ಅನುಶ್ರೀ ಒಬ್ಬ ಭಾರತೀಯ ನಟಿ ಮತ್ತು ಕನ್ನಡ ವಾಹಿನಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕ್ರಮ ನಿರೂಪಕಿ ಆಗಿದ್ದಾರೆ . ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಹಾಗೂ ಇತರ ಪ್ರಶಸ್ತಿಗಳು ದೊರಕಿದೆ. == ಜನನ ಹಾಗೂ ಬಾಲ್ಯ == ಅನುಶ್ರೀ ಬೆಂಗಳೂರಿನಲ್ಲಿ ೨೫ ಜನವರಿ ೧೯೮೭ ರಲ್ಲಿ ತಂದೆ ಸಂಪತ್ ಮತ್ತು ತಾಯಿ ಶಶಿಕಲಾ ಇವರಿಗೆ ಜನಿಸಿದರು. ಇವರದು ತುಳು ಮಾತಾಡುವ ಕುಟುಂಬವಾಗಿತ್ತು. ಇವರ ತಮ್ಮ ಅಭಿಜಿತ್. ಬಾಲ್ಯದಲ್ಲೇ ಅನುಶ್ರೀ ಇವರ ತಂದೆ ತಾಯಿ ಬೇರೆಯಾಗಿದ್ದರು. ಇವರು ೫ನೇ ತರಗತಿವರೆಗೆ ಬೆಂಗಳೂರಿನ ಸೈಂಟ್ ಥೋಮಸ್ ಶಾಲೆಯಲ್ಲಿ ಕಲಿತಿದ್ದರು. ನಂತರ ಮಂಗಳೂರಿನ ನಾರಾಯಣ ಗುರು ಶಾಲೆಯಲ್ಲಿ ತಮ್ಮ ಶಾಲ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇವರಿಗೆ ಪದವಿ ಪೂರ್ವ ಶಿಕ್ಷಣ ಮುಗಿದ ತಕ್ಷಣ ದೂರದರ್ಶನದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು. == ವೃತ್ತಿ == ಮಂಗಳೂರು ಮೂಲದ ಪ್ರಾದೇಶಿಕ ವಾಹಿನಿಯಾದ ನಮ್ಮ ಟಿವಿಯಲ್ಲಿ ಟೆಲಿ ಅಂತ್ಯಾಕ್ಷರಿ ಎಂಬ ಫೋನ್-ಇನ್ ಮ್ಯೂಸಿಕ್ ಶೋನಲ್ಲಿ ನಿರೂಪಕಿಯಾಗಿ ಅನುಶ್ರೀ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ-ಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡಿಮ್ಯಾಂಡಪ್ಪೊ ಡಿಮ್ಯಾಂಡು' ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು. ಬಿಗ್ ಬಾಸ್ ಕನ್ನಡ- ಸೀಸನ್ 1' ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು. ಅದರಲ್ಲಿ ಅವರು ೮೦ ದಿನಗಳ ಕಾಲ ಆ ಮನೆಯಲ್ಲಿದ್ದರು. ಇದಲ್ಲದೆ ಅವರು ಬೇರೆ ಕಾರ್ಯಕ್ರಮಗಳಾದ ಸುವರ್ಣ ಫಿಲ್ಮ್ ಅವಾರ್ಡ್ಸ್, ಫಿಲ್ಮ್ಫೇರ್ ಅವಾರ್ಡ್ಸ್, ಟಿವಿ 9 ಫಿಲ್ಮ್ ಅವಾರ್ಡ್ಸ್, ಜೀ ಮ್ಯೂಸಿಕ್ ಅವಾರ್ಡ್ಸ್, ಸೈಮಾ ಅವಾರ್ಡ್ಸ್, ಸೆಲೆಬ್ರಿಟಿ ಕ್ರಿಕೆಟ್ ಲೀಗ್, ಕಾಮಿಡಿ ಕಿಲಾಡಿಗಳು ಮತ್ತು ಸರಿಗಮಪ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಅವರು ಬೆಂಕಿಪಟ್ಟಣ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಮುರಳಿ ಮೀಟ್ಸ್ ಮೀರಾ ಎಂಬ ಚಲನಚಿತ್ರಕ್ಕೆ ತಮ್ಮ ಕಂಠದಾನ ಮಾಡಿದ್ದಾರೆ. == ಕೃಷಿ ಆಸಕ್ತಿ == ಅನುಶ್ರೀ ಅವರು ನಟ ದರ್ಶನ್ ತೂಗುದೀಪ ಅವರಂತೆ ಕೃಷಿ ಆಸಕ್ತಿ ಹೊಂದಿದ್ದಾರೆ. ಹಾಸನದ ಹತ್ತಿರ 30 ಎಕರೆ ಜಮೀನನ್ನು ಖರೀದಿಸಿದ್ದಾರೆ. ಆಧಿಕ ಲಾಭವಿರುವ ಅಡಿಕೆ ತೋಟ ಮಾಡಿದ್ದಾರೆ. 2020ರಲ್ಲಿ ಕ್ಯಾಸನೂರು ನಾಟಿ ಅಡಿಕೆ ತಳಿ ಸಸಿಗಳನ್ನು ತರಿಸಿ ತೋಟ ಕಟ್ಟಿದ್ದಾರೆ. == ದೂರದರ್ಶನ == === ರಿಯಾಲಿಟೀ ಶೋಗಳು === == ಚಲನಚಿತ್ರಗಳ ಪಟ್ಟಿ == == ಪ್ರಶಸ್ತಿಗಳು == == ಉಲ್ಲೇಖಗಳು ==