ಇದು ಒಂದು ಬಳ್ಳಿಯ ರೀತಿ ಹರಡಿಕೊಂಡು ಬೆಳೆಯುವ ಗಿಡವಾಗಿದೆ. ಇದನ್ನು ಕೋಲ್ಚಿಕೇಸಿ ಸಸ್ಯ ಕುಟುಂಬದಲ್ಲಿ ಸೇರಿಸಲಾಗಿದೆ. ಈ ಗಿಡದ ಇತರ ಹೆಸರುಗಳೆಂದರೆ, ಶಿವಶಕ್ತಿ ಬಳ್ಳಿ, ಗೌರಿಹೂ, ಅಕ್ಕತಂಗಿ ಗಿಡ, ನೆಲಗುಲಿಕ ಲಾಂಗುಲಿಕ ಮಲಬಾರ್ ಗ್ಲೊರಿಲಿಲ್ಲಿ, ಕೋಳಿಕಟುಕನ ಗಡ್ಡೆ, ಕಾಲಿಹರಿ ಇತ್ಯಾದಿ. ಇದು ಹೂವುಗಳನ್ನು ಬಿಡುವ ಗಿಡ/ಬಳ್ಳಿಯಾಗಿದ್ದು, ಇದರ ಮೂಲ ಜನ್ಮಸ್ಥಾನ ಆಫ್ರಿಕ ಮತ್ತು ಏಷಿಯಾ ಖಂಡಗಳು. ಏಕದಳ ಬೀಜಗಳನ್ನು () ಹೊಂದಿರುತ್ತದೆ. ಇದರ ಗಡ್ಡೆ ವಿಷಗುಣವುಳ್ಳದ್ದಾಗಿದೆ. == ಭಾರತೀಯ ಭಾಷೆಗಳಲ್ಲಿ ಇದರ ಸಾಧಾರಣ ಹೆಸರು == : , , , ಹಿಂದಿ: (बचनाग) , ,( करी हरी) , ,(उलट चन्दल) ಮರಾಠಿ: (कळ लावी) -, , , (वाघचबका) ತಮಿಳು: கலப்பை கிழங்கு ಮಲಯಾಳಂ: , ತೆಲುಗು: (అగ్నీసిఖా) ಬೆಂಗಾಲಿ: , ಒರಿಯ: , , , ಉರ್ದು: , ಗುಜರಾತಿ: (દૂધિઓ) , (વછોનાગ) ಸಂಸ್ಕೃತ: (अग्निमुखी) ,(अग्निशिखा) , , , , ನೇಪಾಳ:(नेपाली केवारा) == ಮೂಲ ಮತ್ತು ಪ್ರಭೇದಗಳು == ಗ್ಲೋರಿಯೋಸಾದ ಉಪವರ್ಗಗಳು ಆಫ್ರಿಕಾದ ಉತ್ತರ ಮತ್ತು ದಕ್ಷಿಣ ಭಾಗಗಳು, ಮಡಗಾಸ್ಕರ್, ಭಾರತ, ಶ್ರೀಲಂಕಾ, ಇಂಡೋನೇಷ್ಯಾ ದೇಶಗಳಲ್ಲಿ ಕಂಡುಬರುತ್ತವೆ. ಇಲ್ಲಿ ಕಂಡುಬರುವ ಗ್ಲೋರಿಯೋಸಾ ಸೂಪರ್ಬಾದ ಮೂಲ ಭಾರತವೇ ಆಗಿದೆ. ಇದರ ಇನ್ನೊಂದು ಪ್ರಬೇಧ ಗ್ಲೋರಿಯೋಸಾ ರೋಟ್ಷಿಲ್ಡಿಯಾನಾ ಸಹ ಭಾರತದಲ್ಲಿ ಕಂಡುಬರುತ್ತದೆ. ಬೇರೆ ದೇಶಗಳಲ್ಲಿ ಬೆಳೆಯಲ್ಪಡುವ ಇತರ ಪ್ರಭೇದಗಳೆಂದರೆ, ಗ್ಲೋರಿಯೋಸಾ ಕಾರ್ಸೊನಿ, ಗ್ಲೋರಿಯೋಸಾ ಪ್ಲಾಂಟಿ, ಗ್ಲೋರಿಯೋಸಾ ಸಿಂಪ್ಲೆಕ್ಸ್, ಗ್ಲೋರಿಯೋಸಾ ಅಬಿಸೀನಿಕಾ, ಗ್ಲೋರಿಯೋಸಾ ರಿಚ್ಮಾಂಡೆನ್ಸಿಸ್, ಗ್ಲೋರಿಯೋಸಾ ವೈರೆಸೆನ್ಸ್, ಗ್ಲೋರಿಯೋಸಾ ಲುಟಿಯಾ, ಗ್ಲೋರಿಯೋಸಾ ಮ್ಯಾಗ್ನಿಫಿಕಾ, ಗ್ಲೋರಿಯೋಸಾ ಲಾಂಗಿಫೋಲಿಯಾ ಮತ್ತು ಗ್ಲೋರಿಯೋಸಾ ಲ್ಯಾಟಿಫೋಲಿಯಾ. == ಭಾರತದಲ್ಲಿ == ಅಪರೂಪವಾಗಿ ಬೆಳೆಯುವ ಈ ಸಸ್ಯವನ್ನು ಭಾರತದ ಎಲ್ಲ ಬಗೆಯ ಅರಣ್ಯ ಪ್ರದೇಶಗಳಲ್ಲಿ ಕಾಣಬಹುದು. ಇದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಹ ಬೆಳೆಯುತ್ತದೆಂದು ಹೇಳಲಾಗಿದೆ. == ಸಸ್ಯ ವಿವರಣೆ == ಇದು ನೇರವಾಗಿ ಬೆಳೆಯುವ ಪರ್ಯಾಯವಾಗಿ ಜೋಡಣೆ ಹೊಂದಿರುವ ಎಲೆಗಳಿರುವ ಸಸ್ಯ. ಇದರ ಹೂವು ಕೊಂಬೆಯ ತುದಿಯ ಎಲೆಯ ಕಂಕುಳದಲ್ಲಿದ್ದು ಕೆಂಪು ಮಿಶ್ರಿತ ಹಳದಿ ಬಣ್ಣದ್ದಾಗಿದೆ. ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲಿ ಹೂ ಬಿಡುವ ಇದು ನೋಡುಗರನ್ನು ಆಕರ್ಷಿಸುತ್ತದೆ. ಇದರ ತಳಭಾಗದಲ್ಲಿರುವ (ಮಣ್ಣಿನೊಳಗೆ) ಗಡ್ಡೆ ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಇದು ೩.೦ ರಿಂದ ೩.೫ ಮೀಟರುಗಳ ಉದ್ದದಲ್ಲಿ ಹರಡುವ ಬಳ್ಳಿ. ಎಲೆಯ ಕಡೆಭಾಗ/ಶೀರ್ಷಭಾಗ ನುಲಿಗೊಳ್ಳಿರುತ್ತದೆ. ಇದರಲ್ಲಿ ನೆಲದಲ್ಲಿ ಹುದುಗಿದ ರೈಜ಼ೋಮ್ ಎಂಬ ಕಾಂಡವಿರುತ್ತದೆ. ಇದು ಇಂಗ್ಲಿಷಿನ ‘ವಿ’ ಅಕ್ಷರವನ್ನು ಹೋಲುತ್ತದೆ. ಭೂಮಿಯ ಮೇಲೆ ಬೆಳೆದಿರುವ ಕಾಂಡ ಸಪೂರವಾಗಿದ್ದು, ಇತರೆ ಸಸ್ಯಗಳ ಅಥವಾ ವಸ್ತುಗಳ ಆಸರೆ ಪಡೆದು ಬೆಳೆಯುವ ಬಳ್ಳಿ. ಎಲೆಯ ತುದಿ ಸುರುಳಿಯಂತಿದ್ದು, ಬೇರೆ ವಸ್ತುಗಳಿಗೆ ಆಸರೆಗಾಗಿ ಸುತ್ತಿ ತಾನು ಬೆಳೆಯುತ್ತದೆ. ಹೂವುಗಳು 8-10 ಸೆಂ.ಮೀ. ಉದ್ದವಿದ್ದು ದಳಗಳು ಹೂವಿನ ಹಿಂಭಾಗಕ್ಕೆ ಉರ್ಧ್ವಮುಖವಾಗಿರುತ್ತವೆ. ಕೇಸರ ಮತ್ತು ಶಲಾಕೆ ಭೂಮಿಯ ಕಡೆಗೆ ಮುಖಮಾಡಿಕೊಂಡಿರುತ್ತವೆ. ದಳದ ಅಂಚು ಅಲೆ ಅಲೆಯಾಗಿರುತ್ತದೆ. ಹೂವು ಅರಳಿದಾಗ ದಳದ ಮಧ್ಯಭಾಗ ಹಳದಿಯಾಗಿದ್ದು ಆದಿ ಮತ್ತು ತುದಿ ಭಾಗಗಳು ಕೆಂಪಗೆ ಇರುತ್ತವೆ. ಒಣಗಿಸಿ ತುಂಡರಿಸಿದ ರೈಜ಼ೋಮ್‍ಗಳು ಘಾಟಿನಿಂದ ಕೂಡಿದ್ದು ಕಹಿಯಾಗಿರುತ್ತದೆ. ಈ ಸಸ್ಯದ ರೈಜ಼ೋಮಿನಿಂದ ಗ್ಲೋರಿಯೋಸಿನ್ ಎಂಬ ಆಲ್ಕಲಾಯ್ಡ್ ತಯಾರಿಸುತ್ತಾರೆ. ಅಗ್ನಿಶಿಖಾದ ಸಸ್ಯಾಭಿವೃದ್ಧಿ ಇದರ ಬೀಜ ಮತ್ತು ಕಾಂಡಗಳಿಂದ ಸಾಧ್ಯ. ಇದರ ಕಾಂಡಗಳನ್ನು ಮಳೆಗಾಲದಲ್ಲಿ ನರ್ಸರಿ ಮಡಿಗಳಲ್ಲಿ ನಾಟಿ ಮಾಡಿ ಸಸ್ಯಗಳನ್ನು ಪಡೆದುಕೊಳ್ಳಬಹುದು. ನಾಟಿ ಮಾಡಿದ ೬ ತಿಂಗಳುಗಳಲ್ಲಿ ಇದರ ಹಣ್ಣುಗಳನ್ನು ಕೊಯ್ಲು ಮಾಡಬಹುದು. ಸಂಗ್ರಹಿಸಿದ ಹಣ್ಣುಗಳನ್ನು ೧೦ ರಿಂದ ೧೫ ದಿನಗಳ ಕಾಲ ನೆರಳಿನಲ್ಲಿ ಒಣಗಿಸಬೇಕು. ಒಂದು ಎಕರೆ ಅಗ್ನಿಶಿಖಾ ಕೃಷಿಯಿಂದ ವಾರ್ಷಿಕವಾಗಿ ಸುಮಾರು ೧೨೨ ಕಿ.ಗ್ರಾಂ. ಬೀಜಗಳನ್ನು ಸಂಗ್ರಹಿಸಬಹುದು. ಕಾಯಿ: ಕಾಯಿ/ಹಣ್ಣುಗಳು ೭-೮ ಸೆಂ.ಮೀ.ಗಳ ಉದ್ದವಾಗಿರುತ್ತವೆ. ಹಣ್ಣಿನೊಳಗೆ ೪೦-೫೦ ಬೀಜಗಳಿರುತ್ತವೆ. ಬೀಜಗಳು ಕೆಂಪು ಬಣ್ಣ ಕೂಡಿದ ಕಿತ್ತಳೆ ಬಣ್ಣವನ್ನು ಹೊಂದಿರುತ್ತವೆ. ಬೀಜದಿಂದ ಕೊಲ್ಬೋಸಿಸ್ ಯನ್ನುವ ಆಲ್ಕಾಲಾಯಿಡ್ ಲಭ್ಯವಾಗುತ್ತದೆ. ಗಡ್ಡೆ: ಇದರ ಗಡ್ಡೆಗಳನ್ನು ೬ ವರ್ಷಗಳ ನಂತರ ಹೊರ ತೆಗೆಯಬೇಕು. ಈ ಗಡ್ಡೆಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ನೆರಳಲ್ಲಿ ಒಣಗಿಸಿಡಬೇಕು. ಈ ರೀತಿ ಸರಿಯಾಗಿ ಒಣಗಿಸಿದ ಗಡ್ಡೆಯನ್ನು ೨ ವರ್ಷಗಳ ಕಾಲ ಶೇಖರಿಸಿಡಬಹುದಾಗಿದೆ. ಆರು ವರ್ಷಗಳ ಬಳಿಕ ಅದರಿಂದ ಪಡೆಯ ಬಹುದಾದ ಗಡ್ಡೆಯ ಪ್ರಮಾಣ ಸುಮಾರು ೧.೨೨ ಟನ್‌ಗಳಷ್ಟಾಗಬಹುದು. == ಅಗ್ನಿಶಿಖಾದ ಉಪಯೋಗಗಳು == ಆಯುರ್ವೇದ ಶಾಸ್ತ್ರದಲ್ಲಿ ರೈಜ಼ೋಮಿನಿಂದ ತಯಾರಿಸಿದ ಕಣಕವನ್ನು ಗೊನೇರಿಯ, ಕುಷ್ಠರೋಗಗಳಿಗೆ ಬಳಸುತ್ತಾರೆ. ಹೆರಿಗೆ ನೋವು ಬರಿಸಲು ಸಹ ಕಣಕವನ್ನು ಉಪಯೋಗಿಸುತ್ತಾರೆ. ಇದು ಜೀರ್ಣಕಾರಿಯಾಗಿ, ಜ್ವರ ಶಾಮಕವಾಗಿ, ವಾಂತಿ ಮತ್ತು ಭೇದಿ ಮಾಡಿಸಲು ಸಹ ಬಳಕೆಯಾಗುತ್ತದೆ. ಈ ಸಸ್ಯದ ಬೇರು ಯಾ ಗಡ್ಡೆಯನ್ನು ವಿಷಜಂತುಗಳು ಕಡಿದಾಗ ಲೇಪನಕ್ಕಾಗಿ ಬಳಸುವುದು ವಾಡಿಕೆ. ಇದನ್ನು ವಿಷಕೀಟ, ಚೇಳು, ಹಾವು ಇತ್ಯಾದಿಗಳು ಕಡಿದಾಗ ಲೇಪನಕ್ಕಾಗಿ ಬಳಸುತ್ತಾರೆ. ಶುದ್ಧಗೊಳಿಸಿದ ನಿಗದಿಪಡಿಸಿದ ಗಡ್ಡೆಯ ಸೇವನೆಯಿಂದ ನಾಗರಹಾವಿನ ವಿಷ ಇಳಿಮುಖವಾಗುವುದು. == ಚಿತ್ರಗಳು == == ಉಲ್ಲೇಖಗಳು ==