ಅಮೃತಪುರಿ ಮೂಲತಃ ಪರಯಕಡವು, ವಿಶ್ವಪ್ರಸಿದ್ಧ ಆಧ್ಯಾತ್ಮಿಕ ಗುರು, ಅಪ್ಪುಗೆಯ ಸಂತ ಮಾತಾ ಅಮೃತಾನಂದಮಯಿ ದೇವಿಯ ಮುಖ್ಯ ಆಶ್ರಮವಾಗಿದೆ . ಅವರನ್ನು ಅಮ್ಮಾ ಎಂದೂ ಕರೆಯುತ್ತಾರೆ. ಈ ಸ್ಥಳವು ಮಾತಾ ಅಮೃತಾನಂದಮಯಿ ಮಠದ ಅಂತರರಾಷ್ಟ್ರೀಯ ಪ್ರಧಾನ ಕಛೇರಿಯಾಗಿದೆ . ಇದು ಕೇರಳ ರಾಜ್ಯದಲ್ಲಿದೆ, ಅದು ಕರುಣಗಪ್ಪಳ್ಳಿಯಿಂದ 8 ಕಿ.ಮೀ. ಕೊಲ್ಲಂನಿಂದ 29 ಕಿ.ಮೀ, ತಿರುವನಂತಪುರಂ ಉತ್ತರಕ್ಕೆ 110 ಕಿಮೀ, ಮತ್ತು ಕೊಚ್ಚಿಯಿಂದ ದಕ್ಷಿಣಕ್ಕೆ 120 ಕಿ.ಮೀ. ದೂರದಲ್ಲಿದೆ. ಅಮೃತಪುರಿ ಎಂಬುದು ಆಶ್ರಮದ ಸ್ಥಳವನ್ನು ಈಗ ತಿಳಿದಿರುವ ಹೆಸರು. ಅಮೃತಪುರಿ 100 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ ಮತ್ತು ಇದು ಅಮೃತ ವಿಶ್ವ ವಿದ್ಯಾಪೀಠಮ್ (ಅಮೃತ ವಿಶ್ವವಿದ್ಯಾಲಯ)ನ ಐದು ಕ್ಯಾಂಪಸ್‌ಗಳಲ್ಲಿ ಒಂದಾಗಿದೆ ಹಾಗೂ ಅದರ ಪ್ರಧಾನ ಕಛೇರಿಯಾಗಿದೆ. "ಎಂಬ್ರೆಸಿಂಗ್ ದಿ ವರ್ಲ್ಡ್" ಎನ್ನುವುದು ಮಾತಾ ಅಮೃತಾನಂದಮಯಿ ಮಠದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾಗತಿಕ ದಾನಸಂಸ್ಥೆ ಆಗಿದೆ. == ಸಾರಿಗೆ == ಹತ್ತಿರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ - ಕರುಣಗಪ್ಪಳ್ಳಿ ಹತ್ತಿರದ ರೈಲು ನಿಲ್ದಾಣಗಳು - 1. ಕರುಣಗಪ್ಪಳ್ಳಿ (9 ಕಿಮೀ), 2. ಕಾಯಂಕುಲಂ (15 ಕಿಮೀ) ಹತ್ತಿರದ ಪುರಸಭೆಗಳು- 1. ಕರುಣಗಪ್ಪಳ್ಳಿ (9 ಕಿಮೀ) 2. ಕಾಯಂಕುಲಂ (14) ಕಿಮೀ) == ಉಲ್ಲೇಖಗಳು ==