ಅರ್ಜುನ ಉವಾಚ: ಕಿಂ ತದ್ಬ್ರಹ್ಮ ಕಿಮಧ್ಯಾತ್ಮಂ ಕಿಂ ಕರ್ಮ ಪುರುಷೋತ್ತಮ । ಅಧಿಭೂತಂ ಚ ಕಿಂ ಪ್ರೋಕ್ತಮಧಿದೈವಂ ಕಿಮುಚ್ಯತೇ ।।೧।। ಅರ್ಜುನನು ಇಂತೆಂದನು - ಹೇ ಪುರುಷೋತ್ತಮ! ಆ ಬ್ರಹ್ಮವು ಯಾವುದು? ಅಧ್ಯಾತ್ಮವು ಯಾವುದು? ಕರ್ಮವು ಯಾವುದು? ಯಾವುದಕ್ಕೆ ಅಧಿಭೂತವೆಂದು ಹೆಸರು? ಅಧಿದೈವವೆಂಬುದು ಯಾವುದು? : , ? (ಅಧ್ಯಾತ್ಮ)? (ಕರ್ಮ)? (ಅಧಿಭೂತ) (ಅಧಿದೈವ)? ಅಧಿಯಜ್ಞಃ ಕಥಂ ಕೋತ್ರ ದೇಹೇಸ್ಮಿನ್ಮದುಸೂದನ । ಪ್ರಯಾಣಕಾಲೇ ಚ ಕಥಂ ಜ್ಞೇಯೋಸಿ ನಿಯತಾತ್ಮಭಿಃ ।।೨।। ಈ ದೇಹದಲ್ಲಿ ಅಧಿಯಜ್ಞನು ಯಾರು? ಅವನು ಹೇಗೆ ಅಧಿಯಜ್ಞ? ಮರಣಕಾಲದಲ್ಲಿ ನಿಯತಾತ್ಮರು ನಿನ್ನನ್ನು ಸ್ಮರಿಸಿಕೊಳ್ಳುವುದು ಹೇಗೆ? , ? -? ಶ್ರೀ ಭಗವಾನುವಾಚ: ಅಕ್ಷರಂ ಬ್ರಹ್ಮ ಪರಮಂ ಸ್ವಭಾವೋಧ್ಯಾತ್ಮಮುಚ್ಯತೇ । ಭೂತಭಾವೋದ್ಭವಕರೋ ವಿಸರ್ಗಃ ಕರ್ಮಸಂಜ್ಞಿತಃ ।।೩।। ಭಗವಂತನು ಹೇಳಿದನು - ಪರಮಶ್ರೇಷ್ಠವಾಗಿದ್ದು ನಾಶವಾಗದ(ಅಕ್ಷರ) ಯಾವ ತತ್ತ್ವ ಉಂಟೋ ಅದೇ ಬ್ರಹ್ಮ. ಪ್ರತಿಯೊಂದು ದೇಹದಲ್ಲಿಯೂಆ ಬ್ರಹ್ಮದ ಭಾವ ಎಂದರೆ ಅವಸ್ಥಾನವೇ ಎಂದರೆ ಪ್ರತ್ಯಗ್ರೂಪವಾದ ಬ್ರಹ್ಮವೇ ಅಧ್ಯಾತ್ಮವೆನಿಸುತ್ತದೆ. ಪ್ರಾಣಿಗಳ ಉತ್ಪತ್ತಿಗೆ ಕಾರಣವಾದ ಹವಿಸ್ತ್ಯಾಗವು ಕರ್ಮವೆನಿಸುತ್ತದೆ. ಅಧಿಭೂತಂ ಕ್ಷರೋ ಭಾವಃ ಪುರುಷಶ್ಚಾಧಿದೈವಕಮ್ । ಅಧಿಯಜ್ಞೋಹಮೇವಾತ್ರ ದೇಹೇ ದೇಹಭೃತಾಂ ವರ ।।