ಅಗಸನೂರು ಇದು ಹಳ್ಳಿಯ ಹೆಸರಾಗಿದ್ದು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದೆ. ಈ ಊರಿನ ವಿಶಿಷ್ಟತೆ ಎಂದರೆ, ಇಲ್ಲಿ ಮೊಹರಮ್ ಹಬ್ಬವನ್ನು ಅಕ್ಷರಶಃ ಅದ್ಭುತವಾಗಿ ಆಚರಿಸಲಾಗುತ್ತದೆ. ಈ ಹಬ್ಬವು ಇಲ್ಲಿನ ಜನರ ಏಕತಾ ಮನೋಭಾವಕ್ಕೆ ಹಿಡಿದ ಕನ್ನಡಿಯಾಗಿದೆ.