ದೊಡ್ಮನೆಯ ಆಟ ಇದೀಗ ಸಾಕಷ್ಟು ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಬಿಗ್ ಬಾಸ್ ಮನೆಯಿಂದ 5ನೇ ಸ್ಪರ್ಧಿಯಾಗಿ ಎಲಿಮಿನೇಟ್ ಆಗಿ ನೇಹಾ ಗೌಡ ಹೊರಬಂದಿದ್ದಾರೆ. ಈ ವೇಳೆ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ತಮ್ಮ ದೊಡ್ಮನೆಯ ಜರ್ನಿ ಬಗ್ಗೆ ನೇಹಾ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಸಹ ಸ್ಪರ್ಧಿ ರಾಕೇಶ್ ಅಡಿಗ ಆಟದ ಬಗ್ಗೆ ನೇಹಾ ಬಾಯ್ಬಿಟ್ಟಿದ್ದಾರೆ.ಕಿರುತೆರೆಯ ಗೊಂಬೆಯಾಗಿ ಸಾಕಷ್ಟು ಅಭಿಮಾನಿಗಳ ಗಮನ ಸೆಳೆದ ನಟಿ ನೇಹಾ ಗೌಡ ಬಿಗ್ ಬಾಸ್ ಮನೆಯಲ್ಲೂ ಕಮಾಲ್ ಮಾಡಿದ್ದರು. 35ನೇ ದಿನಕ್ಕೆ ದೊಡ್ಮನೆಯಿಂದ ಔಟ್ ಆಗಿ, ಹೊರಬಂದಿದ್ದಾರೆ. ಬಿಗ್ ಬಾಸ್ ಮನೆಯ ಆಟದ ಬಗ್ಗೆ, ಸ್ಮಾರ್ಟ್ ಗೇಮ್ ಆಡುವವರ ಬಗ್ಗೆ ನೇಹಾ ಮಾತನಾಡಿದ್ದಾರೆ. ಇದನ್ನೂ ಓದಿ:‘ಕರ್ನಾಟಕ ರತ್ನ’ ಪ್ರಶಸ್ತಿ ಕಾರ್ಯಕ್ರಮ ಅವ್ಯವಸ್ಥೆ ಬಗ್ಗೆ ಡಿ.ಕೆ.ಶಿವಕುಮಾರ್ ಆಕ್ರೋಶರಾಕೇಶ್ ಅಡಿಗ ಬಿಗ್ ಬಾಸ್ ಮನೆಯಲ್ಲಿ ಸ್ಮಾರ್ಟ್ ಗೇಮ್ ಆಡ್ತಿದ್ದಾರೆ. ಯಾರಿಗೂ ಹರ್ಟ್ ಮಾಡದೇ ಮಾತನಾಡೋದು ಒಂದು ಕಲೆ ಅದು ರಾಕೇಶ್‌ಗೆ ಚೆನ್ನಾಗಿ ಗೊತ್ತಿದೆ.ಯಾರೇ ಬೇಜಾರಿನಲ್ಲಿದ್ದರು ಅವರನ್ನ ಚಿಯರ್ ಮಾಡೋದು. ನಾನು ನೋಡಿರುವ ವ್ಯಕ್ತಿಗಳಲ್ಲಿ ರಾಕೇಶ್ ತುಂಬಾ ನಿಯತ್ತಾಗಿ ಆಡುತ್ತಿದ್ದಾರೆ. ಬಿಗ್ ಬಾಸ್‌ನ ಅವರ ಆಟಕ್ಕೆ ಒಳ್ಳೆಯದಾಗಲಿ ಎಂದು ನೇಹಾ ವಿಶ್ ಮಾಡಿದ್ದಾರೆ.
Sign in to your account
Username or Email Address


Password

 Remember Me