೪।। ಪ್ರಾಣಿಗಳಿಗೆ ಸಂಬಂಧಿಸಿದ ನಶ್ವರಭಾಗವೇ - ಎಂದರೆ ದೇಹವೇ ಅಧಿಭೂತವು. ಪುರುಷನೇ ಅಧಿದೈವತ. ದೇಹಧಾರಿಗಳಲ್ಲಿ ಉತ್ತಮವಾದ ಅರ್ಜುನ, ಈ ದೇಹದಲ್ಲಿ ನೆಲೆಸಿರುವ ವಿಷ್ಣುವಾದ ನಾನೇ ಅಧಿಯಜ್ಞನಾಗಿದ್ದೇನೆ. (ಅಧಿಭೂತ) , (ಅಧಿದೈವತ). ( ) , , (ದೇಹಭೃತಾಂ ವರ). ಅಂತಕಾಲೇ ಚ ಮಾಮೇವ ಸ್ಮರನ್ ಮುಕ್ತ್ವಾ ಕಲೇವರಮ್ । ಯಃ ಪ್ರಯಾತಿ ಸ ಮದ್ಭಾವಂ ಯಾತಿ ನಾಸ್ತ್ಯತ್ರ ಸಂಶಯಃ ।।೫।। ಯಾವತನು ಕಡೆಯ ಕಾಲದಲ್ಲಿ ನನ್ನನ್ನೇ ಸ್ಮರಿಸುತ್ತ ಕಳೇಬರವನ್ನು ತ್ಯಜಿಸಿ ಹೋಗುವನೋ ಅವನು ನನ್ನನ್ನು ಸೇರಿಕೊಳ್ಳುವನು. ಇದರಲ್ಲಿ ಯಾವ ಸಂಶಯವೂ ಇಲ್ಲ. , , , ; . ಯಂ ಯಂ ವಾಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಲೇವರಮ್ । ತಂ ತಮೇವೈತಿ ಕೌಂತೇಯ ಸದಾ ತದ್ಭಾವಭಾವಿತಃ ।।೬।। ಕೌಂತೇಯ, ಮನುಷ್ಯನು ಕಡೆಗಾಲದಲ್ಲಿ ಯಾವ ಯಾವ ದೇವತಾವಿಶೇಷವನ್ನು ಸ್ಮರಿಸಿಕೊಳ್ಳುತ್ತ ದೇಹವನ್ನು ಬಿಡುವನೋ, ಅವನು ಆಯಾ ದೇವತೆಯನ್ನೇ ಸೇರಿಕೊಳ್ಳುತ್ತಾನೆ. ಅದೇಕೆ ಸ್ಮರಣೆಗೆ ಬರುತ್ತದೆಯೆಂದರೆ, ಅವನು ಸರ್ವದಾ ಆ ದೇವತೆಯನ್ನೇ ನೆನೆಯುತ್ತೆ ಅದರಿಂದ ವಾಸಿತಚಿತ್ತನಾಗಿರುತ್ತಾನೆ. , , , . , , . ತಸ್ಮಾತ್ಸರ್ವೇಷು ಕಾಲೇಷು ಮಾಮನುಸ್ಮರ ಯುಧ್ಯ ಚ । ಮಯ್ಯರ್ಪಿತಮನೋಬುದ್ಧಿರ್ಮಾಮೇವೈಷ್ಯಸ್ಯಸಂಶಯಮ್ ।।೭।। ಆದ್ದರಿಂದ ಎಲ್ಲಾಕಾಲದಲ್ಲಿಯೂ ನನ್ನನ್ನು ಸ್ಮರಿಸುತ್ತಿರು. ನಿನಗೆ ಸ್ವಧರ್ಮವಾದ ಯುದ್ಧವನ್ನ್ನು ಮಾಡು. ಮನೋಬುದ್ಧಿಗಳನ್ನು ನನ್ನಲ್ಲಿಯೇ ಅರ್ಪಿಸಿದವನಾಗಿ ಸಂದೇಹವಿಲ್ಲದೆ ನನ್ನನ್ನು ಸೇರಿಕೊಳ್ಳುವೆ. ( ' ): , . ಅಭ್ಯಾಸಯೋಗಯುಕ್ತೇನ ಚೇತಸಾ ನಾನ್ಯಗಾಮಿನಾ । ಪರಮಂ ಪುರುಷಂ ದಿವ್ಯಂ ಯಾತಿ ಪಾರ್ಥಾನುಚಿಂತಯನ್ ।।