ಅಮೃತಸರ ಭಾರತದ ಪಂಜಾಬ್ ರಾಜ್ಯದ ಒಂದು ಪ್ರಮುಖ ನಗರ. ಈ ಸ್ಥಳದಲ್ಲಿರುವ ಜಲಿಯನ್ ವಾಲಾ ಬಾಗ್ ಉದ್ಯಾನವನದಲ್ಲಿ ೧೯೪೦ರಲ್ಲಿ ಹತ್ಯಾಕಾಂಡ ನಡೆದಿತ್ತು. ಅಮೃತಸರ ಪೂರ್ವ ಪಂಜಾಬು ಪ್ರಾಂತ್ಯದಲ್ಲಿನ ಒಂದು ಮುಖ್ಯ ಪಟ್ಟಣ. == ಸ್ಥಾಪನೆ == ನಾಲ್ಕನೆಯ ಗುರು ರಾಮದಾಸನಿಂದ ಕ್ರಿ.ಶ.೧೫೭೪ ರಲ್ಲಿ ಸ್ಥಾಪನೆಯಾಯಿತು . ಪ್ರಸಿದ್ಧ ವ್ಯಾಪಾರ ಕೇಂದ್ರ. == ಜನಸಂಖ್ಯೆ == ಜನಸಂಖ್ಯೆ ಸು.1,132,761 (೨೦೧೧). ಸಿಖ್‍ರ ಯಾತ್ರಾಸ್ಥಳ ಮತ್ತು ಮತೀಯ ಕೇಂದ್ರಸ್ಥಾನ. ಇಲ್ಲಿ ಪ್ರಸಿದ್ಧವೆನಿಸಿದ ಚಿನ್ನದ ದೇವಸ್ಥಾನವಿದೆ. ಸಿಖ್‍ರ ವಿಶ್ವವಿದ್ಯಾನಿಲಯ ಇಲ್ಲಿ ಸ್ಥಾಪನೆಯಾಗಿದೆ. == ವಾಣಿಜ್ಯ == ಇಲ್ಲಿ ತಯಾರಾಗುವ ಕಾಶ್ಮೀರಿ ಶಾಲುಗಳು ಮತ್ತು ಜಮಖಾನಗಳು ಪ್ರಖ್ಯಾತಿ ಪಡೆದಿವೆ. == ಇತಿಹಾಸ == ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ ನಡೆದುದು (1919) ಈ ನಗರದಲ್ಲಿಯೆ. == ಛಾಯಾಂಕಣ == == ಇವನ್ನೂ ನೋಡಿ == ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ ಪಂಜಾಬ್ ರಾಜ್ಯ ಪಂಜಾಬಿ ಭಾಷೆ == ಉಲ್ಲೇಖಗಳು == == ಬಾಹ್ಯ ಸಂಪರ್ಕ == ವಿಕಿಟ್ರಾವೆಲ್ ನಲ್ಲಿ ಅಮೃತಸರ ಪ್ರವಾಸ ಕೈಪಿಡಿ (ಆಂಗ್ಲ) 2015-05-05 ವೇಬ್ಯಾಕ್ ಮೆಷಿನ್ ನಲ್ಲಿ.