ಚಾಮರಾಜನಗರ: ಶಾಸಕ ಎನ್.ಮಹೇಶ್(N Mahesh) ಜೊತೆಗೆ ಗುರುತಿಸಿಕೊಂಡು ಅನರ್ಹಗೊಂಡಿದ್ದ 7 ಮಂದಿ ನಗರಸಭೆ ಸದಸ್ಯರಲ್ಲಿ 6 ಮಂದಿ ಬಿಜೆಪಿ(BJP) ಜಯಭೇರಿ ಬಾರಿಸಿದ್ದು ಶಾಸಕರ ನಾಯಕತ್ವಕ್ಕೆ ಜಯಮಾಲೆ ದಕ್ಕಿದೆ.ಕೊಳ್ಳೇಗಾಲ(Kollegal) ನಗರಸಭೆಯ 7 ವಾರ್ಡ್‌ಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು 7 ಮಂದಿ ಅನರ್ಹರಲ್ಲಿ 6 ಮಂದಿ ಗೆಲ್ಲುವ ಮೂಲಕ ಶಾಸಕ ಎನ್.ಮಹೇಶ್ ಕ್ಷೇತ್ರದಲ್ಲಿ ಹಿಡಿತ ಬಿಗಿಗೊಳಿಸಿದ್ದು ವಿರೋಧಿ ಗುಂಪುಗಳಿಗೆ ತಿರುಗೇಟು ಕೊಟ್ಟಿದ್ದಾರೆ.2ನೇ ವಾರ್ಡ್ ನಲ್ಲಿ ಕಾಂಗ್ರೆಸ್(Congress) ಅಭ್ಯರ್ಥಿ ಭಾಗ್ಯ ಅವರ ಗೆಲುವು ಬಿಟ್ಟರೇ ಉಳಿದ 6 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಪ್ರಕಾಶ್, ಮಾನಸ, ರಾಮಕೃಷ್ಣ, ನಾಸಿರ್ ಷರೀಫ್, ಪವಿತ್ರಾ, ನಾಗಸುಂದ್ರಮ್ಮ ವಿಜಯ ಸಾಧಿಸಿದ್ದಾರೆ.ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದು ಕಾಂಗ್ರೆಸ್ ಒಂದು ಸ್ಥಾನಕ್ಕಷ್ಟೇ ಸೀಮಿತಗೊಂಡಿದ್ದು ಈ ಹಿಂದೆ ಈ 7 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದ ಬಿಎಸ್‌ಪಿಗೆ ಭಾರೀ ಮುಖಭಂಗವಾಗಿದೆ. ಇದನ್ನೂ ಓದಿ: ಇನ್ಮುಂದೆ ಟ್ವಿಟ್ಟರ್‌ನಲ್ಲಿ ಬ್ಲೂ ಟಿಕ್ ಬೇಕೆಂದ್ರೆ ತಿಂಗಳಿಗೆ ದುಡ್ಡು ಕೊಡಬೇಕುಬಿಎಸ್‌ಪಿಯಿಂದ ಉಚ್ಚಾಟನೆಯಾಗಿ ಎನ್.ಮಹೇಶ್ ಬಿಜೆಪಿ ಸೇರಿದ್ದ ವೇಳೆ ಬಿಎಸ್‌ಪಿ ವಿಪ್ ಉಲ್ಲಂಘಿಸಿ ಮತ ನೀಡಿದ ಹಿನ್ನೆಲೆಯಲ್ಲಿ ನಗರಸಭಾಧ್ಯಕ್ಷರ ಚುನಾವಣೆಯಲ್ಲಿ 7 ಮಂದಿ ಅನರ್ಹಗೊಂಡಿದ್ದರು.
Sign in to your account
Username or Email Address


Password

 Remember Me