೮।। ಪಾರ್ಥ! ಸತತವಾಗಿ ನನ್ನನ್ನೇ ಧ್ಯಾನಿಸುವ ಅಭ್ಯಾಸವೆಂಬ ಯೋಗದಿಂದ ಕೂಡಿದವನು ಬೇರೆಕಡೆ ಹರಿಯದ ಮನಸ್ಸಿನಿಂದ, ಪರಮಪುರುಷವನ್ನು ಧ್ಯಾನಿಸುತ್ತಿದ್ದರೆ ಆ ದಿವ್ಯಪುರುಷನನ್ನು ಸೇರಿಕೊಳ್ಳುತ್ತಾನೆ. , , , . ಕವಿಂ ಪುರಾಣಮನುಶಾಸಿತಾರಮ್ ಅಣೋರಣೀಯಾಂಸಮನುಸ್ಮರೇದ್ಯಃ । ಸರ್ವಸ್ಯ ಧಾತಾರಮಚಿಂತ್ಯರೂಪಮ್ ಆದಿತ್ಯವರ್ಣ್ಂ ತಮಸಃ ಪರಸ್ತಾತ್ ।।೯।। ಕವಿಯೂ ಎಂದರೆ ಕ್ರಾಂತದರ್ಶಿಯಾದ ಸರ್ವಜ್ಞನೂ ಚಿರಂತನನೂ ಸರ್ವಜಗತ್ತಿನ ನಿಯಾಮಕನೂ ಅಣುವಿಗಿಂತ ಸೂಕ್ಷ್ಮತರನೂ ಸಮಸ್ತ ಕರ್ಮಫಲವನ್ನು ವಿಂಗಡಿಸಿ ನೀಡತಕ್ಕವನೂ ಊಹಿಸಲು ಶಕ್ಯವಿಲ್ಲದೆ ಅಚಿಂತ್ಯಸ್ವರೂಪನೂ ಸೂರ್ಯನಂತೆ ನಿತ್ಯಪ್ರಕಾಶನೂ ಅಜ್ಞಾನವೆಂಬ ಕತ್ತಲೆಯ ಆಚೆಗಿರವನೂ ಆದ ಪರಮಪುರುಷನನ್ನು ಆ ಯೋಗಿಯು ಸೇರಿಕೊಳ್ಳುತ್ತಾನೆ. ಪ್ರಯಾಣಕಾಲೇ ಮನಸಾಚಲೇನ ಭಕ್ತ್ಯಾಯುಕ್ತೋ ಯೋಗಬಲೇನ ಚೈವ । ಭ್ರುವೋರ್ಮಧ್ಯೇ ಪ್ರಾಣಮಾವೇಶ್ಯ ಸಮ್ಯಕ್ ಸ ತಂ ಪರಂ ಪುರುಷಮುಪೈತಿ ದಿವ್ಯಮ್ ।।೧೦।। ಪ್ರಯಾಣಕಾಲದಲ್ಲಿ ಎಂದರೆ ಮರಣಕಾಲದಲ್ಲಿ ಅಚಲವಾದ ಮನಸ್ಸಿನಿಂದಲೂ ಭಕ್ತಿಯಿಂದಲೂ ಯೋಗಬಲದಿಂದಲೂ ಯುಕ್ತನಾಗಿ, ಭ್ರೂಮಧ್ಯದಲ್ಲಿ ಪ್ರಾಣವಾಯುವನ್ನು ಸರಿಯಾಗಿ ನಿಲ್ಲಿಸಿ, ಯೋಗಿಯ ಪ್ರಕಾಶಮಯವಾದ ಆ ಪರಮಪುರುಷನನ್ನು ಸೇರಿಕೋಳ್ಳುತ್ತಾನೆ. 