ಅಜುರೈಟ್ ತಾಮ್ರವನ್ನು ಹೊಂದಿರುವ ಒಂದು ಖನಿಜವಾಗಿದೆ. ಇದರ ಹೆಸರು ಇದರ ಗಾಢ ನೀಲ ಬಣ್ಣ (- ) ದಿಂದ ಬಂದಿದೆ.ಇದು ಸಾಮಾನ್ಯವಾಗಿ ಹಸಿರು ಬಣ್ಣದ ಮ್ಯಾಲಚೈಟ್ ಎಂಬ ತಾಮ್ರದ ನಿಕ್ಷೇಪದೊಂದಿಗೆ ದೊರೆಯುತ್ತದೆ.ಇದು ಮುಖ್ಯವಾಗಿ ಆಭರಣಗಳ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ. ಇದು ಬಣ್ಣಗಳ ತಯಾರಿಕೆಯಲ್ಲೂ ಉಪಯೋಗದಲ್ಲಿದೆ. ಹೆಚ್ಚಿನ ಅಜುರೈಟ್ ನಮೀಬಿಯಾ ದೇಶದಿಂದ ಪೂರೈಕೆಯಾದರೂ ಶುದ್ಧ ಅಜುರೈಟ್ ಫ್ರಾನ್ಸಿನ ಚೆಸ್ಸಿ ಎಂಬಲ್ಲಿಂದ ಸರಬರಾಜಾಗುತ್ತದೆ