ಬೆಂಗಳೂರು: ತಾಯಿಗೆ ಬೈದಿದ್ದನ್ನು ಪ್ರಶ್ನಿಸಿದ್ದಕ್ಕೆ ಹಣೆಗೆ ಗನ್ (Gun) ಇಟ್ಟು ಮನಸ್ಸೋ ಇಚ್ಛೆ ಥಳಿಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.ಬೆಂಗಳೂರಿನ (Bengaluru) ಮುದ್ದಯ್ಯನಪಾಳ್ಯ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಆರೋಪಿ (Accused) ಅನಿಲ್ ಎಂಬಾತ ಕೌಶಿಕ್ ಮತ್ತವನ ತಮ್ಮನಿಗೆ ಹಣೆ ಮತ್ತು ಬಾಯಿಗೆ ಗನ್ ಇಟ್ಟು ನನ್ನ ತಂಟೆಗೆ ಬಂದ್ರೆ ಸುಟ್ಟು ಬಿಡ್ತಿನಿ ಅಂತಾ ದರ್ಪ ತೋರಿದ್ದಾನೆ. ಮಾರಕಾಸ್ತ್ರಗಳಿಂದ ಇಟ್ಟು ಹಲ್ಲೆ ನಡೆಸಿದ್ದಾನೆ. ನಡುರಸ್ತೆಯಲ್ಲೇ ಎಳೆದಾಡಿ ಹೊಡೆದಿದ್ದಾನೆ. ರಾಯಲ್ ಬೋರ್ ವೆಲ್ ಮಾಲೀಕ ಅನಿಲ್ ಆರ್ಭಟ ನೋಡಿ ಏರಿಯಾ ಜನ ಹೆದರಿ ಹೋಗಿದ್ದಾರೆ.ಏನಿದು ಘಟನೆ?
ಬಾಡಿಗೆ ಮನೆ ಖಾಲಿ ಮಾಡುವ ವಿಚಾರದಲ್ಲಿ ಆರೋಪಿ (Accused) ಅನಿಲ್ ಬಾಮೈದ ಮಹಿಳೆಯೊಂದಿಗೆ ಕಿರಿಕ್ ಮಾಡಿಕೊಂಡಿದ್ದ. ಈ ವೇಳೆ ತನ್ನ ತಾಯಿಗೆ ಬೈದಿದ್ದನ್ನು ಪ್ರಶ್ನಿಸಿ ಕೌಶಿಕ್ ಫೋನ್‌ನಲ್ಲಿ ಮಾತನಾಡಿದ್ದ. ನಂತರ ಮಾತುಕತೆಗೆ ಅಂತಾ ಕೌಶಿಕ್ ಮತ್ತು ತಮ್ಮ ನಂದನ್, ಅನಿಲ್‌ನ ಬೋರ್‌ವೆಲ್ (Borewell) ಆಫೀಸಿಗೆ ಬಂದಿದ್ದರು. ಈ ವೇಳೆ ಅನಿಲ್ ನಾವು ಯಾರು ಅಂತಾ ಗೊತ್ತಿಲ್ಲದೇ ಮಾತಾಡ್ತಿದ್ದೀಯಾ, ಆಫೀಸಿಗೆ ಬರೋವಷ್ಟು ಧೈರ್ಯ ಇದ್ಯಾ ಎನ್ನುತ್ತಾ ಏಕಾಏಕಿ ಹಲ್ಲೆ ನಡೆಸಿದ್ದಾನೆ.ಅನಿಲ್, ಭರತ್ ಮತ್ತವನ ಪುಂಡರ ಗ್ಯಾಂಗ್ ಕೌಶಿಕ್ ಹಾಗೂ ತಮ್ಮ ನಂದನ್ ಮೇಲೆ ಹಲ್ಲೆ ನಡೆಸಿದೆ. ಆಫೀಸಿನಲ್ಲಿ ಹಲ್ಲೆ ಮಾಡಿದ್ದು ಸಾಲದು ಅಂತಾ ರಸ್ತೆಗೆ ಎಳೆದು ತಂದು ಮನಸ್ಸೋ ಇಚ್ಛೆ ಥಳಿಸಿದ್ದಾರೆ. ಸದ್ಯ ಅನಿಲ್ ಮತ್ತವನ ಗ್ಯಾಂಗ್ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ (Police Station) ಎಫ್‌ಐಆರ್ (FIR) ದಾಖಲಾಗಿದೆ.ಕೊಲೆ ಪ್ರಯತ್ನ ಸೇರಿದಂತೆ, ಆರ್ಮ್ಸ್ ಆಕ್ಟ್ ಅಡಿಯಲ್ಲಿ ಕೇಸ್ ದಾಖಲಾಗಿದೆ. ಕೇಸ್ ದಾಖಲಾಗ್ತಿದ್ದಂತೆ ಪೊಲೀಸರಿಗೆ ಹೆದರಿ ಅನಿಲ್ ಮತ್ತವನ ಗ್ಯಾಂಗ್ ತಲೆ ಮರೆಸಿಕೊಂಡಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು (Police) ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.ಅನಿಲ್ ಮೇಲೆ ಈ ರೀತಿ ಆರೋಪ ಕೇಳಿ ಬಂದಿರೋದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಸರ್ವಿಸ್ ಗನ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಠಾಣೆ ಮೆಟ್ಟಿಲೇರಿದ್ದ.
Sign in to your account
Username or Email Address


Password

 Remember Me