9-10: , , , , , , , ' , , ' , . ಯದಕ್ಷರಂ ವೇದವಿದೋ ವದಂತಿ ವಿಶಂತಿ ಯದ್ಯತಯೋ ವೀತರಾಗಾಃ । ಯದಿಚ್ಛಂತೋ ಬ್ರಹ್ಮಚರ್ಯಂ ಚರಂತಿ ತತ್ತೇ ಪದಂ ಸಂಗ್ರಹೇಣ ಪ್ರವಕ್ಷ್ಯೇ ।।೧೧।। ಯಾವ ಪದವನ್ನು ಅಕ್ಷರವೆಂದು ವೇದವಿದರು ಹೇಳುತ್ತಾರೋ ರಾಗರಹಿತರಾದ ಯತಿಗಳು ಯಾವುದನ್ನು ಪ್ರವೇಶಿಸುವರೋ ಯಾವುದನ್ನು ತಿಳಿಯಲು ಬಯಸತಕ್ಕವರು ಗುರುಶುಶ್ರೂಷಾದಿಬ್ರಹ್ಮಚರ್ಯವ್ರತವನ್ನು ಪಾಲಿಸುವರೋ ಪದವನ್ನು ನಿನಗೆ ಸಂಕ್ಷೇಪವಾಗಿ ತಿಳಿಸುವೆನು. , , , . ಸರ್ವದ್ವಾರಾಣಿ ಸಂಯಮ್ಯ ಮನೋ ಹೃದಿ ನಿರುಧ್ಯ ಚ । ಮೂರ್ಧ್ನ್ಯಾಧಾಯಾತ್ಮನಃ ಪ್ರಾಣಮಾಸ್ಥಿತೋ ಯೋಗಧಾರಣಾಮ್ ।।೧೨।। ಇಂದ್ರಿಯಗಳೆಂಬ ಎಲ್ಲ ದ್ವಾರಗಳನ್ನು ತಡೆಹಿಡಿದು, ಮನಸ್ಸನ್ನು ಹೃದಯಕಮಲದಲ್ಲಿ ನಿರೋಧಿಸಿ ತನ್ನ ಪ್ರಾಣವಾಯುವನ್ನು ನಡುನೆತ್ತಿಗೆ ಏರಿಸಿ, ಈ ಪ್ರಕಾರದ ಯೋಗಧಾರಣವನ್ನು ಅವಲಂಬಿಸಿದವನಾಗಿ - ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ ಮಾಮನುಸ್ಮರನ್ । ಯಃ ಪ್ರಯಾತಿ ತ್ಯಜನ್ ದೇಹಂ ಸ ಯಾತಿ ಪರಮಾಂ ಗತಿಮ್ ।।೧೩।। ಓಂ ಎಂಬ ಏಕಾಕ್ಷರದ ಶಬ್ದಬ್ರಹ್ಮವನ್ನು ಉಚ್ಚರಿಸುತ್ತ, ನನ್ನನ್ನು ಸ್ಮರಿಸುತ್ತ ಯಾವತನು ದೇಹತ್ಯಾಗ ಮಾಡಿ ಪ್ರಯಾಣಮಾಡುತ್ತಾನೋ ಅವನು ಪರಮ ಗತಿಯನ್ನೈದುತ್ತಾನೆ. 12-13: (), , ' , , - , , ' , . ಅನನ್ಯಚೇತಾಃ ಸತತಂ ಯೋ ಮಾಂ ಸ್ಮರತಿ ನಿತ್ಯಶಃ । ತಸ್ಯಾಹಂ ಸುಲಭಃ ಪಾರ್ಥ ನಿತ್ಯಯುಕ್ತಸ್ಯ ಯೋಗಿನಃ ।।