ಅಕೋಲಾ ಮಹಾರಾಷ್ಟ್ರದ ಒಂದು ಜಿಲ್ಲಾ ಕೇಂದ್ರ. ಮಹಾರಾಷ್ಟ್ರ ಪ್ರಾಂತ್ಯದ ಒಂದು ಮುಖ್ಯ ಪಟ್ಟಣ ಹಾಗೂ ತಾಲ್ಲೂಕು ಕೇಂದ್ರ. == ಭೌಗೋಳಿಕ == ಊರು ಪುರ್ಣಾನದಿಯ ಉಪನದಿಯಾದ ಮುರ್ನಾ ನದಿಯ ಪಶ್ಚಿಮದಡದ ಭಾಗವನ್ನು ಆಕ್ರಮಿಸಿಕೊಂಡಿದೆ. ಪುರ್ವದಡದ ಭಾಗದಲ್ಲಿ ತಾಜ್ನಾಪೇಟೆ, ಸರ್ಕಾರಿ ಕಟ್ಟಡಗಳು ಮತ್ತು ಐರೋಪ್ಯರ ನಿವಾಸಗಳಿವೆ. ಅಕೋಲ ಜಿಲ್ಲೆಯ ವಿಸ್ತೀರ್ಣ ಸು. ೫,೪೩೧ ಚ.ಕಿಮೀ. ಜನಸಂಖ್ಯೆ ೧೮,೧೮,೬೧೭ (೨೦೧೧). ಜನಸಾಂದ್ರತೆ ಚ.ಕಿಮೀಗೆ ೩೩೦ ಜನರು. == ಇತಿಹಾಸ == ಪಟ್ಟಣದ ಸುತ್ತಲಿನ ಕೋಟೆ 19ನೆಯ ಶತಮಾನದ್ದು. ಈ ಪಟ್ಟಣ ಹತ್ತಿ ಮತ್ತು ಹೊಗೆಸೊಪ್ಪಿನ ವ್ಯಾಪಾರಕ್ಕೆ ಹೆಸರುವಾಸಿಯಾದ ಕೇಂದ್ರ. ಹತ್ತಿಯಿಂದ ಬೀಜವನ್ನು ಬೇರ್ಪಡಿಸುವ ಅನೇಕ ಕಾರ್ಖಾನೆಗಳುಂಟು. ವಿದ್ಯಾಭ್ಯಾಸದ, ಕೈಗಾರಿಕಾ ಶಾಲೆಯ ಸೌಲಭ್ಯಗಳು ದೊರಕುತ್ತವೆ. ಊರಿನ ತುಂಬ ವಖಾರಗಳು ದಲಾಲಿ ಸಂಸ್ಥೆಗಳೇ ಕಂಡುಬರುತ್ತವೆ. == ಮೇಲ್ಮೈ ಲಕ್ಷಣ == ಈ ಜಿಲ್ಲೆಯ ಭೂಭಾಗ ಚಪ್ಪಟೆಯಾಗಿದ್ದು ಕಣಿವೆಯ ಪ್ರದೇಶ ಸಾಕಷ್ಟಿದೆ. ಉತ್ತರ ಭಾಗದಲ್ಲಿ ಮೇಲ್ಫಟ್ ಬೆಟ್ಟಗಳಿವೆ. ಪೂರ್ವದಲ್ಲಿ ಅಜಂತ ಬೆಟ್ಟಗಳು ಜಿಲ್ಲೆಗೆ ಸೇರಿಕೊಂಡಂತಿವೆ. ಈ ಭಾಗ ಸಮುದ್ರಮಟ್ಟಕ್ಕಿಂತ 610 ಮೀ.ಗಳಷ್ಟು ಎತ್ತರದಲ್ಲಿದ್ದು ಬಾಸಿಮ್ ಪ್ರಸ್ಥಭೂಮಿಯನ್ನು ಒಳಗೊಂಡಿದೆ. ಅಜಂತ ಬೆಟ್ಟಗಳ ಉತ್ತರ ಭಾಗದಲ್ಲಿ ತಪತಿಗೆ ಉಪನದಿಯಾದ ಪುರ್ಣಾ ಮತ್ತು ಅದರ ಉಪನದಿಗಳು ಹರಿಯುತ್ತವೆ. == ಹವಾಮಾನ == ಬೇಸಗೆಯಲ್ಲಿ ಶಾಖ ಹೆಚ್ಚು. ವಾರ್ಷಿಕ ಸರಾಸರಿ ಮಳೆ 26 ಸೆಂ.ಮೀ ಪುರ್ಣಾ ಕಣಿವೆ ಮೆಕ್ಕಲುಮಣ್ಣಿನಿಂದ ಕೂಡಿದ ಫಲವತ್ತಾದ ಕಪ್ಪುಮಣ್ಣಿನಿಂದ ಕೂಡಿದ್ದು ಹತ್ತಿ ಬೆಳೆಗೆ ಉತ್ಕೃಷ್ಟ ಪ್ರದೇಶವಾಗಿದೆ. ಈ ಭಾಗವೆಲ್ಲವನ್ನೂ ಕೃಷಿಗೆ ಅಳವಡಿಸಿಕೊಳ್ಳಲಾಗಿದೆ. == ಉಲ್ಲೇಖಗಳು ==