ಅಮೃತಧಾರೆ 2005 ರಲ್ಲಿ ತೆರೆಕಂಡ ಭಾರತೀಯ ಕನ್ನಡ ಭಾಷೆಯ ಪ್ರಣಯ ನಾಟಕ ಚಲನಚಿತ್ರವಾಗಿದೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದಾರೆ ಮತ್ತು ಸಹ-ನಿರ್ಮಾಣ ಮಾಡಿದ್ದಾರೆ . ನಟ ರಮೇಶ್ ಅರವಿಂದ್ ಮತ್ತು ಚಂದ್ರಶೇಖರ್ ಬರೆದಿದ್ದಾರೆ. ಧ್ಯಾನ್ ಮತ್ತು ರಮ್ಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಚಿತ್ರವು 7 ಅಕ್ಟೋಬರ್ 2005 ರಂದು ಬಿಡುಗಡೆಯಾಯಿತು. ಮನೋ ಮೂರ್ತಿ ಸಂಗೀತ ಸಂಯೋಜಿಸಿದ್ದಾರೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಇಪ್ಪತ್ತೈದು ವಾರಗಳ ಕಾಲ ‍ಚಿತ್ರಮಂದಿರದಲ್ಲಿ ಓಡಿತು . == ಕಥಾ ಹಂದರ == ಪುರು (ಧ್ಯಾನ್) ಮತ್ತು ಅಮೃತಾ (ರಮ್ಯಾ) ವಿವಾಹಿತ ದಂಪತಿಗಳು. ಆದಾಗ್ಯೂ, ಅವರು ಪ್ರೇಮಿಗಳಂತೆ ವರ್ತಿಸುತ್ತಾರೆ. ಒಬ್ಬರಿಗೊಬ್ಬರು ಇಷ್ಟಪಟ್ಟರೂ ಕೆಲವೊಮ್ಮೆ ಜಗಳವಾಡುತ್ತಾರೆ. ಅಮೃತಳಿಗೆ ಹಣ ಖರ್ಚು ಮಾಡುವುದೆಂರೆ ಇಷ್ಟ, ಆದರೆ ಪುರು ಜಿಪುಣ. ಅವಳಿಗೆ ತಮ್ಮ ಚಿಕ್ಕ ಕುಟುಂಬಕ್ಕೆ ಮಗು ಒಂದು ಬೇಕೆಂಬ ಬಯಕೆ ಇರುತ್ತದೆ. ಆದರೆ ಪುರು ಒಂದು ಮನೆ ನಿರ್ಮಿಸುವ ಕನಸನ್ನು ಕಾಣುತ್ತಿರುತ್ತಾನೆ. ಇವರಿಬ್ಬರು ಆಧುನಿಕ ಯುಗದಲ್ಲಿ ಮದುವೆಯ ನಂತರ ಬರುವ ಕಷ್ಟಗಳನ್ನು ಈ ಸಿನಿಮಾ ಮೂಲಕ ಪ್ರೇಕ್ಷಕರು ನೋಡಬಹುದು. ಚಿತ್ರವು ಬಲವಾದ ಸಾಮಾಜಿಕ ಸಂದೇಶವನ್ನು ಹೊಂದಿದೆ. == ಪಾತ್ರವರ್ಗ == ಮುಖ್ಯ ಪಾತ್ರಗಳು ಧ್ಯಾನ್ : ಪುರು ರಮ್ಯ: ಅಮೃತಾ ಪೋಷಕ ಪಾತ್ರಗಳು ಗಣೇಶ್: ವೆಂಕಿ ಮತ್ತು ಪುರುವಿನ ಸಹೋದ್ಯೋಗಿ ಮಂಡ್ಯಾ ರಮೇಶ್: ಡಾ ಸುಬ್ಬು, ಪುರು ಮತ್ತು ಅಮೃತಳಾ ಸ್ನೇಹಿತನಾಗಿ ಮುಖ್ಯಮಂತ್ರಿ ಚಂದ್ರು : ಪೋಲಿಸ್ ಇನ್ಸ್‌ಪೆಕ್ಟರ್ ಆಗಿ. ಭವ್ಯ : ಅಮೃತಳಾ ಅಮ್ಮನಾಗಿ ಅವಿನಾಶ್: ಪುರುವಿನ ಅಪ್ಪನಾಗಿ ಚಿತ್ರಾ ಶೈಣೈ ಯಶವಂತ ಸರದೇಶಪಾಂಡೆ: ನಾನಿಯಾಗಿ, ಪುರು ಮತ್ತು ಅಮೃತಳಾ ಸ್ನೇಹಿತನಾಗಿ ಮನದೀಪ್ ರಾಯ್: ಸೇಠ್ ಆಗಿ. ಕರಿ ಬಸಯ್ಯ ಗೌರವ ಪಾತ್ರ(ಗಳು) ಅಮಿತಾಭ್ ಬಚ್ಚನ್ == ಸಂಗೀತ == ಅಧಿಕೃತ ಧ್ವನಿಪಥವು ಆರು ಹಾಡುಗಳನ್ನು ಒಳಗೊಂಡಿದೆ. ಮನೋಮೂರ್ತಿ ಸಂಗೀತ ಸಂಯೋಜಿಸಿದ್ದು, ನಾಗತಿಹಳ್ಳಿ ಚಂದ್ರಶೇಖರ್ ಸಾಹಿತ್ಯವನ್ನು ಬರೆದಿದ್ದಾರೆ. == ಪ್ರಶಸ್ತಿಗಳು ಮತ್ತು ನಾಮನಿರ್ದೇಶನ == == ಉಲ್ಲೇಖಗಳು == == ಬಾಹ್ಯಕೊಂಡಿಗಳು ==