೧೪।। ಅರ್ಜುನ, ಇನ್ನೊಂದು ವಸ್ತುವಿನಲ್ಲಿ ಚಿತ್ತವನ್ನಿಡದೆ ಯಾವತನು ನನ್ನನ್ನು ಸತತವಾಗಿ ದೀರ್ಘಕಾಲದವರೆಗೆ ಧ್ಯಾನಿಸುತ್ತಲೇ ಇರುತ್ತಾನೋ ಅಂತಹ ನಿತ್ಯಯುಕ್ತನಾದ ಯೋಗಿಗೆ ನಾನು ಸುಲಭವಾಗಿ ದೊರೆಯುತ್ತೇನೆ. , , , - , . ಮಾಮುಪೇತ್ಯ ಪುನರ್ಜನ್ಮ ದುಃಖಾಲಯಮಶಾಶ್ವತಮ್ । ನಾಪ್ನುವಂತಿ ಮಹಾತ್ಮಾನಃ ಸಂಸಿದ್ಧಿಂ ಪರಮಾಂ ಗತಾಃ ।।೧೫।। ಈಶ್ವರನಾದ ನನ್ನನ್ನು ಸೇರಿ ಮೋಕ್ಷವೆಂಬ ಪರಮಸಿದ್ಧಿಯನ್ನು ಪಡೆದ ಮಹಾತ್ಮರು ನಾನಾ ದುಃಖಗಳಿಗೆ ಆಗರವೂ, ಇದ್ದಂತೆ ಇರದೆ ಅಶಾಶ್ವತವೂ ಆದ ಪುನರ್ಜನ್ಮವನ್ನು ಪಡೆಯುವುದಿಲ್ಲ. , (ದುಃಖಾಲಯಂ) (ಅಶಾಶ್ವತಂ), . ಆಬ್ರಹ್ಮಭುವನಾಲ್ಲೋಕಾಃ ಪುನರಾವರ್ತಿನೋರ್ಜುನ । ಮಾಮುಪೇತ್ಯ ತು ಕೌಂತೇಯ ಪುನರ್ಜನ್ಮ ನ ವಿದ್ಯತೇ ।।೧೬।। ಅರ್ಜುನ, ಬ್ರಹ್ಮಲೋಕವನ್ನು ಮೊದಲ್ಗೊಂಡು ಸಮಸ್ತಲೋಕಗಳೂ ಮರಳಿ ಭೂಲೋಕಕ್ಕೆ ತಂದಿಳಿಸಿತಕ್ಕವೇ. ಆದರೆ ನನ್ನನ್ನು ಸೇರಿದ ಬಳಿಕ ಪುನರ್ಜನ್ಮವಿಲ್ಲ. , , , . ಸಹಸ್ರಯುಗಪರ್ಯಂತಮಹರ್ಯದ್ಬ್ರಹ್ಮಣೋ ವಿದುಃ । ರಾತ್ರಿಂ ಯುಗಸಹಸ್ರಾಂತಾಂ ತೇಹೋರಾತ್ರವಿದೋ ಜನಾಃ ।।೧೭।। ಹಗಲು ರಾತ್ರಿಗಳ ಕಾಲಸಂಖ್ಯೆಯನ್ನು ಬಲ್ಲ ಶಾಸ್ತ್ರಜ್ಞರು ಬ್ರಹ್ಮದೇವನ ಒಂದು ಹಗಲು ಒಂದು ಸಾವಿರ ಯುಗಪರ್ಯಂತವೆಂದೂ ಹಾಗೆಯೇ ರಾತ್ರಿಯೂ ಒಂದು ಸಾವಿರ ಯುಗಪರ್ಯಂತವೆಂದು ತಿಳಿದಿದ್ದಾರೆ. - - . ಅವ್ಯಕ್ತಾದ್ವ್ಯಕ್ತಯಃ ಸರ್ವಾಃ ಪ್ರಭವಂತ್ಯಹರಾಗಮೇ । ರಾತ್ರ್ಯಾಗಮೇ ಪ್ರಲೀಯಂತೇ ತತ್ರೈವಾವ್ಯಕ್ತಸಂಜ್ಞಿಕೇ ।।