– 9 ವರ್ಷಗಳ ಹಿಂದೆ ಹೆರಿಗೆಗಾಗಿ ಈಜಿ ದಡ ಸೇರಿದ್ದ ಮಹಿಳೆಯಾದಗಿರಿ: ಜಿಲ್ಲೆಯ (Yadgir) ಸುರಪುರ ತಾಲೂಕಿನ ನೀಲಕಂಠರಾಯನ ಗಡ್ಡಿ ಗ್ರಾಮ ಕೃಷ್ಣಾ ನದಿಯ (Krishna River) ಪ್ರವಾಹದಿಂದ (Flood) ದ್ವೀಪವಾಗಿ ಮಾರ್ಪಟ್ಟಿದೆ. ತಹಶಿಲ್ದಾರ್ ವಿಜಯ್‌ಕುಮಾರ್ ಗ್ರಾಮಕ್ಕೆ ಭೇಟಿ ನೀಡಿ, ಸುರಕ್ಷತಾ ದೃಷ್ಟಿಯಿಂದ ಗ್ರಾಮದಲ್ಲಿದ್ದ ಮೂವರು ಗರ್ಭಿಣಿಯರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಿದ್ದಾರೆ.9 ವರ್ಷಗಳ ಹಿಂದೆ ಗ್ರಾಮದ ಯಲ್ಲವ್ವ ಎಂಬ ಮಹಿಳೆ ಸುರಕ್ಷಿತ ಹೆರಿಗೆಗಾಗಿ ಕೃಷ್ಣಾ ನದಿ ಪ್ರವಾಹದಲ್ಲಿ ಈಜಿ ದಡ ಸೇರಿದ್ದಳು. ಮತ್ತೆ ಇಂತಹ ಘಟನೆ ಮರುಕಳಿಸದಂತೆ ಈಗಾಗಲೇ ಮುಂಜಾಗ್ರತೆವಹಿಸಿ ಜಿಲ್ಲಾಡಳಿತ ಗರ್ಭಿಣಿಯರನ್ನು ಸ್ಥಳಾಂತರ ಮಾಡಿದೆ. ಇದನ್ನೂ ಓದಿ: ಅಶ್ಲೀಲ ವೀಡಿಯೋ ವೀಕ್ಷಿಸಿ ಸಹೋದರಿಯ ಅತ್ಯಾಚಾರಗೈದು ಹತ್ಯೆ – ಪ್ರಕರಣ ಮುಚ್ಚಿಡಲು ತಾಯಿ, ಹಿರಿಯ ಸಹೋದರಿಯರ ಸಾಥ್ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 3 ಲಕ್ಷ ಕ್ಯುಸೆಕ್ ನೀರನ್ನು ಬಿಡಲಾಗಿದ್ದು, ಗ್ರಾಮದಲ್ಲಿ ನದಿಗೆ ನಿರ್ಮಿಸಿದ ಸೇತುವೆ ಮುಳುಗಡೆಯ ಹಂತದಲ್ಲಿದೆ. ನೀರಿನ ಮಟ್ಟ 2 ಅಡಿ ಏರಿಕೆಯಾದರೆ ಜಲಾವೃತಗೊಳ್ಳಲಿದೆ. ಇದರಿಂದಾಗಿ ಜಿಲ್ಲಾಡಳಿತ ಮೂಂಜಾಗ್ರತೆ ಕೈಗೊಂಡು ಗರ್ಭಿಣಿಯರನ್ನ ಸ್ಥಳಾಂತರ ಮಾಡಿದೆ.ವೈದ್ಯರಿಂದ ಗರ್ಭಿಣಿಯರ ಆರೋಗ್ಯ ತಪಾಸಣೆ ಮಾಡಿಸಲಾಗಿದ್ದು, ನಂತರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಗುರುರಾಘವೇಂದ್ರ ಸ್ವಾಮಿಗಳ ಏಕಶಿಲಾ ಬೃಂದಾವನ ಜಲಾವೃತSign in to your account
Username or Email Address


Password

 Remember Me


