ಅನ್ನಪೂರ್ಣ ಚಿತ್ರವು ೧೯೬೪ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಆರೂರು ಪಟ್ಟಾಭಿಯವರು ನಿರ್ದೇಶಿಸಿದ್ದಾರೆ. ಪಂಡರೀಬಾಯಿಯವರು ನಿರ್ಮಿಸಿದ್ದಾರೆ. ಇದು ಚಿ.ಉದಯಶಂಕರ್ ಅವರು ಎಲ್ಲ ಹಾಡುಗಳನ್ನು ಬರೆದ ಪ್ರಥಮ ಚಿತ್ರ. == ಚಿತ್ರದ ಹಾಡುಗಳು == ಕನ್ನಡವೇ ತಾಯ್ನುಡಿಯು - ಪಿ.ಬಿ.ಶ್ರಿನಿವಾಸ್ ಅಂದ ಚಂದದ ಹೂವೇ - ಪಿ.ಲೀಲಾ, ಟಿ.ಆರ್. ಜಯದೇವ್ ಹೃದಯ ವೀಣೆ - ಪಿ.ಬಿ.ಶ್ರಿನಿವಾಸ್ ಚೆಲ್ಲುವಿನ ಸಿರಿಯೇ - ಎ.ಎಲ್.ರಾಘವನ್ ಕೃಷ್ಣ ಬಿಡು ಬಿಡು ಕೋಪವ - ಎಸ್.ಜಾನಕಿ ಮೋಹ ಸಿಹಿ ಸಿಹಿ - ಎಸ್. ಜಾನಕಿ ಕನ್ನಡವೇ ತಾಯ್ನುಡಿಯು ಮತ್ತು ಹೃದಯ ವೀಣೆ ಹಾಡುಗಳನ್ನು ತೆರೆಯ ಮೇಲೆ ಹಾಡಿದವರು ಅಷ್ಟೊಂದು ಪರಿಚಿತರಲ್ಲದ ಭಾಸ್ಕರ್ ಎಂಬ ನಟ.