೧೮।। ಬ್ರಹ್ಮದೇವನಿಗೆ ಹಗಲಾದಾಗ ಎಂದರೆ - ಅವನ ಎಚ್ಚರದ ಕಾಲದಲ್ಲಿ ಅವ್ಯಕ್ತದಿಂದ ಸಮಸ್ತ ವ್ಯಕ್ತಿಗಳೂ ಉದ್ಭವಿಸುತ್ತವೆ. ಅವನಿಗೆ ರಾತ್ರಿ ಆದಾಗ ಈ ವ್ಯಕ್ತಿಗಳೆಲ್ಲವೂ ಅದೇ ಅವ್ಯಕ್ತದಲ್ಲಿ ಅಡಗಿಹೋಗುತ್ತವೆ. , ; , , . ಭೂತಗ್ರಾಮಃ ಸ ಏವಾಯಂ ಭೂತ್ವಾ ಭೂತ್ವಾ ಪ್ರಲೀಯತೇ । ರಾತ್ರ್ಯಾಗಮೇ ಅವಶಃ ಪಾರ್ಥ ಪ್ರಭವತ್ಯಹರಾಗಮೇ ।।೧೯।। ಅದೇ ಈ ಸ್ಥಾವರಜಂಗಮಗಳೆಂಬ ಭೂತಸಮುದಾಯವು ಅವಶವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದೆ ಹುಟ್ಟಿ ಹುಟ್ಟಿ ಬ್ರಹ್ಮ್ದೇವನಿಗೆ ರಾತ್ರಿಯಾದಕೂಡಲೆ ಲಯವಾಗುತ್ತದೆ. ಅರ್ಜುನ, ಮತ್ತೆ ಹಗಲಾದೊಡನೆ ಕಾಣಿಸಿಕೊಳ್ಳುತ್ತದೆ. , , , . ಪರಸ್ತಸ್ಮಾತ್ತು ಭಾವೋನ್ಯೋ ಅವ್ಯಕ್ತೋಅವ್ಯಕ್ತಾತ್ ಸನಾತನಃ । ಯಃ ಸ ಸರ್ವೇಷು ಭೂತೇಷು ನಶ್ಯತ್ಸು ನ ವಿನಶ್ಯತಿ ।।೨೦।। ಆದರೆ ಆ ಅವ್ಯಕ್ತವೆಂಬ ಅವಿದ್ಯೆಗಿಂತಲೂ ಬೇರೆ ಬಗೆಯದಾದ ಸನಾತನವಾದ ಇನ್ನೊಂದ ಅವ್ಯಕ್ತವೆಂಬ ಭಾವಪದಾರ್ಥ ಉಂಟು. ಸಕಲಭೂತಗಳು ನಾಶವಾದರೂ ಅದಕ್ಕೆ ನಾಶವೆಂಬುದಿಲ್ಲ. , , . ಅವ್ಯಕ್ತೋಕ್ಷರ ಇತ್ಯುಕ್ತಸ್ತಮಾಹುಃ ಪರಮಾಂ ಗತಿಮ್ । ಯಂ ಪ್ರಾಪ್ಯ ನ ನಿವರ್ತಂತೇ ತದ್ಧಾಮ ಪರಮಂ ಮಮ ।।೨೧।। ಆ ಅವ್ಯಕ್ತವನ್ನೇ ಅಕ್ಷರವೆಂದು ಹಿಂದೆ ಕರೆದಿದೆ. ಅದೇ ಪ್ರಾಣೀಗಳ ಪರಮಗತಿಯೆಂದು ಹೇಳುತ್ತಾರೆ. ಏಕೆಂದರೆ ಆ ಭಾವವನ್ನು ಪಡೆದುಕೊಂಡರೆ ಸಂಸಾರಕ್ಕೆ ಮರಳಿ ಬರುವುದಿಲ್ಲ. ಅದೇ ನನ್ನ ಪರಮಧಾಮ. ಪುರುಷಃ ಸ ಪರಃ ಪಾರ್ಥ ಭಕ್ತ್ಯಾ ಲಭ್ಯಸ್ತ್ವನನ್ಯಯಾ । ಯಸ್ಯಾಂತಃಸ್ಥಾನಿ ಭೂತಾನಿ ಯೇನ ಸರ್ವಮಿದಂ ತತಮ್ ।।