ಅಮ್ರೋಹ ಉತ್ತರ ಪ್ರದೇಶ ರಾಜ್ಯದ ಅಮ್ರೋಹ ಜಿಲ್ಲೆ ಯ ಆಡಳಿತ ಕೇಂದ್ರ. === ಇತಿಹಾಸ === ಅಮ್ರೋಹದ ಹೆಸರು ಅಮ್ ಎಂದರೆ ಮಾವು ಎಂಬುದರಿಂದ ಬಂದಿದೆ. ಈ ಪ್ರದೇಶವು ಮಾವಿನ ಹಣ್ಣಿಗೆ ಪ್ರಸಿದ್ಧವಾಗಿದೆ.೧೨೬೬ರಲ್ಲಿ ಘಿಯಾಸುದ್ದೀನ್ ಬಾಲ್ಬನ್ ಇಲ್ಲಿಗೆ ದಂಡೆತ್ತಿ ಬಂದುದು ಈಗ ಲಭ್ಯವಿರುವ ಅಧಿಕೃತ ಪುರಾವೆ.ಅಲ್ಲಾವುದ್ದೀನ್ ಖಿಲ್ಜಿಯ ಕಾಲದಲ್ಲಿ ದಂಡೆತ್ತಿ ಬಂದ ಮಂಗೋಲರನ್ನು ಹಿಮ್ಮೆಟ್ಟಿಸಿದ ಸ್ಥಳ ಇದಾಗಿದೆ. === ಜನ-ಜೀವನ === ೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೧,೯೭,೧೩೫.ಪುರುಷರು:೧,೦೨,೮೦೪ ಮತ್ತು ಮಹಿಳೆಯರು ೪,೩೩೧. ಸಾಕ್ಷರತೆ:೬೩.೮೮% . ಮುಖ್ಯವಾಗಿ ಈ ನಗರವು ಮುಸ್ಲಿಂ ಸಮುದಾಯ ಹೆಚ್ಚಾಗಿರುವ ನಗರವಾಗಿದೆ. === ಆರ್ಥಿಕತೆ === ಮಾವು ಇಲ್ಲಿಯ ಮುಖ್ಯ ಬೆಳೆ ಮತ್ತು ಆರ್ಥಿಕ ಮೂಲ.ಕರಕುಶಲ ವಸ್ತುಗಳ ತಯಾರಿಕೆ,ಕುಂಬಾರಿಕೆ ಮುಂತಾದವುಗಳೂ ಪ್ರಾಮುಖ್ಯವಾದವುಗಳು. === ಬಾಹ್ಯ ಸಂಪರ್ಕ === .. 2013-07-26 ವೇಬ್ಯಾಕ್ ಮೆಷಿನ್ ನಲ್ಲಿ.