ಅಪೊಮಾರ್ಫೀನ್ ಒಂದು ರಾಸಾಯನಿಕ. == ತಯಾರಿಕೆ == ಗಾಳಿ ಹೋಗದಂತೆ ಮುಚ್ಚಿರುವ ಸೀಸೆಯಲ್ಲಿ ರಾಸಾಯನಿಕ ಮಾರ್ಫೀನೊಂದಿಗೆ ಹೈಡ್ರೊಕ್ಲೋರಿಕಾಮ್ಲವನ್ನು ಸೇರಿಸಿ ಕಾಯಿಸಿದರೆ, ಮಾರ್ಫೀನಿಂದ ನೀರಿನ ಅಣುವೊಂದು ಕಳೆದು ಬರುವ ರಾಸಾಯನಿಕವಿದು. ಹೀಗಾದುದರಿಂದ ಮಾರ್ಫೀನಿನ ಮಂದಗೊಳಿಸುವ ಗುಣಗಳು ಕಳೆದು, ಚೋದಕ ಗುಣಗಳು ಮಾತ್ರ ಅಪೊಮಾರ್ಫೀನಲ್ಲಿ ಉಳಿಯುತ್ತವೆ. == ಉಪಯೋಗಗಳು == ಮಿದುಳೆಲ್ಲವನ್ನೂ ಇದು ಚೋದಿಸುವುದಾದರೂ ವಾಂತಿಕಾರಕ ಕೇಂದ್ರದ ಮೇಲೆ ಇದರ ಪ್ರಭಾವ ಬಹಳ. ವಿಷವೇರಿದ ರೋಗಿಯ ಹೊಟ್ಟೆ ತೊಳೆಯಲು ರಬ್ಬರ್ ಕೊಳವೆ ತೂರಿಸಲು ಆಗದಾಗ, ಬಲವಾದ ಈ ಮದ್ದನ್ನು ಚುಚ್ಚಿ ವಾಂತಿಕಾರಿಸುವ ರೂಢಿ ಹಿಂದಿತ್ತು. ವಾಂತಿಕಾರಕ ಪ್ರಮಾಣ ಕೂಡ ಮಿದುಳನ್ನು ಕುಂದಿಸುವುದರಿಂದ ಇದರ ಬಳಕೆ ಬಲು ಅಪಾಯಕರ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == "". . .. .