೨೨।। ಅಕ್ಷರನೆಂಬ ಆ ಪರಮಪುರುಷನು, ಪಾರ್ಥ, ಕೇವಲ ಆತ್ಮವಿಷಯಕವಾದ ಭಕ್ತಿಯೆಂಬ ಜ್ಞಾನದಿಂದ ದೊರೆಯುತ್ತಾನೆ. ಈ ಭೂತಗಳೆಲ್ಲವೂ ಆತನೊಳಗೆ ಸೇರಿಕೊಂಡಿವೆ. ಆತನು ಎಲ್ಲೆಲ್ಲಿಯೂ ಸರ್ವವನ್ನೂ ವ್ಯಾಪಿಸಿದ್ದಾನೆ. ಯತ್ರ ಕಾಲೇ ತ್ವನಾವೃತ್ತಿಮಾವೃತ್ತಿಂ ಚೈವ ಯೋಗಿನಃ । ಪ್ರಯಾತಾ ಯಾಂತಿ ತಂ ಕಾಲಂ ವಕ್ಷ್ಯಾಮಿ ಭರತರ್ಷಭ ।।೨೩।। ಹೇ ಭರತಕುಲೋತ್ತಮ, ಯೋಗಿಗಳು ಯಾವ ಕಾಲದಲ್ಲಿ ಪ್ರಯಾಣ ಮಾಡಿದರೆ ಅಣಾವೃತ್ತಿಯನ್ನು ಪಡೆಯುತ್ತಾರೋ ಮತ್ತು ಯಾವ ಕಾಲದಲ್ಲಿ ಮೃತರಾದರೆ ಅವೃತ್ತಿಯನ್ನು ಎಂದರೆ ಪುನರ್ಜನ್ಮವನ್ನು ಪಡೆಯುತ್ತಾರೋ ಆ ಕಾಲವನ್ನು ಹೇಳುವೆನು. ಅಗ್ನಿರ್ಜ್ಯೋತಿರಹಃ ಶುಕ್ಲಃ ಷಣ್ಮಾಸಾ ಉತ್ತರಾಯಣಮ್ । ತತ್ರ ಪ್ರಯಾತಾ ಗಚ್ಛಂತಿ ಬ್ರಹ್ಮ ಬ್ರಹ್ಮವಿದೋ ಜನಾಃ ।।೨೪।। ಅಗ್ನಿ, ಜ್ಯೋತಿ, ಹಗಲು, ಶುಕ್ಲಪಕ್ಷ, ಉತ್ತರಾಯಣದ ಆರು ತಿಂಗಳು - ಇವುಗಳಲ್ಲಿ ಪ್ರಯಾಣಮಾಡುವ ಬ್ರಹ್ಮಜ್ಞರಾದ ಜನರು ಕ್ರಮವಾಗಿ ಬ್ರಹ್ಮವನ್ನು ಸೇರುತ್ತಾರೆ. ಧೂಮೋ ರಾತ್ರಿಸ್ತಥಾ ಕೃಷ್ಣಃ ಷಣ್ಮಾಸಾ ದಕ್ಷಿಣಾಯನಮ್ । ತತ್ರ ಚಾಂದ್ರಮಸಂ ಜ್ಯೋತಿರ್ಯೋಗೀ ಪ್ರಾಪ್ಯ ನಿವರ್ತತೇ ।।