ಹುಬ್ಬಳ್ಳಿ: ನಮ್ಮ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿರುವವರು ಗುತ್ತಿಗೆದಾರರು ಕಾಂಗ್ರೆಸ್ (Congress) ಏಜೆಂಟ್‍ರು, ಇದೆಲ್ಲ ಕಾಂಗ್ರೆಸ್ ಏಜೆಂಟರ್‌ಗಳ ಕಥೆ, ಇದು ಸಿದ್ದರಾಮಣ್ಣನ ಒಳ ತಂತ್ರಗಾರಿಕೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಆರೋಪಿಸಿದ್ದಾರೆ.ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ನಮ್ಮ ಸರ್ಕಾರದ ಭ್ರಷ್ಟಾಚಾರದ ಸಾಕ್ಷಿ ಪುರಾವೆ ಕೊಡಿ, ಇಲ್ಲವೇ ಲೋಕಾಯುಕ್ತಕ್ಕೆ ದೂರು ಕೊಡಿ. ಕೇವಲ ಮಾಧ್ಯಮದವರ ಮುಂದೆ ಮಾತನಾಡುವುದಲ್ಲ, ಕಾಂಗ್ರೆಸ್ ಲೋಕಾಯುಕ್ತದ ಜೀವ ತೆಗೆದಿತ್ತು, ನಾವು ಓಪನ್ ಮಾಡಿಸಿದ್ದೇವೆ ಕೇಸ್ ಕೊಡಿ. ಸಿದ್ದರಾಮಯ್ಯ (Siddaramaiah) ಫೈಲ್ ನನ್ನ ಬಳಿ ಇವೆ. ನಾವೆಲ್ಲ ದಾಖಲೆ ಸಂಗ್ರಹ ಮಾಡುತ್ತೇವೆ. ಸಮಯ ಬರಲಿ ನಾವು ತೋರಿಸುತ್ತೇವೆ. ದಾಖಲೆ ಇಟ್ಟುಕೊಂಡು ನಾವು ಹೋಗುತ್ತೇವೆ ಎಂದಿದ್ದಾರೆ.ಇಡೀ ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ವಿಜಯಪುರ, ಕೊಳ್ಳೆಗಾಲದಲ್ಲಿ (Kollegala) ಸೇರಿದಂತೆ ಅತೀ ಹೆಚ್ಚು ಬಿಜೆಪಿ (BJP) ಗೆದ್ದಿದೆ. ಮತದಾರರಿಗೆ ಕಾರ್ಯಕರ್ತರಿಗೆ ಅಭಿನಂದನೆಗಳು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಆಡಳಿತವನ್ನು ಜನ ಮೆಚ್ಚಿದ್ದಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಇದು ಮುಂದಿನ ಚುನಾಚಣೆಗೆ ದಿಕ್ಸೂಚಿ ಎಂದು ಹೇಳಿದ್ದಾರೆ. ಇದನ್ನೂ ಓದಿ: 15-20 ಹುಡುಗರು ಉದ್ದೇಶಪೂರ್ವಕವಾಗಿ ಮೋರ್ಬಿ ಸೇತುವೆಯನ್ನು ಅಲುಗಾಡಿಸಿದ್ದೆ ದುರಂತಕ್ಕೆ ಕಾರಣ: ಪ್ರತ್ಯಕ್ಷದರ್ಶಿಕಾಂಗ್ರೆಸ್‍ನವರ 40% ಕಮೀಷನ್ ಆರೋಪ ಸುಳ್ಳು, ಇದನ್ನು ಜನ ನಂಬಿಲ್ಲ. ರಾಹುಲ್ ಗಾಂಧಿ (Rahul Gandhi) ಪಾದಯಾತ್ರೆ ಮಾಡಿದಲೆಲ್ಲಾ ನಮಗೆ ಹೆಚ್ಚು ಸ್ಥಾನ ಬಂದಿದೆ. ರಾಹುಲ್ ಗಾಂಧಿ ಬಂದರೂ ಜನ ಕಾಂಗ್ರೆಸ್ ಪುರಸ್ಕಾರ ಮಾಡಿಲ್ಲ. ಭಾರತ್ ಜೋಡೋ (Bharat Jodo) ಕಾಂಗ್ರೆಸ್‍ಗೂ ಎಫೆಕ್ಟ್ ಆಗಿಲ್ಲ, ಜನರ ಮನಸ್ಸಿನಲ್ಲೂ ಎಫೆಕ್ಟ್ ಆಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರೇ ಪ್ಲೀಸ್ ನಮ್ಮನ್ನು ಕಳ್ಳರಿಂದ ಕಾಪಾಡಿ – ಕುರಿಗಳಿಂದ ವಿನೂತನ ಪ್ರತಿಭಟನೆಜಗದೀಶ್ ಶೆಟ್ಟರ್ ನಮ್ಮ ಹಿರಿಯರು ನಮ್ಮ ಪಕ್ಷದ ನಾಯಕರು ಅವರು ಹೇಳಿದ್ದಕ್ಕೆ ಚರ್ಚೆ ಮಾಡಲ್ಲ ನಾವು ಅವರನ್ನು ಸೈಡ್ ಲೈನ್ ಮಾಡಿಲ್ಲ. ಅವರಿಗೆ ಟಿಕೆಟ್ ಸಿಗುವುದು ಯಾಕೆ ಅನುಮಾನ ಅವರನ್ನು ಗವರ್ನರ್ ಮಾಡುವ ಚರ್ಚೆ ನಡೆದಿಲ್ಲ. ನಮ್ಮಲ್ಲಿ ಟಿಕೆಟ್ ಚರ್ಚೆ ನಡೆದಿಲ್ಲ. ಅಭ್ಯರ್ಥಿ ಆಯ್ಕೆ ಜನೇವರಿ ನಂತರ. ಪೂರ್ಣಾವಧಿ ಮುಗಿದ ಬಳಿಕವೇ ಚುನಾವಣೆ ಚರ್ಚೆ ಮಾಡುತ್ತೆವೆ. ಮತ್ತೆ ನಮ್ಮದೇ ಅಧಿಕಾರ 150 ಸ್ಥಾನದಿಂದ ನಾವು ಗೆಲ್ಲುತ್ತೇವೆ ಎಂದಿದ್ದಾರೆ.
Sign in to your account
Username or Email Address


Password

 Remember Me


