ಅಘಲಯ ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲ್ಲೂಕಿನ ಗ್ರಾಮ. ಜಿಲ್ಲಾಕೇಂದ್ರ ಮಂಡ್ಯದಿಂದ ೬೦ ಕಿ. ಮೀ. ಮತ್ತು ತಾಲ್ಲೂಕು ಕೇಂದ್ರ ಕೆ. ಆರ್. ಪೇಟೆಯಿಂದ ೨೦ ಕಿ. ಮೀ. ದೂರದಲ್ಲಿದೆ. ಶ್ರವಣಬೆಳಗೊಳ ಹತ್ತಿರದಲ್ಲಿರುವ ನಗರವಾಗಿದ್ದು ೧೦ ಕಿ. ಮೀ. ಅಂತರದಲ್ಲಿದೆ. ಈ ಗ್ರಾಮದಲ್ಲಿರುವ ಮಲ್ಲೇಶ್ವರನಾಥ ದೇವಾಲಯವು ಹೊಯ್ಸಳರ ಶೈಲಿಯ ತ್ರಿಕೂಟಾಚಲ ದೇವಾಲಯವಾಗಿದೆ. ಮೂರನೇ ನರಸಿಂಹನ ಕಾಲದಲ್ಲಿ ನಿರ್ಮಿಸಿದ್ದು ಎನ್ನಲಾಗಿದ್ದು ಇತ್ತೀಚೆಗೆ ಜೀರ್ಣೋದ್ಧಾರಗೊಂಡಿದೆ. ಈ ಸ್ಥಳಕ್ಕೆ ಪಾಪವನ್ನು ನಾಶಮಾಡುವ ಶಕ್ತಿಯಿದೆ ಎಂಬ ಹಿನ್ನೆಲೆಯಲ್ಲಿ ‘ಅಘಲಯ’ (ಅಘ-ಪಾಪ, ಲಯ-ನಾಶ) ಸ್ಥಳಗಥೆಯೊಂದು ಕೇಳಿಬರುತ್ತದೆ. ಗ್ರಾಮದ ಎ.ಶೇಷಯ್ಯಂಗಾರ್ ಶಿಕ್ಷಣ ತಜ್ಞರಾಗಿದ್ದು, ರಾಜ್ಯ ಪಠ್ಯಪುಸ್ತಕ ಸಮಿತಿ ಸದಸ್ಯರಾಗಿದ್ದರು. ‘ವಿದ್ಯಾದಾಯಿನಿ’ ಎಂಬ ಮಾಸ ಪತ್ರಿಕೆಯ ಸಂಪಾದಕರೂ ಆಗಿದ್ದರು.