ಅನಂತಪುರವು ಆಂಧ್ರಪ್ರದೇಶದ ಅನಂತಪುರ್‌ ಜಿಲ್ಲೆಯ ಆಡಳಿತ ಕೇಂದ್ರ ಅನಂತಪುರವು ಹೈದ್ರಾಬಾದಿನಿಂದ ೩೫೫ ಕಿ.ಮೀ ಮತ್ತು ಬೆಂಗಳೂರಿನಿಂದ ೨೦೦ ಕಿ.ಮೀ ದೂರದಲ್ಲಿದೆ. === ಇತಿಹಾಸ === ಈ ಪಟ್ಟಣವನ್ನು ೧೩೬೪ರಲ್ಲಿ ವಿಜಯನಗರ ರಾಜರ ದಿವಾನನಾದ ಚಿಕ್ಕಪ್ಪ ವಡೆಯರ್ ಎಂಬವನು ತನ್ನ ಹೆಂಡತಿಯ ಹೆಸರಿನಲ್ಲಿ ನಿರ್ಮಿಸಿದ.೧೭೫೭ರಲ್ಲಿ ಈ ಪಟ್ಟಣವನ್ನು ಗೂಟಿಯ ಮರಾಠ ಮುಖ್ಯಸ್ಥನಾದ ಮೊರಾರಿ ರಾವ್ ಎಂಬವನು ಮುತ್ತಿಗೆ ಹಾಕಿ ವಶಪಡಿಸಿಕೊಂಡ.೧೭೭೫ರಲ್ಲಿ ಇದನ್ನು ಹೈದರಾಲಿ ಗೂಟಿಯೊಂದಿಗೆ ವಶಕ್ಕೆ ಪಡೆದ.ಮುಂದೆ ೧೭೯೯ರಲ್ಲಿ ಟಿಪ್ಪು ಸುಲ್ತಾನ ಮರಣಾನಂತರ ಈ ಪಟ್ಟಣವು ನಿಜಾಮರ ಪಾಲಾಯಿತು.ನಿಜಾಮನು ಇದನ್ನು ೧೮೦೦ರಲ್ಲಿ ಬ್ರಿಟಿಷರ ವಶಕ್ಕೆ ಕೊಟ್ಟ. === ಹವಾಮಾನ === ಇಲ್ಲಿ ಒಣಹವೆಯಿದ್ದು ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ.ಇಲ್ಲಿ ವರ್ಷಕ್ಕೆ ಕೇವಲ ೨೨ ಇಂಚಿನಷ್ಟು ಮಾತ್ರಾ ಮಳೆ ಬೀಳುತ್ತದೆ. === ಜನಜೀವನ === ೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೩,೬೨,೩೪೦.ಲಿಂಗಾನುಪಾತ;೯೯೫ ಮತ್ತು ಸಾಕ್ಷರತೆ:೮೧.೮೮% ಇದೆ.ತೆಲುಗು,ಉರ್ದು,ಕನ್ನಡ ಮತ್ತು ಇಂಗ್ಲೀಷ್ ಇಲ್ಲಿಯ ಪ್ರಮುಖ ಭಾಷೆಯಾಗಿದೆ. == ಪ್ರಮುಖ ಸ್ಥಳಗಳು == ಇಲ್ಲಿಗೆ ಸಮೀಪವಿರುವ ಪ್ರಮುಖ ಸ್ಠಳಗಳು. ಹಿಂದೂಪುರ- ಜಿಲ್ಲೆಯ ಪ್ರಮುಖ ವ್ಯಾಪಾರಿ ಕೇಂದ್ರ. ಕದಿರಿ - ಭಾರತದ ಅತಿ ದೊಡ್ಡ ಆಲದಮರವಿರುವ ಸ್ಥಳ, ಲಕ್ಷ್ಮೀನರಸಿಂಹ ದೇವಾಲಯ. ಲೇಪಾಕ್ಷಿ - ಭಾರತದ ಅತಿ ದೊಡ್ಡ ಏಕಶಿಲಾ ನಂದಿ ವಿಗ್ರಹ, ಇಲ್ಲಿನ ವೀರಭದ್ರೇಶ್ವರ ದೇವಾಲಯವು ವಿಜಯನಗರದ ವಾಸ್ತುಕಲೆಗೆ ಪ್ರಸಿದ್ಧಿ. ತಾಡಪತ್ರಿ - ರಾಮಲಿಂಗೇಶ್ವರ ದೇವಾಲಯ. ಪೆನುಕೊಂಡ- ವಿಜಯನಗರದ ರಾಜಧಾನಿ. ಪುಟ್ಟಪರ್ತಿ - ಸತ್ಯಸಾಯಿಬಾಬಾ. ರಾಯದುರ್ಗ - ವಿಜಯನಗರದ ಕೋಟೆ. ಧರ್ಮಾವರಮ್- ರೇಶ್ಮೆ ಸೀರೆಗಳಿಗೆ ಹೆಸರುವಾಸಿ. ಹೇಮಾವತಿ- ಪಲ್ಲವರ ರಾಜಧಾನಿ. ಉರವಕೊಂಡ- ಬುಧಗಾವಿ ಪದ್ಮಪಾಣಿ ಸೂರ್ಯ ದೇವಾಲಯ. == == .