ಮಂಡ್ಯ: ನಟ ಡಾಲಿ ಧನಂಜಯ್ (Daly Dhananjay) ಅವರ ‘ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯ’ ಎಂದು ಪೋಸ್ಟ್ ಹಾಕಿದ್ದೇ ತಡ ಅದು ಒಂದು ಅಭಿಯಾನವಾಗಿಯೇ ರೂಪುಗೊಂಡಿತು. ಇದೀಗ ಬಡವರ ಮಕ್ಳು ಬೆಳೆಯಬೇಕು ಎನ್ನುವುದು ಮಂಡ್ಯ (Mandya) ರಾಜಕಿಯಕ್ಕೂ ಬಂದು ತಲುಪಿದೆ, ಜೆಡಿಎಸ್ (JDS) ನಾಯಕರ ಬೆಂಬಲಿಗರು ಈ ಅಭಿಯಾನ ನಡೆಸುತ್ತಿದ್ದಾರೆ.ಸಕ್ಕರೆ ನಾಡು ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಅಭಿಯಾನ ಆರಂಭವಾಗಿದ್ದು, ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯ, ನಿಷ್ಠಾವಂತ ಕಾರ್ಯಕರ್ತ ಬೆಳೆಯಬೇಕು ಕಣ್ರಯ್ಯ ಎಂದು ಪೋಸ್ಟ್ ಹಾಕಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ನಾಗಮಂಗಲ ಶಾಸಕ ಸುರೇಶಗೌಡ (Suresh Gowda), ಮಂಡ್ಯ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಮಹಾಲಿಂಗೇಗೌಡ (Mahalinge Gowda) ಸೇರಿದಂತೆ ಹಲವು ಟಿಕೆಟ್ ಆಕಾಂಕ್ಷಿ ಪರವಾಗಿ ಪೋಸ್ಟ್ ಹಾಕಿ ಈ ಅಭಿಯಾನ ಆರಂಭಿಸಲಾಗಿದೆ. ಇದನ್ನೂ ಓದಿ: ಜಾಮಿಯಾ ಮಸೀದಿ ವಿವಾದ ಹೈಕೋರ್ಟ್ ಅಂಗಳಕ್ಕೆಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಗಳು ಸಖತ್ ವೈರಲ್ ಆಗುತ್ತಿದ್ದು, ಬಡವರನ್ನ ಬೆಳೆಸಿ, ಹಾರೈಸಿ ಎಂದು ಟ್ರೆಂಡ್ ಆಗುತ್ತಿದೆ. ಅಲ್ಲದೆ ಈ ಪೋಸ್ಟ್ ಗಳಿಗೆ ಪರ ಹಾಗೂ ವಿರೋಧ ಕಾಮೆಂಟ್‍ಗಳು ಸಹ ವ್ಯಕ್ತವಾಗುತ್ತಿವೆ. ಎಂಎಲ್‍ಎ ಅದವರು ಬಡವ ಹೇಗೆ ಆಗ್ತಾನೆ, 10 ಕಾರು ಇಟ್ಟವರು ಬಡವರಾ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ನಮ್ಮ ಎಂಎಲ್‍ಎ ಮತ್ತೆ ಗೆಲ್ಲುತ್ತಾರೆ, ಜೆಡಿಎಸ್ 100% ವಿನ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
Sign in to your account
Username or Email Address


Password

 Remember Me


