ಬಿಗ್ ಬಾಸ್(Bigg Boss Kannada) ಮನೆ ಇದೀಗ 6ನೇ ವಾರಕ್ಕೆ ಕಾಲಿಟ್ಟಿದೆ. ಸಾಕಷ್ಟು ವಿಷ್ಯವಾಗಿ ದೊಡ್ಮನೆ ಹೈಲೈಟ್ ಆಗುತ್ತಿದೆ. ಇದೀಗ ಸಂಬರ್ಗಿಗೆ ಅರುಣ್ ಸಾಗರ್ ಭಿನ್ನವಾಗಿರುವ ಸ್ಟಾರ್ ಪಟ್ಟವನ್ನ ಕೊಟ್ಟಿದ್ದಾರೆ. ಪ್ರಶಾಂತ್‌ಗೆ ಬೌ ಬೌ ಸ್ಟಾರ್ ಎಂದು ಕರೆಯುವ ಮೂಲಕ ಅರುಣ್ ಸಾಗರ್(Arun Sagar) ಗಮನ ಸೆಳೆದಿದ್ದಾರೆ.ದೊಡ್ಮನೆಯ ಆಟ ಇದೀಗ ಮೊದಲ ದಿನ ಇದ್ದಂತೆ ಇಲ್ಲ. ಶಾಂತವಾಗಿದ್ದ ಮನೆ ಈಗ ರಣರಂಗವಾಗಿದೆ. ಇನ್ನೂ ಕಿಚ್ಚನ ವೀಕೆಂಡ್ ಪಂಚಾಯಿತಿಯಲ್ಲಿ ಸಿನಿಮಾ ಸ್ಟಾರ್‌ಗಳಂತೆ ಮನೆಯ ಸ್ಪರ್ಧಿಗಳಿಗೆ ಯಾರಿಗೆ ಯಾವ ಸ್ಟಾರ್ ಪಟ್ಟ ಕೊಡುತ್ತೀರಾ ಎಂದು ಸುದೀಪ್ ಕೇಳಿದ್ದಾರೆ. ಆಗ ಒಬ್ಬಬ್ಬರು ಒಂದೊಂದು ರೀತಿಯ ಭಿನ್ನ ಉತ್ತರವನ್ನ ಕೊಟ್ಟಿದ್ದರೆ, ಅರುಣ್ ಸಾಗರ್ ಅವರ ಉತ್ತರ ಮನೆಮಂದಿಯ ನಗುವಿಗೆ ಕಾರಣವಾಗಿದೆ. ಇದನ್ನೂ ಓದಿ:ಖಾಸಗಿ ವಿಮಾನ ಖರೀದಿಸಿದ್ರಾ ರಿಷಬ್ ಶೆಟ್ಟಿ? ‘ಬಡವ್ರ ಮಕ್ಕಳು ಬೆಳಿಬೇಕು’ ಟ್ರೋಲ್ಪ್ರಶಾಂತ್ ಸಂಬರ್ಗಿ(Prashanth Sambargi) ಅವರಿಗೆ ನಾನು ಬೌ ಬೌ ಸ್ಟಾರ್ ಪಟ್ಟ ಕೊಡುತ್ತೀನಿ ಎಂದು ಅರುಣ್ ಸಾಗರ್ ಹೇಳಿದ್ದಾರೆ. ಅವರು ಯಾವಾಗಲೂ ನಾನ್ ಸ್ಟಾಪ್ ಆಗಿ ಮಾತನಾಡುತ್ತಾರೆ, ಜಗಳ ಆಡುತ್ತಾರೆ ಅವರಿಗೆ ಬೌ ಬೌ ಸ್ಟಾರ್ ಎಂಬ ಬಿರುದು ಕೊಡುತ್ತೀನಿ ಎಂದಿದ್ದಾರೆ. ಅರುಣ್ ಮಾತಿಗೆ ಸುದೀಪ್ ಸೇರಿದಂತೆ ಮನೆಮಂದಿಯ ಜೊತೆ ಸಂಬರ್ಗಿ ಕೂಡ ಇದನ್ನ ಪಾಸಿಟಿವ್ ಆಗಿ ತೆಗೆದುಕೊಂಡು ನಕ್ಕಿದ್ದಾರೆ.ಇನ್ನೂ ರೂಪೇಶ್ ರಾಜಣ್ಣ(Roopesh Rajanna) ಅವರಿಗೆ ರೂಪೇಶ್ ಶೆಟ್ಟಿ, ಕಂಟಿನಿಟಿ ಸ್ಟಾರ್ ಬಿರುದು ಕೊಟ್ಟಿದ್ದಾರೆ. ಅವರು ಯಾವಾಗಲೂ ಹೇಳಿದ್ದನ್ನೇ ಹೇಳುತ್ತಾರೆ ಎಂದು ಮಾತನಾಡಿದ್ದಾರೆ. ಇದಕ್ಕೆ ಮನೆಮಂದಿ ಕೂಡ ನಿಜ ಎಂದು ಬಿದ್ದು ಬಿದ್ದು ನಕ್ಕಿದ್ದಾರೆ. ಅದರಲ್ಲೂ ಬೌ ಬೌ ಸ್ಟಾರ್ ಬಿರುದು ಎಲ್ಲರನ್ನೂ ನಗಿಸಿದೆ.
Sign in to your account
Username or Email Address


Password

 Remember Me


