ಅಫಜಲಪುರ ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಪಟ್ಟಣ ಪಂಚಾಯತಿ ಮತ್ತು ತಾಲೂಕು ಕೇಂದ್ರ. === ಭೌಗೋಳಿಕ ವಿವರಗಳು === ಅಕ್ಷಾಂಶ / ರೇಖಾಂಶ : ೧೭.೨ ಡಿಗ್ರಿ ಉತ್ತರ ಮತ್ತು ೭೬.೩೫ ಡಿಗ್ರಿ ಉತ್ತರ. ಸಮುದ್ರಮಟ್ಟದಿಂದ ಸರಾಸರಿ ಎತ್ತರ : ೪೦೮ ಮೀಟರುಗಳು. ಕ್ಷೇತ್ರಫಲ : ೩ ಚದರ ಕಿ.ಮೀ ಅಕ್ಕಪಕ್ಕದ ತಾಲೂಕುಗಳು : ಆಳಂದ್ ಉತ್ತರಕ್ಕೆ, ಗುಲ್ಬರ್ಗ ಪೂರ್ವಕ್ಕೆ, ಜೇವರ್ಗಿ ಮತ್ತು ಸಿಂದಗಿ (ಬಿಜಾಪುರ ಜಿಲ್ಲೆ) ದಕ್ಷಿಣಕ್ಕೆ, ಇಂಡಿ (ಬಿಜಾಪುರ ಜಿಲ್ಲೆ) ಪಶ್ಷಿಮಕ್ಕೆ, ಮತ್ತು ಮಹಾರಾಷ್ಟ್ರದ ಅಕ್ಕಲಕೋಟೆ ಉತ್ತರ-ಪಶ್ಷಿಮಕ್ಕೆ ಭೀಮಾ ಮತ್ತು ಅಮರ್ಜಾ ನದಿಗಳು ಈ ತಾಲೂಕಿನಲ್ಲಿ ಹರಿಯುತ್ತವೆ. ಪ್ರಮುಖ ಬೆಳೆಗಳು: ಕಬ್ಬು, ತೊಗರಿ, ಜೋಳ, ಸೂರ್ಯಕಾಂತಿ, ಕುಸುಬೆ, ಕಡಲೆ, ಶೇಂಗಾ, ಹೆಸರು. === ಪ್ರಮುಖ ಕಾರ್ಖಾನೆಗಳು === ಶ್ರೀ ರೇಣುಕಾ ಶುಗರ್ಸ್, ಹಾವಳಗಾ. ಅಫಜಲಪುರ. == ಜನಸಂಖ್ಯಾ ಅಂಕಿ ಅಂಶ == ೨೦೦೧ರ ಜನಗಣತಿ ಯ ಪ್ರಕಾರ ಅಫಜಲ್ಪುರದ ಜನಸಂಖ್ಯೆ ೧೯,೧೧೪. ಇದರಲ್ಲಿ ೫೨% ಶೇಕಡಾ ಪುರುಷರು ಮತ್ತು ಬಾಕಿ ೪೮% ಸ್ತ್ರೀಯರು. ಇಲ್ಲಿಯ ೫೪% ಸರಾಸರಿ ಸಾಕ್ಷರತೆ ಭಾರತದ ಸಾಕ್ಷರತಾ ಪ್ರಮಾಣಕ್ಕಿಂತ (೫೯.೫%) ಕಡಿಮೆಯಿದೆ. ೬೦% ಪುರುಷರು ಮತ್ತು ೪೦% ಸ್ತ್ರೀಯರು ಅದರಲ್ಲಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ೧೫%ರಷ್ಟಿದ್ದಾರೆ. === ಪ್ರೇಕ್ಷಣೀಯ ಸ್ಥಳಗಳು === ಘತ್ತರ್ಗಾ- ಶ್ರೀ ಭಾಗ್ಯವ೦ತಿ,ದೇವಾಲಯ ರೇವೂರ..