ಅಮೇರಿಶಿಯಮ್ ಒಂದು ಕೃತಕವಾಗಿ ಸೃಷ್ಟಿಸಲ್ಪಟ್ಟ ಲೋಹ.ಸಂಕೇತ . ಪರಮಾಣು ಸಂಖ್ಯೆ 95. ಇದು ಒಂದು ವಿಕಿರಣಶೀಲಮೂಲವಸ್ತು. == ಸೃಜನೆ == ಅಮೆರಿಷಿಯಂ ಯುರೇನಿಯಂ ಅನಂತರದ, ಒಂದು ಮಾನವಸೃಷ್ಟಿತ ವಿಕಿರಣಶೀಲ ಮೂಲವಸ್ತು. ಇದನ್ನು ೧೯೪೪ರಲ್ಲಿ ಅಮೆರಿಕದ ವಿಜ್ಞಾನಿಗಳು ಪ್ಲುಟೋನಿಯಮ್ ಪರಮಾಣುಗಳನ್ನು ನ್ಯೂಟ್ರಾನ್ ಗಳಿಂದ ತಾಡಿಸಿ ಸೃಷ್ಟಿಸಿದರು. ಪ್ರಕೃತಿಯಲ್ಲಿ ಇದು ದೊರೆಯುವುದಿಲ್ಲ.(1845)ರಲ್ಲಿ ಆರ್.ಎ.ಜೇಮ್ಸ್, ಎಲ್.ಓ. ಮಾರ್ಗನ್ ಮತ್ತು ಜಿ.ಟಿ.ಸಿ. ಬೋರ್‍ರವರು ಈ ಮೂಲವಸ್ತುವನ್ನು ಕಂಡುಹಿಡಿದರು. == ಭೌತಿಕ ಗುಣಗಳು == ಈ ಮೂಲವಸ್ತುವಿಗೆ ಅನೇಕ ಸಮಸ್ಥಾನಿಗಳಿದ್ದರೂ (ಐಸೊಟೋಪ್ಸ್) ಪ್ರಮುಖವಾದುವು (241), (242) ಮತ್ತು (243). ಹೆಚ್ಚಾಗಿ ಅರ್ಧಾಯುಷ್ಯವುಳ್ಳ ಸಮಸ್ಥಾನಿ (243)ನ್ನು ಅದರ ಪರಮಾಣು ತೂಕವೆನ್ನಬಹುದು. ಸಮಸ್ಥಾನಿ (241)ರ ಅರ್ಧಾಯುಷ್ಯ (470) ವರ್ಷಗಳು ; (242)ರ ಅರ್ಧಾಯುಷ್ಯ (100) ವರ್ಷಗಳು ಮತ್ತು (243)ರ ಅರ್ಧಾಯುಷ್ಯ ಸುಮಾರು (7800) ವರ್ಷಗಳು. ಆವರ್ತನಪಟ್ಟಿಯ ಆ್ಯಕ್ಟಿನೈಡ್ಸ್ ಮಾಲೆಯಲ್ಲಿ (6)ನೆಯ ಸ್ಥಾನವನ್ನು ಪಡೆದಿದೆ. ವಿರಳಲೋಹಗಳೆನ್ನುವ ಲ್ಯಾಂಥನೈಡ್ಸ್ ಮಾಲೆಯಲ್ಲಿ ಆರನೆಯ ಮೂಲವಸ್ತು. == ನಾಮಕರಣ == ಯೂರೋಪಿಯಂಗೆ ಹೇಗೆ ಯೂರೋಪ್ ದೇಶದ ಹೆಸರನ್ನಿಟ್ಟರೋ ಅದೇ ರೀತಿ ಯುರೇನಿಯಂ ಅನಂತರದ ಹೆಚ್ಚು ಮೂಲವಸ್ತುಗಳನ್ನು ಸೃಷ್ಟಿಸಿದ ಅಮೆರಿಕ ದೇಶದ ನೆನಪಿಗಾಗಿ, ಆ್ಯಕ್ಟಿನೈಡ್ಸ್ ಮಾಲೆಯ ಆರನೆಯ ಮೂಲವಸ್ತುವಿಗೆ ಅಮೆರಿಷಿಯಂ ಎಂದು ಹೆಸರಿಸಿದರು. == ಉಪಯೋಗಗಳು == ಇದು ಹಲವಾರು ಸಂಯುಕ್ತ ವಸ್ತುಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ( ) – : – 2013-02-12 ವೇಬ್ಯಾಕ್ ಮೆಷಿನ್ ನಲ್ಲಿ.