ಅಘಾಸುರ (ಸಂಸ್ಕೃತ: अघासुर) ಎಂಬು ಅವನು ಹಿಂದೂ ಸಾಹಿತ್ಯದಲ್ಲಿ, ವಿಶೇಷವಾಗಿ ಭಾಗವತ ಪುರಾಣದಲ್ಲಿ ಕಾಣಿಸಿಕೊಂಡಿರುವ ಅಸುರ. ಕಂಸನು ತನ್ನ ಶತ್ರುವಾದ ಶ್ರೀಕೃಷ್ಣನನ್ನು ಕೊಲ್ಲಲು ಕಳುಹಿಸಿದ ಅನೇಕ ರಾಕ್ಷಸರಲ್ಲಿ ಅಘಾಸುರನೂ ಒಬ್ಬನು. ಈ ರಾಕ್ಷಸನ ಹಿರಿಯ ಸಹೋದರಿ ಪೂತನಿ ಮತ್ತು ಸಹೋದರ ಬಕಾಸುರ. ಅಘಾಸುರನು ಕಂಸನೊಂದಿಗೆ ಮೈತ್ರಿ ಮಾಡಿಕೊಂಡ ಬುಡಕಟ್ಟು ಜನಾಂಗಗಳಲ್ಲಿ ಒಬ್ಬನೆಂದು ಹೇಳಲಾಗಿದೆ. ಕೃಷ್ಣನು ಅಘಾಸುರನನ್ನು ಕೊಂದ ವಿಷಯವನ್ನು ಪರೀಕ್ಷಿತ ರಾಜನಿಗೆ ಋಷಿ ಶುಕನು ಭಾಗವತ ಪುರಾಣದಲ್ಲಿ ವಿವರಿಸಿದ್ದಾನೆ. == ದಂತಕಥೆ == ರಾಜ ಕಂಸ ಕೃಷ್ಣನನ್ನು ಕೊಲ್ಲಲೂ ಅನೇಕ ಪ್ರಯತ್ನಗಳನ್ನು ಮಾಡಿದನು ಆದರೆ ಅವೆಲ್ಲವೂ ವಿಫಲವಾದವು. ಪೂತನಿ ಮತ್ತು ಬಕಾಸುರರು ಕೃಷ್ಣನಿಂದ ಕೊಲ್ಲಲ್ಪಟ್ಟರು ಎಂದು ತಿಳಿದ ಕಂಸನು, ನಂತರ ಕೃಷ್ಣನನ್ನು ಕೊಲ್ಲಲು ಅಘಾಸುರನನ್ನು ಕಳುಹಿಸಿದನು. ಅಘಾಸುರನು ೮-ಮೈಲಿ ಉದ್ದದ ಸರ್ಪದ ರೂಪವನ್ನು ಪಡೆದುಕೊಂಡು, ಪರ್ವತದ ವಿರುದ್ಧ ತನ್ನ ತೆರೆದ ಬಾಯಿಯನ್ನು ಮರೆಮಾಚಿದನು. ಎಲ್ಲಾ ಗೋಪಾಲಕರು ರಾಕ್ಷಸನ ಬಾಯಿಯನ್ನು ಗುಹೆ ಎಂದು ತಪ್ಪಾಗಿ ಭಾವಿಸಿ ಅದರ ಒಳಗೆ ಪ್ರವೇಶಿಸಿದರು. ಸರ್ಪವು ತನ್ನ ಬಾಯಿಯನ್ನು ಮುಚ್ಚಿದಾಗ, ಎಲ್ಲಾ ಗೋಪಾಲಕರು ಉಸಿರುಗಟ್ಟಿ ಸಾಯುತ್ತಾರೆ. ಆಗ ಕೃಷ್ಣನು ಸರ್ಪದ ಒಳಗೆ ಪ್ರವೇಶಿಸಿ ತನ್ನ ದೇಹದ ಗಾತ್ರವನ್ನು ಹೆಚ್ಚಿಸಿದನು. ಪ್ರತಿಕ್ರಿಯೆಯಾಗಿ, ರಾಕ್ಷಸನು ತನ್ನ ದೇಹದ ಗಾತ್ರವನ್ನು ವಿಸ್ತರಿಸಿದನು, ಆದರೆ ಕೃಷ್ಣನು ಅವನಿಗಿಂತ ಹೆಚ್ಚು ವೇಗವಾಗಿ ಹಿಗ್ಗುತ್ತಿದ್ದರಿಂದ ಅಘಾಸುರನು ಉಸಿರುಗಟ್ಟಲು ಪ್ರಾರಂಭಿಸಿದನು, ಇದರಿಂದಾಗಿ ಅವನ ಕಣ್ಣುಗಳು ಹೊರಬರುತ್ತವೆ. ಹೀಗೆ ಅಘಾಸುರನ ಅಂತ್ಯವಾಯಿತು. == ಉಲ್ಲೇಖಗಳು ==