ಕ್ಷಿಪಣಿ : ಯಾವುದೇ ರೀತಿಯಲ್ಲಿ) ಚಿಮ್ಮಿದ ವಸ್ತು ಯಾ ಚಿಮ್ಮಿದ ಅಸ್ತ್ರ == ಭಾರತದ ಕ್ಷಿಪಣಿಗಳು == == ಅಗ್ನಿ-೪ ರ ಪ್ರಯೋಗ ಪರೀಕ್ಷೆ == 3 , 2017 ಒಡಿಶಾದ ಬಾಲಸೋರ್‌ ನಲ್ಲಿ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ, 4 ಸಾವಿರ ಕಿ.ಮೀ. ವ್ಯಾಪ್ತಿಯಲ್ಲಿ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಖಂಡಾಂತರ ಕ್ಷಿಪಣಿ ‘ಅಗ್ನಿ–4’ರ ಕೊನೆಯ ಪರೀಕ್ಷೆ ಯಶಸ್ವಿಯಾಗಿದೆ. ‘ಅಗ್ನಿ–5’ ಕ್ಷಿಪಣಿಯ ಯಶಸ್ವಿ ಪರೀಕ್ಷೆಯ ಬೆನ್ನಲ್ಲೇ ನಡೆದ ಈ ಉಡಾವಣೆ ಭಾರತದ ರಕ್ಷಣಾ ವ್ಯವಸ್ಥೆಯ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. == ಮಾಹಿತಿ ವಿವರ == ಪ್ರಮುಖ ಮಾಹಿತಿಹಳು ಒಡಿಶಾ ಕರಾವಳಿಯಲ್ಲಿರುವ ಅಬ್ದುಲ್‌ ಕಲಾಂ ದ್ವೀಪದಲ್ಲಿ ದಿ. 2-1-2017 ಸೋಮವಾರ ಬೆಳಿಗ್ಗೆ 11.55ಕ್ಕೆ ಉಡಾವಣೆ. ಉಡಾವಣೆಗೆ ಸಂಚಾರಿ ಉಡಾವಣಾ ವಾಹನದ (ಮೊಬೈಲ್‌ ಲಾಂಚರ್‌) ಬಳಕೆ. ಕ್ಷಿಪಣಿಯನ್ನು ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ. ರಿಂಗ್‌ ಲೇಸರ್‌ ಜೈರೊ ಬೇಸ್ಡ್‌ ಇನರ್ಷಿಯಲ್‌ ನೇವಿಗೇಷನ್‌ ಸಿಸ್ಟಮ್‌ (ಆರ್‌ಐಎನ್‌ಎಸ್) ಮತ್ತು ಸೂಕ್ಷ್ಮ ಪಥದರ್ಶಕ ವ್ಯವಸ್ಥೆಗಳನ್ನು (ಎಂಐಎಸ್‌ಎಸ್‌) ಅಳವಡಿಸಲಾಗಿದ್ದು, ನಿಖರವಾಗಿ ಗುರಿ ತಲುಪಬಲ್ಲದು. ‘ಅಗ್ನಿ–4’ ಕ್ಷಿಪಣಿಯ ಅಭಿವೃದ್ಧಿ ಹಂತದಲ್ಲಿ ನಡೆದ ಆರನೇ ಪರೀಕ್ಷೆ ಇದು. ಈ ಕ್ಷಿಪಣಿಯ 5ನೇ ಪರೀಕ್ಷೆ 2015ರ ನವೆಂಬರ್‌ 9 ರಂದು ನಡೆದಿತ್ತು. ರಕ್ಷಣಾ ಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸುವ ಹಾದಿ ಸುಗಮ. ಅಗ್ನಿ–1, ಅಗ್ನಿ–2 ಮತ್ತು ಅಗ್ನಿ–3 ಕ್ಷಿಪಣಿಗಳನ್ನು ಈಗಾಗಲೇ ಸೇನೆಗೆ ಸೇರ್ಪಡೆಗೊಳಿಸಲಾಗಿದೆ. (ಆಧಾರ:ಡಿಆರ್‌ಡಿಒ ಮೂಲಗಳು) == ‘ಅಗ್ನಿ–5’ == 5 ಸಾವಿರ ಕಿ.ಮೀ. ವ್ಯಾಪ್ತಿಯಲ್ಲಿ ದಾಳಿ ನಡೆಸಬಲ್ಲ ‘ಅಗ್ನಿ-೫’ ಕ್ಷಿಪಣಿಯ ಅಭಿವೃದ್ಧಿ ಹಂತದ ಪರೀಕ್ಷೆ ಡಿ. 26 ರಂದು ನಡೆದಿತ್ತು. ಚೀನಾ ಸೇರಿದಂತೆ ಏಷ್ಯಾದ ಬಹುತೇಕ ಭಾಗವನ್ನು ಇದು ತಲುಪಬಲ್ಲದು. ನೆಲದಿಂದ ನೆಲಕ್ಕೆ ಚಿಮ್ಮುವ ಕ್ಷಿಪಣಿ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಈ ಪರೀಕ್ಷಾರ್ಥ ಪ್ರಯೋಗದಲ್ಲಿ ಎಲ್ಲ ಉದ್ದೇಶಗಳು ಈಡೇರಿವೆ. == ಅಗ್ನಿ ೨-೩-೪-೫ ರ ವ್ಯಾಪ್ತಿ == == ನೋಡಿ == ಚಿತ್ರ:: 'ಅಗ್ನಿ ಪುತ್ರಿ' ಟೆಸ್ಸಿ : ಡಿಆರ್‌ಡಿಒ ವೈಮಾನಿಕ ವ್ಯವಸ್ಥೆಯ ಮಹಾ ನಿರ್ದೇಶಕಿಯಾಗಿ ಟೆಸ್ಸಿ ಥಾಮಸ್ ನೇಮಕ; 29 , 2018 ಅಗ್ನಿ ಪುತ್ರಿ ;ಸಿ. ಜಿ. ಮಂಜುಳಾ ;28 , 2012 2018-06-03 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು == == ಉಲ್ಲೇಖ ==