ಅತಿಕಾಯ ಇವನು ರಾಮಾಯಣದಲ್ಲಿ ಲಂಕೆಯ ಅರಸ ರಾವಣನ ಮಗ. ಇವನು ಅತ್ಯಂತ ಪರಾಕ್ರಮಿಯಾಗಿದ್ದು, ಬ್ರಹ್ಮನನ್ನು ಒಲಿಸಿ ಬ್ರಹ್ಮಾಸ್ತ್ರವನ್ನು ಪಡೆದಿದ್ದನು. ರಾಮ-ರಾವಣರ ಯುದ್ಧದಲ್ಲಿ ಇದನ್ನು ಲಕ್ಷ್ಮಣನ ಮೇಲೆ ಪ್ರಯೋಗಿಸಿ ಅವನನ್ನು ಮೂರ್ಚಿತನನ್ನಾಗಿ ಮಾಡಿದವನು. ಕೊನೆಗೆ ಲಕ್ಶ್ಮಣನ ಕೈಯಲ್ಲಿ ಹತನಾದನು.