ಅಗಳಿ ಆಂದ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ (ಮಂಡಲ್) ಹೋಬಳಿ ಕೇಂದ್ರವಾಗಿದೆ. === ಕರ್ನಾಟಕಗಡಿ === ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಹಾಗೂ ಶಿರಾ ತಾಲ್ಲೂಕುಗಳ ಗಡಿ ಭಾಗದಲ್ಲಿ ಈ ಹೋಬಳಿ ಬರುತ್ತದೆ. === ಕನ್ನಡಿಗರ ಪ್ರಾಭಲ್ಯ === ಅಗಳಿ ಮಂಡಲ್(ಹೋಬಳಿ)ನಲ್ಲಿ ಹೆಚ್ಚಿನದಾಗಿ ಕನ್ನಡಿಗರಿದ್ದು ಇಲ್ಲಿನ ಬಹುತೇಕ ವ್ಯವಹಾರ ಕರ್ನಾಟಕದೊಂದಿಗೆ ನಡೆಯುತ್ತದೆ. === ರಾವುಡಿ === ಮದೂಡಿ ಸಮೀಪ ರಾವುಡಿ ಗ್ರಾಮದಲ್ಲಿ ಪುರಾತನ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಇದೆ. ಈ ದೇವಾಲಯಕ್ಕೆ ಬಹುತೇಕ ಕರ್ನಾಟಕದ ಭಕ್ತ ಸಮೂಹವಿದೆ. ಇಲ್ಲಿ ಸುಮಾರು 300 ವರ್ಷಗಳ ಇತಿಹಾಸವುಳ್ಳ ವೀರಭದ್ರಸ್ವಾಮಿ ದೇವಸ್ಥಾನವು ಮಧೂಡಿ ಗ್ರಾಮದಲ್ಲಿದೆ.ಜಾತ್ರೆಯು ಪ್ರತಿ ವರ್ಷವೂ ಅದ್ದೂರಿಯಾಗಿ ನಡೆಯುತ್ತದೆ.ಇಲ್ಲಿನ ರಸ್ತೆಗಳೂ ಸಹ ಶ್ರೀಮಾನ್ ರಘುವೀರರೆಡ್ಡಿಯವರ ಕೃಪಕಟಾಕ್ಷದಿಂದ ಉತ್ತಮವಾಗಿದೆ.