೨೫।। ಧೂಮ, ರಾತ್ರಿ, ಕೃಷ್ಣಪಕ್ಷ, ದಕ್ಷಿಣಾಯನದ ಆರು ತಿಂಗಳು - ಇವುಗಳಲ್ಲಿ ಪ್ರಯಾಣಮಾಡಿದ ಯೋಗಿಯು ಚಂದ್ರನ ಜ್ಯೋತಿಯನ್ನು ಸೇರಿ ಮತ್ತೆ ಹಿಂದಿರುಗಿ ಪುನರ್ಜನ್ಮವನ್ನು ಪಡೆಯುವನು. ಶುಕ್ಲಕೃಷ್ಣೇ ಗತೀ ಹ್ಯೇತೇ ಜಗತಃ ಶಾಶ್ವತೇ ಮತೇ । ಏಕಯಾ ಯಾತ್ಯನಾವೃತ್ತಿಮನ್ಯಯಾವರ್ತತೇ ಪುನಃ ।।೨೬।। ಶುಕ್ಲ, ಕೃಷ್ಣಗಳೆಂಬ ಈ ಎರಡು ಗತಿಗಳು ಜಗತ್ತಿಗೆ ಶಾಶ್ವತವಾಗಿರುತ್ತವೆ. ಇವುಗಳಲ್ಲಿ ಒಂದರಿಂದ ಹೋದವನು ಪುನರ್ಜನ್ಮವನ್ನು ಪಡೆಯುವುದಿಲ್ಲ. ಇನ್ನೊಂದರಿಂದ ಹೋದವನು ಮತ್ತೆ ಹಿಂದಿರುಗಿ ಬರುತ್ತಾನೆ. ನೈತೇ ಸೃತೀ ಪಾರ್ಥ ಜಾನನ್ಯೋಗೀ ಮುಹ್ಯತಿ ಕಶ್ಚನ । ತಸ್ಮಾತ್ಸರ್ವೇಷು ಕಾಲೇಷು ಯೋಗಯುಕ್ತೋ ಭವಾರ್ಜುನ ।।೨೭।। ಅರ್ಜುನ, ಈ ಎರಡು ಸೃತಿಗಳು ಎಂದರೆ ಮಾರ್ಗಗಳು ಸರಿಯಾಗಿ ತಿಳಿದುಕೊಂಡಿದ್ದರೆ - ಎಂದರೆ ದೇವಯಾನದಲ್ಲಿ ಹೋದವರಿಗೆ ಸಂಸಾರವಿಲ್ಲವೆಂದೂ ಪಿತೃಯಾಣದಲ್ಲಿ ಹೋದರೆ ಸಂಸಾರ ಉಂಟೆಂದೂ ಮನವರಿಕೆ ಮಾಡಿಕೊಂಡಿದ್ದರೆ, ಯಾವ ಯೋಗಿಯೂ ಮೋಹಕ್ಕೆ ಈಡಾಗುವುದಿಲ್ಲ. ಆದ್ದರಿಂದ ನೀನು ಸಮಾಹಿತನಾಗಿರು. ವೇದೇಷು ಯಜ್ಞೇಷು ತಪಃಸು ಚೈವ ದಾನೇಷು ಯತ್ಪುಣ್ಯಫಲಂ ಪ್ರದಿಷ್ಟಮ್ । ಅತ್ಯೇತಿ ತತ್ಸರ್ವಮಿದಂ ವಿದಿತ್ವಾ ಯೋಗೀ ಪರಂ ಸ್ಥಾನಮುಪೈತಿ ಚಾದ್ಯಮ್ ।।೨೮।। ನಿನ್ನ ಏಳು ಪ್ರಶ್ನೆಗಳಿಗೆ ಉತ್ತರವಾದ ಇದನ್ನು ಅರಿತುಕೊಂಡ ಯೋಗಿಯು ವೇದಾಧ್ಯಯನ, ಯಜ್ಞಾನುಷ್ಠಾನ, ತಪಶ್ಚರ್ಯೆ, ಐಶ್ವರ್ಯದಾನ - ಇವನ್ನು ಚೆನ್ನಾಗಿ ಆಚರಿಸಿದರೆ ಯಾವ ಪುಣ್ಯಫಲವನ್ನೂ ದಾಟಿಹೋಗುವನು. ಅವನು ಪ್ರಕೃಷ್ಟವಾದ ಸ್ಥಾನವನ್ನು ಆದಿಕಾರಣವಾದ ಬ್ರಹ್ಮವನ್ನೈದುವನು.