ್ಕೆ ತಮ್ಮ ಆಟಕ್ಕೆ ಫುಲ್ ಸ್ಟಾಪ್ ಇಟ್ಟಿದ್ದರು. ಬಿಗ್ ಬಾಸ್ ಮನೆಯಲ್ಲಿನ ನೆನಪು ಮತ್ತು ಸ್ಪರ್ಧಿಗಳ ಗೆಲುವಿನ ಬಗ್ಗೆ ಮಯೂರಿ ಇದೀಗ ಮಾತನಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಸ್ಮಾರ್ಟ್ ಗೇಮ್ ಆಡ್ತಿದ್ದಾರೆ: ನೇಹಾ ಗೌಡಬಿಗ್ ಬಾಸ್‌ನ ಯಾರು ಗೆಲ್ಲಬೇಕು, ಗೆಲ್ಲಬಹುದು ಎಂದು ಹೇಳೋದು ತುಂಬಾ ಕಷ್ಟ. ಆ ಮನೆಯಲ್ಲಿ ಪ್ರತಿಯೊಬ್ಬರು ಗೆಲ್ಲುವಂತಹ ಅರ್ಹತೆ ಇರುವವರೇ ಇರೋದು. ಅದರಲ್ಲೂ ಈ ಬಾರಿ ಪ್ರವೀಣರು ಮತ್ತು ನವೀನರ ಪೈಪೋಟಿ ಜೋರಾಗಿ ಇರೋದರಿಂದ ಯಾರು ಗೆಲ್ಲುತ್ತಾರೆ ಅಂತಾ ಊಹೆ ಮಾಡೋದು ಅಸಾಧ್ಯ ಎಂದಿದ್ದಾರೆ. ಹೀಗಿರುವಾಗ ಟಾಪ್ 3ರಲ್ಲಿ ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ ಇದ್ದೇ ಇರುತ್ತಾರೆ. ಇವರು ಚೆನ್ನಾಗಿ ಆಡುತ್ತಾ ಮನರಂಜನೆ ಕೊಡುತ್ತಿದ್ದಾರೆ ಎಂದು ಮಯೂರಿ ಮಾತನಾಡಿದ್ದಾರೆ.
Sign in to your account
Username or Email Address


Password

 Remember Me