ಶ್ರೀಬಮ್ಮಲಿಂಗೇಶ್ವರ - ಶ್ರೀರೇವಣಸಿದ್ದೇಶ್ವರ ದೇವಾಲಯ, ಚಿನ್ನಮಳ್ಳಿಯ -ಶ್ರೀ ಮಲ್ಲಿಕಾರ್ಜುನ,ದೇವಾಲಯ, ಅಫಜಲಪುರ: ಶ್ರೀ ಸಿದ್ಫರಾಮೇಶ್ವರ ಜಾತ್ರೆ ,ಶ್ರೀ ಸೋಂದೇಸಾಹೇಬ್ ದರ್ಗಾ, ಶ್ರೀ ಕಾಳಿಕಾದೇವಿ ಜಾತ್ರೆ, ಶ್ರೀ ಅಂಬಾಭವಾನಿ ಜಾತ್ರೆ, ಶ್ರೀ ಲಕ್ಷ್ಮಿದೇವಾಲಯ, ಸಂಗಾಪುರದ: ಶ್ರೀ ಸಂಗಮೇಶ್ವರ ದೇವಾಲಯ, ಮಣ್ಣೂರದ-ಶ್ರೀ ಯಲ್ಲಮ್ಮಾದೇವಾಲಯ, ಅತನೂರ,ಗೂಬುರ,ಇಲ್ಲಿ ಪ್ರಾಚೀನ ಗೂಡೇಗಳಿವೆ ಅವಶೇಷಗಳಿವೆ. ಮರ್ಜಿ ಪೀರ್‍ ದರ್ಗಾ (ಭೀಮಾ ಮತ್ತು ಅಮರ್ಜಾ ನದಿಗಳ ಸಂಗಮದಲ್ಲಿದೆ ಉಡಚಣ, ಗೌರ(ಬಿ), ಅಳ್ಳಗಿ (ಬಿ),ಗಳ ಪವಾಡ ಪುರು‌ಷ :ಶ್ರೀ ಹುಚ್ಚಲಿಂಗೇಶ್ವರರ ಜಾತ್ರೆ. ಮಲ್ಲಾಬಾದ: ಶ್ರೀ ಲಕ್ಷ್ಮಿ ದೇವಾಲಯ, ಬಳೂರ್ಗಿ: ಶ್ರೀ ಬಸವೇಶ್ವರ ದೇವಾಲಯ, ಬಡದಾಳ:ಚನ್ನಮಲ್ಲೇಶ್ವರ ಮಠ ಬಂದರವಾಡ: ಶ್ರೀ ಲಲಿತಾದೇವಿ ದೇವಾಲಯ ದೇವಲ ಗಾಣಗಾಪೂರ: ತ್ರಿಮೂರ್ತಿ ಶ್ರೀ ದತ್ತಾತ್ರೇಯ ಗುಡ್ಡೆವಾಡಿ:- ಭೀಮಾ ತೀರದ ಉದ್ಭವಲಿಂಗ ಶ್ರೀ ಬ್ರಹ್ಮಲಿಂಗಶ್ವರ ದೇವಾಲಯ ತಾಲ್ಲೂಕಿನ ಹೆಮ್ಮೆಯ ಅತ್ಯಂತ ಪವಿತ್ರವಾದ ಸ್ಥಳವಾಗಿದೆ ಈ ಸ್ಥಳವು ಗಾಣಗಾಪುರ & ಘತ್ತರಗಿ ಹಾದು ಹೋಗುವ ರಸ್ತೆಯಲ್ಲಿ ಬರುತ್ತದೆ ಹೈದ್ರಾ: ಶ್ರೀ ಖಾಜಾ ಬಂದೇನವಾಜ ದರ್ಗಾ ನಂದರ್ಗಾ: ಶ್ರೀ ರೇವಣಸಿದ್ದೇಶ್ವರ. ಗೌಡಗಾಂವ:ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಹೊಸೂರು: ಅಂಭಾಭವಾನಿ ದೇವಿ, ಭೀರಲಿಂಗೇಶ್ವರ ದೇವಸ್ಥಾನ ಅಂಕಲಗಾ: ಮಲ್ಲಿಕಾರ್ಜುನ ದೇವಸ್ಥಾನ, ಭಾಗ್ಯವಂತಿ ದೇವಸ್ಥಾನ, ಹಜರತ್ ಜಿಂದಾಶಾ ಮಾದರಸಾಹೇಬ ದರ್ಗಾ === ಅಫಜಲ ಖಾನ === ಅಫಜಲ ಖಾನ ಎನ್ನುವವರು ಔರಂಗಜೇಬನನ್ನು ಕೊಂದನು.ಇದರ ಸವಿ ನೆನಪಿಗಾಗಿ ಅಫಜಲಪುರ ಎಂದು ನಾಮಕರಣ ಮಾಡಲಾಗಿದೆ. ಅಫಜಲ ಖಾನ ಒಬ್ಬ ವೀರ.