ಅಗೋಂಡಾ ದಕ್ಷಿಣ ಗೋವಾ ಜಿಲ್ಲೆಯ ಕ್ಯಾನಕೋನಾದಲ್ಲಿ ಸ್ಥಿತವಾಗಿರುವ ಒಂದು ದೊಡ್ಡ ಹಳ್ಳಿಯಾಗಿದೆ. ಅಗೋಂಡಾ ಅದರ ಬೀ‍ಚ್‍ಗೆ ಪ್ರಸಿದ್ಧವಾಗಿದೆ. ಇದು ಕರಾವಳಿ ನಿಯಂತ್ರಣ ವಲಯ ೨೦೧೧ರ ಅಧಿಸೂಚನೆಯಡಿ ಆಮೆ ಗೂಡುಕಟ್ಟುವಿಕೆ ತಾಣಗಳೆಂದು ಹೆಸರಿಸಲಾದ ನಾಲ್ಕೇ ನಾಲ್ಕು ಬೀ‍ಚ್‍ಗಳಲ್ಲಿ ಒಂದು. ಅಗೋಂಡಾ ಕಡಿಬಂಡೆಯ ಮತ್ತೊಂದೆಡೆ ಕೋಲಾ ಬೀಚ್ ಎಂದು ಕರೆಯಲ್ಪಡುವ ಇನ್ನೊಂದು ಬೀಚ್ ಇದ್ದು ಇದು ಪಕ್ಕದಲ್ಲಿ ಲಗೂನ್‍ನ್ನು ಹೊಂದಿದೆ. == ಅಗೋಂಡಾ ಬೀಚ್ == ಅಗೋಂಡಾ ಬೀಚ್ ಗೋವಾದ ಅಗೋಂಡಾ ಹಳ್ಳಿಯಲ್ಲಿ ಸ್ಥಿತವಾಗಿರುವ ಒಂದು ಸಾರ್ವಜನಿಕ ಬೀಚ್ ಆಗಿದೆ. ಇದು ಪಾಲೊಲೆಮ್ ಬೀ‍ಚ್‍ನ ಉತ್ತರಕ್ಕೆ ಸುಮಾರು ೯.೨ ಕಿಲೋಮೀಟರ್ ದೂರದಲ್ಲಿ ಮತ್ತು ಮಡಗಾಂವ್‍ನಿಂದ ಸುಮಾರು ಒಂದು ಗಂಟೆ ದೂರದಲ್ಲಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ, ಈ ಬೀಚ್ ಆಲಿವ್ ರಿಡ್ಲಿ ಕಡಲ ಆಮೆಗಳಿಗೆ ಗೂಡುಕಟ್ಟುವಿಕೆಯ ಸ್ಥಾನವಾಗುತ್ತದೆ. == ಉಲ್ಲೇಖಗಳು ==