ಚಿಕ್ಕೋಡಿ (ಬೆಳಗಾವಿ): ಕರ್ನಾಟಕ ರಾಜ್ಯೋತ್ಸವ ಹಾಗೂ ದಿವಂಗತ ಡಾ. ಪುನೀತ್ ರಾಜಕುಮಾರ್ (Dr. Puneeth Raj Kumar) ಅವರಿಗೆ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ನೌಕರರೆಲ್ಲ ಸೇರಿ ಪ್ರತಿ ಮನೆಗೆ ಕನ್ನಡ ಧ್ವಜ ನೀಡಿ ಅಪ್ಪುಗೆ ಗೌರವ ಸಲ್ಲಿಸಿದ್ದಾರೆ.ಗ್ರಾಮದ ಪ್ರತಿ ಮನೆಗಳಿಗೂ ಕನ್ನಡ ಧ್ವಜ (Kannada Flag) ನೀಡಿ ಧ್ವಜಾರೋಹಣ ಮಾಡುವ ಕಾರ್ಯವನ್ನ ನೇರಲಿ ಗ್ರಾಮ ಪಂಚಾಯತಿ ವತಿಯಿಂದ ಮಾಡಲಾಗಿದೆ. ರಾಜ್ಯೋತ್ಸವ ದಿನದಂದು ನೇರಲಿ ಗ್ರಾಮದ ಪ್ರತಿ ಮನೆ ಮನೆಗಳಲ್ಲೂ ಕನ್ನಡ ಬಾವುಟ ರಾರಾಜಿಸುತ್ತಿತ್ತು. ಇದನ್ನೂ ಓದಿ: ನಕ್ಷತ್ರದ ಕಣ್ಣುಗಳಿರುವ ಅಪ್ಪು ದೇವರ ಮಗು ಎಂದು ಹಾಡಿ ಹೊಗಳಿದ ರಜನಿಕಾಂತ್ಪವರ್ ಸ್ಟಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ದೊರಕಿದ್ದು, ಇಡೀ ಗ್ರಾಮಕ್ಕೆ ಅಲ್ಲದೇ ರಾಜ್ಯಕ್ಕೆ ಸಂತಸ ತಂದಿದೆ ಎಂದು ಗ್ರಾಮ ಪಂಚಾಯತಿ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
Sign in to your account
Username or Email Address


Password

 Remember Me


