ಚಿತ್ರದುರ್ಗ: ಇತ್ತೀಚಿನ ದಿನಗಳಲ್ಲಿ ಹನಿಟ್ರ್ಯಾಪ್ (HoneyTrap) ಪ್ರಕರಣಗಳು ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿವೆ. ರಾಜ್ಯದ ಮತ್ತೋರ್ವ ರಾಜಕಾರಣಿಗೆ ಹನಿಟ್ರ್ಯಾಪ್ ಯತ್ನಿಸಲಾಗಿದೆ. ಹನಿಟ್ರ್ಯಾಪ್‍ಗೆ ಯತ್ನ ಸಂಬಂಧ ಈಗಾಗಲೇ ಶಾಸಕರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.ಹೌದು. ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ (G.H Thipparedyy) ಗೆ ಹನಿಟ್ರ್ಯಾಪ್‍ಗೆ ಯತ್ನ ನಡೆದಿದೆ. ಮೊಬೈಲ್ ನಂಬರ್ ಒಂದರಿಂದ ವೀಡಿಯೋ ಕಾಲ್ ಮೂಲಕ ಶಾಸಕರನ್ನು ಸಿಲುಕಿಸುವ ಯತ್ನ ಮಾಡಲಾಗಿದೆ. ಬೆತ್ತಲೆಯಾಗಿದ್ದ ಯುವತಿಯೊಬ್ಬಳು ಶಾಸಕರಿಗೆ ವೀಡಿಯೋ ಕಾಲ್ ಮಾಡಿದ್ದಾಳೆ.  ಇದನ್ನೂ ಓದಿ: ಬ್ಲೂ ಟಿಕ್ ಪಡೆಯಲು ತಿಂಗಳಿಗೆ 8 ಡಾಲರ್ ಪಾವತಿಸಿ: ಎಲೋನ್ ಮಸ್ಕ್ಈ ಸಂಬಂಧ ಶಾಸಕರು ಇದೀಗ ಚಿತ್ರದುರ್ಗ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಯಾವುದೋ ಹೆಂಗಸಿನ ಖಾಸಗಿ ಅಂಗಾಂಗ ತೋರಿಸಿದರು. ನಂತರ ವಾಟ್ಸಪ್‍ಗೆ ಅಶ್ಲೀಲ ವೀಡಿಯೋ ಕಳಿಸಿದ್ದಾರೆ. ವೀಡಿಯೋ ಕಳುಹಿಸಿದ ನಂಬರಿನ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತಿಪ್ಪಾರೆಡ್ಡಿ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಚಿತ್ರದುರ್ಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Sign in to your account
Username or Email Address


Password

 Remember Me


