ಚಿತ್ರದುರ್ಗ: ಅಪರಿಚಿತ ಮಹಿಳೆಯೊಂದು ವೀಡಿಯೋ ಕಾಲ್ ಮಾಡಿ ಖಾಸಗಿ ಅಂಗಾಗ ತೋರಿಸಿದರು, ಈ ಹಿನ್ನೆಲೆಯಲ್ಲಿ ನಾನು ತಕ್ಷಣ ಬ್ಲಾಕ್ ಮಾಡಿದೆ ಎಂದು ಚಿತ್ರದುರ್ಗ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಅಪರಿಚಿತ ಮಹಿಳೆಯಿಂದ ವಾಟ್ಸಪ್‍ನಲ್ಲಿ ವೀಡಿಯೋ ಕಾಲ್ ಬಂದಿತ್ತು. ಕ್ಷೇತ್ರದ ಜನರೋ ಅಥವಾ ಸಂಬಂಧಿಕರೋ ಎಂದು ಕಾಲ್ ರಿಸೀವ್ ಮಾಡಿದ್ದೆ. ಆದರೆ ಅವರ ಭಾಷೆ ನನಗೆ ಅರ್ಥವಾಗಿಲ್ಲ. ಆದರೆ ಈ ರೀತಿ ಆಗಿರುವುದು ನನ್ನ ಗಮನಕ್ಕೆ 2 ಬಾರಿ ಬಂತು ಎಂದು ಹೇಳಿದರು.ಆ ಸಮಯದಲ್ಲಿ ನನ್ನ ಪತ್ನಿಗೆ ತಿಳಿಸಿ ತಕ್ಷಣ ಆ ನಂಬರ್ ಅನ್ನು ಬ್ಲಾಕ್ ಮಾಡಿಸಿದೆ. ನಂತರ ಈ ಬಗ್ಗೆ ಎಸ್‍ಪಿಗೂ ಮಾಹಿತಿ ನೀಡಿದೆ. ಆದರೆ ತನಿಖೆ ಎಲ್ಲಿವರೆಗೆ ಬಂದಿದೆ ಎನ್ನುವುದನ್ನು ನಾನು ವಿಚಾರಿಸಿಲ್ಲ. ಆದರೆ ಅವರು ತನಿಖೆ ನಡೆಸುತ್ತಿದ್ದಾರೆ ಜೊತೆಗೆ ವೀಡಿಯೋ ಕಾಲ್ ಬಂದ ನಂಬರ್‍ನ್ನು ಪೊಲೀಸರು ನಂಬರ್ ತೆಗೆದುಕೊಂಡಿದ್ದಾರೆ. ಇದು ಓರಿಸ್ಸಾ ಅಥವಾ ರಾಜಸ್ಥಾನದಿಂದ ಬಂದ ನಂಬರ್ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಬುರ್ಖಾ ಹಾಕಿಲ್ಲ ಅಂತ ಅಫ್ಘನ್ ವಿವಿ ಹೊರಗಡೆ ವಿದ್ಯಾರ್ಥಿನಿಯರ ಮೇಲೆ ತಾಲಿಬಾನ್ ದಾಳಿಘಟನೆಯ ಕುರಿತು ಯಾರ ಮೇಲೂ ನನಗೆ ಅನುಮಾನವಿಲ್ಲ. ನನಗೆ ಯಾರು ವಿರೋಧಗಳಿಲ್ಲ. ಘಟನೆಗೆ ಸಂಬಂಧಿಸಿ ಸೈಬರ್ ಠಾಣೆಗೆ ದೂರು ನೀಡಿದ್ದೇನೆ ಎಂದರು. ಇದನ್ನೂ ಓದಿ: ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ!ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್‍ಗೆ ಯತ್ನ ನಡೆದಿದೆ. ಮೊಬೈಲ್ ನಂಬರ್‌ವೊಂದರಿಂದ ವೀಡಿಯೋ ಕಾಲ್ ಮೂಲಕ ಶಾಸಕರನ್ನು ಸಿಲುಕಿಸುವ ಯತ್ನ ಮಾಡಲಾಗಿದೆ. ಬೆತ್ತಲೆಯಾಗಿದ್ದ ಯುವತಿಯೊಬ್ಬಳು ಶಾಸಕರಿಗೆ ವೀಡಿಯೋ ಕಾಲ್ ಮಾಡಿದ್ದಾಳೆ. ಈ ಸಂಬಂಧ ಶಾಸಕರು ಇದೀಗ ಚಿತ್ರದುರ್ಗ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಚಿತ್ರದುರ್ಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Sign in to your account
Username or Email Address


Password

 Remember Me


