ಅಜವಾನ, ಓಮು, ಟ್ರ್ಯಾಕಿಸ್ಪರ್ಮಮ್ ಎಮೈ, ಏಪಿಯೇಸಿಯಿ ಕುಟುಂಬದಲ್ಲಿನ ಒಂದು ವಾರ್ಷಿಕ ಮೂಲಿಕೆ. ಅದು ಪೂರ್ವ ಮೆಡಿಟರೇನಿಯನ್‍ನಲ್ಲಿ, ಪ್ರಾಯಶಃ ಈಜಿಪ್ಟ್‍ನಲ್ಲಿ ಹುಟ್ಟಿಕೊಂಡಿತು, ಮತ್ತು ನಿಕಟಪೂರ್ವದಿಂದ ಭಾರತದ ವರೆಗೆ ಹರಡಿತು. == ಸಸ್ಯಶಾಸ್ತ್ರೀಯ ವರ್ಗೀಕರಣ == ಏಪಿಯೇಸಿಯೆ ಕುಟುಂಬಕ್ಕೆ ಸೇರಿದ ಟ್ರ್ಯಾಕಿಸ್ಪರ್ಮಮ್ ಎಮೈ ವೈಜ್ಞಾನಿಕ ಹೆಸರು. ಕನ್ನಡದಲ್ಲಿ ಅಜವಾನ ಮತ್ತು ಹಿಂದಿಯಲ್ಲಿ ಅಜಿವಾನ್ ಎಂದು ಕರೆಯುತ್ತಾರೆ. == ಉಪಯೋಗಗಳು == ಇದೊಂದು ಸುಗಂಧ ಸಸ್ಯ.ಇದರ ಬೀಜಗಳು ಸುವಾಸನಾಯುಕ್ತವಾಗಿದ್ದು,ಭಾರತೀಯ ಅದರಲ್ಲೂ ಗುಜರಾತ್ ಅಡುಗೆಗಳಲ್ಲಿ ಉಪಯೋಗದಲ್ಲಿದೆ. ಸಸ್ಯದ ಎಲೆಗಳು ಮತ್ತು ಹಣ್ಣಿನ ಕೋಡುಗಳು (ಹಲವುವೇಳೆ ತಪ್ಪಾಗಿ ಬೀಜಗಳು ಎಂದು ಕರೆಯಲಾಗುತ್ತದೆ) ಎರಡನ್ನೂ ಮಾನವರು ಸೇವಿಸುತ್ತಾರೆ.ಇದು ಜಠರವಾಯು ನಿರೋಧಕವೆಂದು ಕಂಡುಬಂದಿದೆ. == ಬೇಸಾಯ == ಉತ್ತರ ಭಾರತದಲ್ಲಿ ಇದನ್ನು ಹೆಚ್ಚಾಗಿ ಬೆಳೆಸುತ್ತಿದ್ದು ,ಭಾರತದ ಒಟ್ಟು ಉತ್ಪನ್ನದಲ್ಲಿ ೫೫ ಶೇಕಡಾ ರಾಜಸ್ಥಾನ ರಾಜ್ಯವೊಂದರಲ್ಲೇ ಬೆಳೆಯಲಾಗುತ್ತಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ' , ; , ; , (2009). " : ". . 14 (4): 380–4. 20030464.