ಅಜೀವಿಕರುಬುದ್ಧ ಮತ್ತು ಮಹಾವೀರರ ಕಾಲದಲ್ಲಿ (ಕ್ರಿ.ಪೂ. 6ನೆಯ ಶತಮಾನ) ಭಿಕ್ಷಾಟನೆಯಿಂದ ಜೀವಿಸುತ್ತಿದ್ದ ಒಂದು ಪಂಥದ ಅನುಯಾಯಿಗಳು. == ಸ್ಥಾಪನೆ == ಗೊಸಾಲ ಮಂಖಲಿ ಪುತ್ತ ಈ ಪಂಥದ ಸ್ಥಾಪಕ. == ಸಿದ್ಧಾಂತಗಳು == ಅಜೀವವೆಂದರೆ ಜೀವನಕ್ರಮ, ಕರ್ಮದ ಶೃಂಖಲೆಯಿಂದ ಮುಕ್ತನಾಗುವವನೇ ಅಜೀವಿಕ, ಭಿಕ್ಷಾಟನೆಯೇ ಇವನ ಜೀವನವೃತ್ತಿ ಎಂದು ಗೊಸಾಲ ಹೇಳಿರುವನು. ಪುರುಷ ಪ್ರಯತ್ನದ ಮೇಲೆ ಯಾವುದೂ ಆಧಾರಗೊಂಡಿಲ್ಲ. ಮನುಷ್ಯರಲ್ಲಿ ಕಂಡುಬರುವ ವ್ಯತ್ಯಾಸಕ್ಕೆ, ಭ್ರಷ್ಟತೆಗೆ, ಪಾತಿತ್ಯಕ್ಕೆ ವಿಧಿ(ವಾತಾವರಣ, ಸ್ವಭಾವ) ಕಾರಣವೆಂದು ಈ ಪಂಥದ ತತ್ವ. ಬೌದ್ಧಮತದ ಪ್ರಕಾರ ಭಿಕ್ಷುಗಳು ಅನುಸರಿಸಬೇಕಾದ ಎಂಟರಲ್ಲಿ ಸಮ್ಯಕ್-ಜೀವನ ಒಂದು ಮುಖ್ಯ ಮಾರ್ಗ. ಮಹಾವೀರನಿಗೆ ಗೊಸಾಲನ ಪರಿಚಯವಿತ್ತು. ಅಪ್ರಾಮಾಣಿಕನೆಂದು ತಿಳಿದ ಮೇಲೆ ಗೋಸಾಲನ ಸ್ನೇಹ ಬಿಟ್ಟನು. ಮತ್ತೆ ಇವರಿಬ್ಬರು ಕಕ್ಷಿ-ಪ್ರತಿಕಕ್ಷಿಗಳಾಗಿ ಸಂಧಿಸಿ ಹೋರಾಡಿದರು. ಕೊನೆಗೆ ತನ್ನ ಹೀನ ಕೃತ್ಯಗಳನ್ನು ಒಪ್ಪಿಕೊಂಡ ಗೋಸಾಲ ಮಹಾವೀರನ ಶಿಷ್ಯನಾದ. ಅಜೀವಿಕರಿಗೆ ದಶರಥ (ಅಶೋಕನ ಮೊಮ್ಮಗ) ಗುಹೆಗಳಲ್ಲಿ ಕೆಲವು ಆಶ್ರಮಗಳನ್ನು ಕೊಟ್ಟಿದ್ದನು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == , , .. (1920), , , . , , . 47, . 1 (1926), 74-82 - , , , , , ( ) , ( ), , 54-57 2018-04-14 ವೇಬ್ಯಾಕ್ ಮೆಷಿನ್ ನಲ್ಲಿ., , (1995), :