ಅಕ್ಕಲಕರೆ, ಸ್ಪ್ಯಾನಿಷ್ ಕ್ಯಾಮೊಮೈಲ್, ಮೌಂಟ್ ಅಟ್ಲಾಸ್ ಡೈಸಿ ಡೆಯ್ಸಿ ಕುಟುಂಬವಾದ ಆಸ್ಟೆರೇಸಿಯಲ್ಲಿನ ಒಂದು ಜಾತಿಯ ಹೂಬಿಡುವ ಸಸ್ಯ. ಇದು ಮೆಡಿಟರೇನಿಯನ್ ಯುರೋಪ್ ಮತ್ತು ಉತ್ತರ ಆಫ್ರಿಕಾದ ಕೆಲವು ಭಾಗಗಳಿಗೆ ಸ್ಥಳೀಯವಾಗಿದೆ, ಆದರೆ ಯುರೋಪ್, ಭಾರತ ಮತ್ತು ಪಾಕಿಸ್ತಾನದ ಇತರ ಭಾಗಗಳಲ್ಲಿಯೂ ಸಹ ದೇಶೀಕರಿಸಲಾಗಿದೆ. ಈ ಮೂಲಿಕೆಯಂಥ ದೀರ್ಘಕಾಲಿಕ ಸಸ್ಯವು ಆವಾಸಸ್ಥಾನ ಮತ್ತು ನೋಟದಲ್ಲಿ ಕ್ಯಾಮೊಮೈಲ್ ಪ್ರಭೇದಗಳನ್ನು ಹೋಲುತ್ತದೆ. == ಭಾರತೀಯ ಸಾಂಪ್ರದಾಯಿಕ ಔಷಧ == ಆಯುರ್ವೇದ (ಪ್ರಾಚೀನ ಭಾರತೀಯ ಔಷಧ ಪದ್ಧತಿ) ಮತ್ತು ಸಿದ್ಧ (ಭಾರತದ ದಕ್ಷಿಣ ರಾಜ್ಯವಾದ ತಮಿಳುನಾಡಿನ ವೈದ್ಯಕೀಯ ಪದ್ಧತಿ) ಈ ಸಸ್ಯದ ಬೇರಿಗೆ ಉಪಯೋಗಗಳನ್ನು ಹೊಂದಿವೆ ಮತ್ತು ಇದನ್ನು ಶತಮಾನಗಳಿಂದ ಔಷಧಿಯಾಗಿ ಬಳಸಲಾಗುತ್ತಿದೆ. ಇದನ್ನು ಹಿಂದಿಯಲ್ಲಿ ಅಕ್ಕಲ್‍ಕಾರಾ, ಮರಾಠಿಯಲ್ಲಿ ಅಕ್ಕಲ್‍ಕಾಢಾ, ಮತ್ತು ಅಕ್ಕರಕಾರಂ (ತಮಿಳು : அக்கரகாரம்) ಎಂದು ಕರೆಯಲಾಗುತ್ತದೆ. ಗುಣಿ ಹೊರತೆಗೆಯುವಿಕೆ (ತಮಿಳು : குழி எண்ணெய்) ಎಂಬ ವಿಧಾನದಿಂದ ಒಂದು ರೀತಿಯ ಎಣ್ಣೆಯನ್ನು ತಯಾರಿಸಲಾಗುತ್ತದೆ. ಅನಾಸೈಕ್ಲಸ್ ಪೈರೆಥ್ರಮ್‍ನ ಸಾರಗಳು ಇಲಿಗಳಲ್ಲಿ ಸಂವರ್ಧಕ ಚಟುವಟಿಕೆಯನ್ನು ಹೊಂದಿವೆ ಮತ್ತು ಪ್ರಾಣಿಗಳ ಮಾದರಿಯಲ್ಲಿ ಟೆಸ್ಟೋಸ್ಟೆರಾನ್ ಅನ್ನು ಹೆಚ್ಚಿಸುತ್ತವೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == . " " (). 2008-06-16. . (1931). "". . © 1995-2008 .. 9 2008. 2008-06-16.