ಬಿಗ್ ಬಾಸ್ ಮನೆಯಲ್ಲಿ ಇತ್ತೀಚೆಗೆ ಸಾನ್ಯ ಅಯ್ಯರ್ ಅವರ ನಡೆ, ನುಡಿ ಮನೆಯವರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಇದೀಗ ಮತ್ತೆ ಸಾನ್ಯ ಮಾತು ಪ್ರಶಾಂತ್ ಸಂಬರ್ಗಿ ಅವರ ಬೇಸರಕ್ಕೆ ಕಾರಣವಾಗಿದೆ. ಗರ್ಲ್‌ಫ್ರೆಂಡ್ಸ್‌ ಬಗ್ಗೆ ಕಿಚ್ಚನ ಮುಂದೆ ಬಾಯ್ಬಿಟ್ಟ ಸಾನ್ಯ ವಿರುದ್ಧ ಸಂಬರ್ಗಿ ಕಿಡಿಕಾರಿದ್ದಾರೆ.ದೊಡ್ಮನೆಯಲ್ಲಿ ಸಾನ್ಯ ಮತ್ತು ಪ್ರಶಾಂತ್ ಸಂಬರ್ಗಿ ನಡುವೆ ಮೊದಲಿನಿಂದಲೂ ಒಳ್ಳೆಯ ಸ್ನೇಹವಿತ್ತು. ಇಬ್ಬರೂ ಸೇರಿ ರೂಪೇಶ್ ರಾಜಣ್ಣಗೆ ಬಕ್ರಾ ಮಾಡಿದ್ದರು. ಇದೀಗ ಸಾನ್ಯ ಮತ್ತು ಸಂಬರ್ಗಿ ನಡುವೆ ಕಿಡಿ ಹೊತ್ತಿಕೊಂಡಿದೆ. ನನ್ನ ಇಮೇಜ್ ಡ್ಯಾಮೇಜ್ ಮಾಡಬೇಡ ಎಂದು ಸಾನ್ಯಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ ಸಂಬರ್ಗಿಕಿಚ್ಚನ ವಾರ ಪಂಚಾಯಿತಿಯಲ್ಲಿ ಯಾರಿಗೆ ಉಡುಗೊರೆ ಕೊಡಲು ಬಯಸುತ್ತೀರಿ ಎಂದು ಸಾನ್ಯಗೆ ಕಿಚ್ಚ ಸುದೀಪ್ ಪ್ರಶ್ನಿಸಿದ್ದರು. ಆಗ,ಪ್ರಶಾಂತ್ ಸಂಬರ್ಗಿಗೆ ಅವರಿಗೆ ಅವರ ಹೆಂಡತಿ ಫೋಟೋ ಬೇಕೋ, ಗರ್ಲ್‌ಫ್ರೆಂಡ್ಸ್ ಫೋಟೋ ಬೇಕೋ, ಯಾವುದು ಬೇಕೋ ಅದು ಪಾಲಾಗುತ್ತೆ ಸರ್ ಎಂದರು ಸಾನ್ಯ. ಗರ್ಲ್‌ಫ್ರೆಂಡ್ಸ್ ವಿಚಾರ ಯಾಕೆ ಎಂದು ಕಿಚ್ಚ ಸುದೀಪ್ ಕೇಳಿದಾಗ, ಅವರು ಜಮಾನದಲ್ಲಿ ಇರಬೇಕಾದರೆ ಅವರಿಗೆ ಸಿಕ್ಕಾಪಟ್ಟೆ ಗರ್ಲ್‌ಫ್ರೆಂಡ್ಸ್ ಇದ್ದರು. ಹಳೇ ನೆನಪುಗಳನ್ನ ಮೆಲುಕು ಹಾಕಿ ಇನ್ನೂ ಯಂಗ್ ಆಗಲಿ ಅಂತ ಎಂದು ಸಾನ್ಯ ಅಯ್ಯರ್ ಉತ್ತರಿಸಿದರು. ಇದಾದ ಬಳಿಕ ಇದು ಡ್ಯಾಮೇಜಿಂಗ್ ಆಗಿದೆ ಎಂದು ಸಂಬರ್ಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ:ಅಂದು ಅಪ್ಪ, ಇಂದು ಅಪ್ಪು: ಕರ್ನಾಟಕ ರತ್ನ ಪ್ರಶಸ್ತಿಗೆ ರಾಘಣ್ಣ ಪ್ರತಿಕ್ರಿಯೆಕ್ಯಾಮೆರಾ ಮುಂದೆ ಹೇಳೋದಕ್ಕೂ, ಸ್ಟೇಜ್ ಮೇಲೆ ಮಾತನಾಡೋದಕ್ಕೂ ಸಾಕಷ್ಟು ವ್ಯತ್ಯಾಸವಿದೆ ನನ್ನ ಇಮೇಜ್ ಡ್ಯಾಮೇಜ್ ಮಾಡಬೇಡ ಎಂದು ಪ್ರಶಾಂತ್ ಸಂಬರ್ಗಿ ಸಾನ್ಯಗೆ ವಾರ್ನಿಂಗ್ ಕೊಟ್ಟಿದ್ದಾರೆ.
Sign in to your account
Username or Email Address


Password

 Remember Me


